PUBG ಪಾರ್ಟ್ ನರ್ ಪ್ರೀತಿಗೆ ಬಿದ್ದ ವಿವಾಹಿತಿ : ಇನಿಯನ ನೋಡಲು ಬಂದಾಕೆಗೆ ಬಿಗ್ ಶಾಕ್.!

1 min read

PUBG ಪಾರ್ಟ್ ನರ್ ಪ್ರೀತಿಗೆ ಬಿದ್ದ ವಿವಾಹಿತಿ : ಇನಿಯನ ನೋಡಲು ಬಂದಾಕೆಗೆ ಬಿಗ್ ಶಾಕ್.!

ಉತ್ತರಪ್ರದೇಶ: ಸಾಮಾಜಿಕ ಜಾಲತಾಣಗಳ ಮೂಲಕ ಎಷ್ಟೋ ಜನ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಅನೇಕ ಉದಾಹರಣೆಗಳಿವೆ. ಅದರಂತೆ ಪಬ್ ಜಿ ಆನ್ ಲೈನ್ ಗೇಮ್ ನ ಹುಚ್ಚು ಹಿಡಿಸಿಕೊಂಡಿದ್ದ  ವಿವಾಹಿತ ಮಹಿಳೆಯೊಬ್ಬಳು ತನ್ನ ಸಹ ಆಟಗಾರನಾಗಿದ್ದ ದ್ವಿತೀಯ ಪಿಯು ವಿದ್ಯಾರ್ಥಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾಳೆ.  ಈ ಇಬ್ಬರು ಪರಸ್ಪರ ಫೋನ್​ ನಂಬರ್ ಶೇರ್ ಮಾಡಿಕೊಂಡಿದ್ದಾರೆ.

ಮದುವೆಗೆ ನಿರಾಕರಿಸಿದ ಯುವತಿಯ ಮೇಲೆ ನಿರಂತರ 8 ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ

ಸಾಲದಕ್ಕೆ ಹಿಮಾಚಲ ಪ್ರದೇಶದಿಂದ ಉತ್ತರ ಪ್ರದೇಶದ ವಾರಣಾಸಿಗೆ ತನ್ನ ಪ್ರಿಯಕರನನ್ನ ಹುಡುಕಿಕೊಂಡು ಹೋಗಿದ್ದಾಳೆ. ಆದ್ರೆ ಆಕೆ ವಾರಣಾಸಿ ತಲುಪುವ ವರೆಗೂ ತಾನು ಪ್ರೀತಿಸುತ್ತಿದ್ದವ ಕೇವಲ ಪಿಯುಸಿ ಹುಡುಗ ಎಂಬ ವಿಚಾರವೇ ಗೊತ್ತಿರಲಿಲ್ಲ. ಈ ವಿಷಯ ತಿಳಿಯುತ್ತಿದ್ದಂತೆ ಮಹಿಳೆ ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದಾಳೆ.  ಬಳಿಕ ತನ್ನ ತಂದೆ ತಾಯಿಗೆ ಕರೆ ಮಾಡಿ ದಯಮಾಡಿ ತನ್ನನ್ನು ಇಲ್ಲಿಂದ ವಾಪಸ್ ಕರೆದೊಯ್ಯವಂತೆ ಕೇಳಿಕೊಂಡಿದ್ದಾಳೆ.

ಅನ್ಯಕೋಮಿನ ಬಾಲಕಿಯನ್ನ ಪ್ರೀತಿ ಮಾಡಿದಕ್ಕೆ ಬಾಲಕನ ಮರ್ಮಾಂಗ ಕತ್ತರಿಸಿದ ಕಿಡಿಗೇಡಿಗಳು..!

ಆದ್ರೆ ಅಷ್ಟರಲ್ಲಾಗಲೇ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ತಮ್ಮ ಮಗಳು ಕಾಣೆಯಾಗುತ್ತಿದ್ದಂತೆ ಗಾಬರಿಗೊಂಡಿದ್ದ ಪೋಷಕರು ಮಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಸಿಗದೇ ಹೋದ ಬಳಿಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಳಿಕ ಮಗಳು ಕರೆ ಮಾಡಿದ ನಂತರ ಪೋಷಕರು ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಇದಾದ ಬಳಿಕ ವಾರಣಾಸಿ ಪೊಲೀಸರ ಸಹಾಯದಿಂದ ಆಕೆಯನ್ನು ಮರಳಿ ಹಿಮಾಚಲ ಪ್ರದೇಶಕ್ಕೆ ತೆರಳುವಂತೆ ಮಾಡಲಾಗಿದೆ.

ಮಾವನನ್ನ ನಂಬಿ ಹೈದ್ರಾಬಾದ್ ಗೆ ಬಂದಿದ್ದ ಸೊಸೆ ಮೇಲೆ ಅತ್ಯಾಚಾರ..!  

ಮಹಿಳೆ ಮೇಲೆ ಅತ್ಯಾಚಾರವೆಸಗಿ ಬೆಂಕಿ ಹಚ್ಚಿ ಪರಾರಿಯಾದ ತಂದೆ – ಮಗ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd