ಮಹಿಳೆ ಮೇಲೆ ಅತ್ಯಾಚಾರವೆಸಗಿ ಬೆಂಕಿ ಹಚ್ಚಿ ಪರಾರಿಯಾದ ತಂದೆ – ಮಗ

1 min read
Rape

ಮಹಿಳೆ ಮೇಲೆ ಅತ್ಯಾಚಾರವೆಸಗಿ ಬೆಂಕಿ ಹಚ್ಚಿ ಪರಾರಿಯಾದ ತಂದೆ – ಮಗ

ಅಪರಾಧಗಳ ಆಗರವಾಗುತ್ತಿರುವ ಉತ್ತರಪ್ರದೇಶದಲ್ಲಿ ಮತ್ತೊಂದು ಹೇಯ ಕೃತ್ಯ ಬೆಳಕಿಗೆ ಬಂದಿದೆ. ಕಾಮುಕ ತಂದೆಯೋರ್ವ ವಯಸ್ಸಿಗೆ ಬಂದ ತನ್ನ ಮಗನೊಂದಿಗೆ ಸೇರಿ 30 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಪೈಶಾಚಿಕತೆ ಮೆರೆದಿದ್ದಾರೆ. ಸಾಲದಕ್ಕೆ ಮಹಿಳೆಗೆ ಬೆಂಕಿ ಹಚ್ಚಿದ್ದಾರೆ ಈ ರಾಕ್ಷಸ ತಂದೆ ಮಗನ ಜೋಡಿ.

ಶ್ರೀಹರಿಕೋಟಾ: ಇಸ್ರೊದಿಂದ ಬ್ರೆಜಿಲ್‌ ನ ಚೊಚ್ಚಲ ಉಪಗ್ರಹ ಉಡಾವಣೆ ಯಶಸ್ವಿ..!

ತವರು ಮನೆಯಿಂದ ಸೀತಾಪುರದ ಮಿಶ್ರಿಖ್ ಪ್ರದೇಶದಲ್ಲಿರುವ ಗಂಡನ ಮನೆಗೆ ಮಹಿಳೆ ಹೋಗುತ್ತಿದ್ದ ವೇಳೆ ಆರೋಪಿಗಳಿದ್ದ ತಳ್ಳುವ ಗಾಡಿಯನ್ನು ಹತ್ತಿದ್ದಳು. ಈ ವೇಳೆ ಗಾಡಿಯಲ್ಲಿದ್ದ ತಂದೆ ಮಗ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಅದಾದ ಮೇಲೆ ಆಕೆಗೆ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ.

ಇತ್ತ ಬೆಂಕಿಯಲ್ಲಿ ಬೇಯುತ್ತಿದ್ದ ಮಹಿಳೆಯನ್ನು ನೋಡಿದ ಸ್ಥಳೀಯರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ದೇಹ ಭಾಗಗಶಃ ಸುಟ್ಟುಹೋಗಿದ್ದು ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ. ಬಳಿಕ ಈ ವಿಚಾರವನ್ನ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರೂ ಕಾಮುಕರನ್ನ ಅರೆಸ್ಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd