ಬಿಗ್ ಬಾಸ್ ಗೆ ಬಂದ ಪುಟ್ಟಗೌರಿ ‘ಅಜ್ಜಮಮ್ಮ’ರ ಛಲವಂತಿಕೆಯ ಜೀವನದ ಬಗ್ಗೆ ತಿಳಿಯಲೇ ಬೇಕು..!

1 min read
biggboss 8 kannada saakshatv.com

ಬಿಗ್ ಬಾಸ್ ಗೆ ಬಂದ ಪುಟ್ಟಗೌರಿ ‘ಅಜ್ಜಮಮ್ಮ’ರ ಛಲವಂತಿಕೆಯ ಜೀವನದ ಬಗ್ಗೆ ತಿಳಿಯಲೇ ಬೇಕು..!

ಇಂದಿನಿಂದ ಬಿಗ್ ಬಾಸ್ ಶೋ ನಲ್ಲಿ 100 ದಿನಗಳ ಆಟ ಶುರುವಾಗಲಿದೆ. ಈಗಾಗಲೇ 17 ಸ್ಪರ್ಧಿಗಳು ದೊಡ್ಮನೆ ಸೇರಾಗಿದೆ. ಪುಟ್ಟಗೌರಿ ಮದುವೆ ಧಾರವಾಹಿಯ ಅಜ್ಜಮ್ಮ ಖ್ಯಾತಿಯ ಚಂದ್ರಕಲಾ ಮೋಹನ್ ಬಿಗ್ ಬಾಸ್ ಮನೆಗೆ 12ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ.
ಅಜ್ಜಮ್ಮ ಅಂದ ತಕ್ಷಣ ಕಿನ್ನಡ ಕಿರುತೆರೆ ಪ್ರೇಕ್ಷಕರ ಕಣ್ಮುಂದೆ ಚಂದ್ರಕಲಾ ಅವರು ಬರುತ್ತಾರೆ. ಇನ್ನೂ ಕಮಲಿ ಸೇರಿದಂತೆ ಇನ್ನೂ ಹಲವಾರು ಧಾರಾವಾಹಿಗಳಲ್ಲಿ ಹೆಚ್ಚಾಗಿ ನೆಗೆಟಿವ್ ರೋಲ್ ಗಳಲ್ಲೇ ನಟಿಸಿ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿರುವ ನಟಿ ಚಂದ್ರಕಲಾ. ಈಗ ಬಿಗ್ ಬಾಸ್ ಮೂಲಕ ಜನರನ್ನ ರಂಜಿಸುತ್ತಿದ್ದಾರೆ.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಮುದ್ದು ಮುಖದ ಚೆಲುವೆ ದಿವ್ಯಾ ಯಾರು..? ಹಿನ್ನೆಲೆ ಏನು..?

ಚಂದ್ರಕಲಾ ಅವರ ಜೀವನದಲ್ಲಿ ಬಹಳವಾಗಿ ದುಃಖವನ್ನೇ ನೋಡಿದ್ಧಾರೆ ಎನ್ನಬಹುದು. ಅವರಿಗೆ ಬಹಳ ಸಣ್ಣ ವಯಸ್ಸಿಗೆ ಮದುವೆಯಾಗಿತ್ತು. ಶಾಲೆಯ ಮೆಟ್ಟಿಲೂ ಸಹ ಏರದ ಚಂದ್ರಕಲಾ ಇಂದು ಕಿರುತೆರೆಯಲ್ಲಿ ಕಮಾಲ್ ಮಾಡ್ತಿದ್ದಾರೆ ಅಂದ್ರೆ ಶ್ಲಾಘನೀಯವೇ. ತಮ್ಮ 10ನೇ ವಯಸ್ಸಿನಲ್ಲಿಯೇ ಕಂಪನಿ ನಾಟಕಗಳಲ್ಲಿ ನಟಿಸಲು ಆರಂಭಿಸಿದ್ದ ಚಂದ್ರಕಲಾ ನಟನೆಯನ್ನೇ ಮೈಗೂಡಿಸಿಕೊಂಡು ಇಂದು ಕಿರುತೆರೆಯಲ್ಲಿ ಮಿಂಚು ಹರಿಸುತ್ತಿದ್ದಾರೆ.
ಇನ್ನೂ ಬಿಗ್ ಬಾಸ್ ವೇದಿಕೆಯಲ್ಲಿ ಗ್ರ್ಯಾಂಡ್ ಓಪನಿಂಗ್ ದಿನ ಚಂದ್ರಕಲಾ ಅವರ ಬದುಕಿನ ಮತ್ತೊಂದು ಕರಾಳ ಸತ್ಯ ತಿಳಿದಿದೆ. ಅವರ ಇಬ್ಬರು ಮಕ್ಕಳ ಪೈಕಿ 2ನೇ ಮಗ ಅಪಘಾತಕ್ಕೆ ಈಡಾಗಿ ಬುದ್ಧಿಭ್ರಮಣೆ ಆಗಿದೆ. ಕಳೆದ 10 ವರ್ಷಗಳಿಂದಲೂ ಈಕೆ ಮಗನಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಷ್ಟ ಪಟ್ಟು ಸಾಕುತ್ತಿದ್ದಾರಂತೆ. ಇದು ಪ್ರೇಕ್ಷಕರ ಹೃದಯ ಮುಟ್ಟಿದೆ.

ಬಿಗ್ ಬಾಸ್ ಮೂಲಕ ಜನರನ್ನ ನಕ್ಕು ನಲಿಸಲಿದ್ಧಾರೆ ಮಜಾ ಭಾರತ ಖ್ಯಾತಿಯ ಪಾವಗಡ ಮಂಜು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd