ಶ್ರೀಹರಿಕೋಟಾ: ಇಸ್ರೊದಿಂದ ಬ್ರೆಜಿಲ್‌ ನ ಚೊಚ್ಚಲ ಉಪಗ್ರಹ ಉಡಾವಣೆ ಯಶಸ್ವಿ..!

1 min read

ಶ್ರೀಹರಿಕೋಟಾ: ಇಸ್ರೊದಿಂದ ಬ್ರೆಜಿಲ್‌ ನ ಚೊಚ್ಚಲ ಉಪಗ್ರಹ ಉಡಾವಣೆ ಯಶಸ್ವಿ..!

ಶ್ರೀಹರಿಕೋಟಾ: ಇಸ್ರೊದಿಂದ ಬ್ರೆಜಿಲ್‌ನ ಚೊಚ್ಚಲ ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೊ ಸಂಸ್ಥೆ ಅಮೆಜಾನಿಯಾ-1 ಮತ್ತು ಇತರ 18 ಸ್ಯಾಟಲೈಟ್ ಗಳನ್ನು ಹೊತ್ತ ಪಿಎಸ್ ಎಲ್ ವಿ-ಸಿ51ನ್ನು ಉಡಾವಣಾ ವಾಹಕವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಚಂದ್ರಯಾನ ಯೋಜನೆಗೂ ಮುನ್ನ ಇಸ್ರೊ 18 ಉಪಗ್ರಹ ಹೊತ್ತ ಪಿಎಸ್ ಎಲ್ ವಿ-ಸಿ51 ಕ್ಷಿಪಣಿ ಯಶಸ್ವಿಯಾಗಿ ಬಾಹ್ಯಕಾಶಕ್ಕೆ ಜಿಗಿದಿದೆ. ಇನ್ನೂ ಇಸ್ರೊ ನಭಕ್ಕೆ ಹಾರಿಸಿದ 53ನೇ ಪಿಎಸ್ ಎಲ್ ವಿ ಯೋಜನೆ ಇದಾಗಿದೆ. ಈ ಬಾಹ್ಯಕಾಶ ನೌಕೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಮತ್ತು ಭಗವದ್ ಗೀತೆಯನ್ನು ಹೊತ್ತೊಯ್ದಿರೋದು ವಿಶೇಷ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೊ ಮುಖ್ಯಸ್ಥ ಕೆ ಶಿವನ್ ಅವರು ಬ್ರೆಜಿಲ್ ವಿನ್ಯಾಸಗೊಳಿಸಿ ಸಂಯೋಜಿಸಿರುವ ಮೊಟ್ಟಮೊದಲ ಸ್ಯಾಟಲೈಟ್ ನ್ನು ಯಶಸ್ವಿಯಾಗಿ  ಉಡಾಯಿಸಿರುವುದು  ನಿಜಕ್ಕೂ ತೀವ್ರ ಸಂತಸಕಾರಿ ವಿಚಾರ ಎಂದಿದ್ದಾರೆ.

https://twitter.com/isro/status/1365888713092308997/photo/1

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಮತ್ತಷ್ಟು ‌ಅಗ್ಗ !

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd