ಇವರೇ ನೋಡಿ ಈ ಬಾರಿ ‘ಬಿಗ್ ಬಾಸ್’ ಮನೆಗೆ ಎಂಟ್ರಿಯಾಗ್ತಿರೋರು..!
ಬೆಂಗಳೂರು: ಮತ್ತೆ ವೀಕೆಂಡ್ ನಲ್ಲಿ ಕಿಚ್ಚ , ಆಡಿಯನ್ಸ್ ಗಳ ಚಪ್ಪಾಳೆಗಳ ಸಪ್ಪಳ, ಬಿಗ್ ಸ್ಕ್ರೀನ್ ನಲ್ಲಿ ಸುದೀಪ್ ಜೊತೆ ಸ್ಪರ್ಧಿಗಳ ಇಂಟರ್ಯಾಕ್ಷನ್, ಕಾಮಿಡಿ, ಕಾಂಟ್ರವರ್ಸಿ , ಫೈಟ್ಸ್, ಎಂಟರ್ ಟೈನ್ ಮೆಂಟ್, ಗಲಾಟೆ, ಗದ್ದಲ ಇವೆಲ್ಲಾ ಸ್ಕ್ರೀನ್ ಮೇಲೆ ಪ್ರೇಕ್ಷಕರು ಕಣ್ತುಂಬಿಕೊಳ್ಳೋ ಟೈಮ್ ಹತ್ರ ಬಂದೇ ಬಿಡ್ತು. ಇವತ್ತು ಸಂಜೆ 6 ಗಂಟೆಗೆ ಕಿಚ್ಚ ಸುದೀಪ್ ಗ್ಯಾಂಡ್ ಆಗಿ ಕಂಟೆಸ್ಟ್ ಟೆಂಟ್ ಗಳನ್ನ ಕಲರ್ ಫುಲ್ ಆಗಿ ವೆಲ್ ಮಾಡ್ತಾರೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಕಾಯ್ತಾಯಿದ್ದಾರೆ. ಯಾರೆಲ್ಲಾ ಸ್ಪರ್ಧಿಗಳು ಬರುತ್ತಾರೆ. ಬಿಗ್ ಬಾಸ್ ಸೀಸನ್ 8 ಹೇಗಿರಲಿದೆ. ಈ ಎಲ್ಲಾ ಕಾತರತೆಗಳಿಗೆ ಸಂಜೆ 6 ಗಂಟೆಗೆ ತೆರೆಬೀಳಲಿದೆ.
ರೊಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡುವ ಬದ್ಧತೆ ನಮ್ಮದಲ್ಲ ಎಂದ ಬಾಂಗ್ಲಾದೇಶ
ಆದ್ರೆ ಕೆಲ ಮೂಲಗಳಿಂದ ಬಿಗ್ ಬಾಸ್ ನಲ್ಲಿ ಈ ಬಾರಿ ಯಾರೆಲ್ಲಾ ಇರಲಿದ್ದಾರೆ ಎಂಬ ಸಂಭಾವ್ಯ ಪಟ್ಟಿ ಸಿಕ್ಕಿದೆ. ಯಾರೆಲ್ಲಾ ಅರಮನೆಯಂತಿರುವ ಸೆರೆಮನೆಗೆ ಸೇರಿ 100 ದಿನ ಎಲಿಮಿನೇಶನ್ ನಿಂದ ಬಚಾವ್ ಆಗೋದಕ್ಕೆ ಸೆಣಸೇಟ ನಡೆಸ್ತಾರೆ.. ಹಾಗಾದ್ರೆ ಯಾರೆಲ್ಲಾ ಬರಬಹುದು. ಬಂದೇ ಬರುತ್ತಾರೆ ಅಂತ ಪಕ್ಕಾ ಆಗಿರೋದು ಎನ್ನುವುದನ್ನ ನೋಡೋದಾದ್ರೆ…
ಬ್ರಹ್ಮಗಂಟು ಧಾರವಾಹಿಯ ನಟಿ ಗೀತಾ ಭಾರತಿ ಭಟ್, ಹಾಸ್ಯ ಕಲಾವಿದ ಮಂಜುಪಾವಗಡ, ನಟಿ ನಿಧಿ ಸುಬ್ಬಯ್ಯ, ಹಿರಿಯ ನಟ ಶಂಕರ್ ಅಶ್ವಥ್, ಪುಟ್ಟಗೌರಿ ಖ್ಯಾತಿಯ ಚಂದ್ರಕಲಾ ಮೋಹನ್, ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ, ನಾಯಕ ಸುನಿಲ್ ರಾವ್ , ಹಾಡು ಕರ್ನಾಟಕ ಫೇಮ್ ವಿಶ್ವನಾಥ್ ಹಾವೇರಿ, ಅಮೃತವರ್ಷಿಣಿ ಧಾರಾವಾಹಿಯ ರಜನಿ, ಅಗ್ನಿಸಾಕ್ಷಿ ಧಾರವಾಹಿಯ ಸುಕೃತಾ ಹೀಗೆ ಹಲವರು ಈ ಬಾರಿ ಒಂಟಿ ಮನೆ ಸೇರಿಲಿರೋದು ಪಕ್ಕಾ ಎನ್ನಲಾಗ್ತಿದೆ.
ಇಂದು ( ಫೆ. 28) ಸಂಜೆ 6 ಗಂಟೆಯಿಂದ ಬಿಗ್ ಬಾಸ್ ಕನ್ನಡ ಸೀಸನ್ 8 ಆರಂಭವಾಗಲಿದೆ. ಇಂದು ರಾತ್ರಿ 11 ಗಂಟೆಯವರೆಗೆ ಬಿಗ್ ಬಾಸ್ ಕಾರ್ಯಕ್ರಮದ ಗ್ರ್ಯಾಂಡ್ ಒಪನಿಂಗ್ ನಡೆಯಲಿದೆ. ನಾಳೆಯಿಂದ ರಾತ್ರಿ 9.30 ಇಂದ ಬಿಗ್ ಬಾಸ್ ಪ್ರಾರಂಭವಾಗಲಿದೆ.

PUBG ಪಾರ್ಟ್ ನರ್ ಪ್ರೀತಿಗೆ ಬಿದ್ದ ವಿವಾಹಿತಿ : ಇನಿಯನ ನೋಡಲು ಬಂದಾಕೆಗೆ ಬಿಗ್ ಶಾಕ್.!