ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ ಬಿಗ್ ಬಾಸ್ ನ ಸ್ಪರ್ಧಿ ಕಮಿಡಿಯನ್ ರಘು..!
ಇಂದಿನಿಂದ ಬಿಗ್ ಬಾಸ್ ಶೋ ನಲ್ಲಿ 100 ದಿನಗಳ ಆಟ ಶುರುವಾಗಲಿದೆ. ಈಗಾಗಲೇ 17 ಸ್ಪರ್ಧಿಗಳು ದೊಡ್ಮನೆ ಸೇರಾಗಿದೆ. 13ನೇ ಸ್ಪರ್ಧಿಯಾಗಿ ಹಾಸ್ಯ ಕಲಾವಿದ ರಘು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ ಯಾರೀತ.. ಇವರ ಹಿನ್ನೆಲೆ ಏನು..? ಇಷ್ಟು ದಿನ ಏನ್ ಮಾಡುತ್ತಿದ್ದರು…?
ಬಿಗ್ ಬಾಸ್ ಮನೆಗೆ 13ನೇ ಸ್ಪರ್ಧಿಯಾಗಿ ಸೋಶಿಯಲ್ ಮೀಡಿಯಾ ಸ್ಟಾರ್ ರಘು ಗೌಡ ಎಂಟ್ರಿಯಾಗಿದ್ದಾರೆ. ವೈನ್ ಸ್ಟೋರ್ ಎಂಬ ಯ್ಯೂಟ್ಯೂಬ್ ಚಾನಲ್ ಹೊಂದಿರುವ ಇವರು ಸಿಕ್ಕಾಪಟ್ಟೆ ಪಾಲೋವರ್ಸ್ ಗಳನ್ನ ಹೊಂದಿದ್ದಾರೆ. ರಘು ಗೌಡ ಅವರು ಕಾಮಿಡಿಯನ್ ಆಗಿ ಜನರನ್ನ ಹೆಚ್ಚು ಹೆಚ್ಚಾಗಿ ರಂಜಿಸುತ್ತಿದ್ದಾರೆ. ಆದ್ರೆ ಇವರು ಒಮ್ಮೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು, ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ರಘು ಗೌಡ ಅವರು ಬಳಿಕ ತನ್ನದೇ ಯೂಟ್ಯೂಬ್ ಚಾನಲ್ ಕ್ರಿಯೇಟ್ ಮಾಡಿ ತಮ್ಮ ಟ್ಯಾಲೆಂಟ್ ಮೂಲಕ ಜನರನ್ನ ರಂಜಿಸೋದಕ್ಕೆ ಶುರು ಮಾಡಿದ್ರು.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಮುದ್ದು ಮುಖದ ಚೆಲುವೆ ದಿವ್ಯಾ ಯಾರು..? ಹಿನ್ನೆಲೆ ಏನು..?
ಅಂದ್ಹಾಗೆ ಇವರು ಸೋಷಿಯಲ್ ಮೀಡಿಯಾ ಸ್ಟಾರ್ ಅಂತಾನೇ ಹೇಳಬಹುದು. ಫೇಸ್ ಬುಕ್, ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಇದ್ದಾರೆ. ವೈನ್ ಸ್ಟೋರ್ ಚಾನಲ್ ಗೆ 1.80 ಲಕ್ಷ ಜನರ ಅನುಯಾಯಿಗಳಾಗಿದ್ದಾರೆ. ರಘು ಗೌಡ ಅವರಿಗೆ ವಿವಾಹವಾಗಿದ್ದು, ಒಬ್ಬ ಮಗ ಇದ್ದಾನೆ. ರಘು ಪದವಿ ಓದುತ್ತಿದ್ದಾಗಲೇ ತಂದೆ ಮತ್ತು ತಾಯಿ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡರು. ಇದರಿಂದ ರಘು ಅವರು ಸಹ ಖಿನ್ನತೆಗೆ ಒಳಗಾಗಿದ್ದರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಕಾಮಿಡಿ ಮಾಡುತ್ತಾ ಬೇರೆಯವರನ್ನ ನಗಿಸುತ್ತಾ ತನ್ನ ನೋವನ್ನ ಮರೆಯುತ್ತಿದ್ದ ರಘು ಈಗ ಬಿಗ್ ಬಾಸ್ ಮೂಲಕ ಜನರನ್ನ ಹೇಗೆ ರಂಜಿಸಲಿದ್ದಾರೆ ನೋಡಬೇಕಾಗಿದೆ.