ಅನ್ಯಕೋಮಿನ ಬಾಲಕಿಯನ್ನ ಪ್ರೀತಿ ಮಾಡಿದಕ್ಕೆ ಬಾಲಕನ ಮರ್ಮಾಂಗ ಕತ್ತರಿಸಿದ ಕಿಡಿಗೇಡಿಗಳು..!

1 min read

ಅನ್ಯಕೋಮಿನ ಬಾಲಕಿಯನ್ನ ಪ್ರೀತಿ ಮಾಡಿದಕ್ಕೆ ಬಾಲಕನ ಮರ್ಮಾಂಗ ಕತ್ತರಿಸಿದ ಕಿಡಿಗೇಡಿಗಳು..!

ಕಲಬುರಗಿ:  ಅನ್ಯಕೋಮಿನ ಬಾಲಕಿಯನ್ನ ಪ್ರೀತಿಸುತ್ತಿದ್ದ 15 ವರ್ಷದ ಬಾಲಕನಿಗೆ ಚಿತ್ರಹಿಂಸೆ ಕೊಟ್ಟು ಆತನ ಮರ್ಮಾಂಗ ಕತ್ತರಿಸಿ ಕೊಲೆ ಮಾಡಿರುವ ಹೇಯ ಕೃತ್ಯ ಕಲಬುರಗಿಯ ನರಿಬೋಳ ಗ್ರಾಮದಲ್ಲಿ ನಡೆದಿದೆ. ಇನ್ನೂ ಈ ಕೃತ್ಯ ಇತ್ತೀಚೆಗೆ ರಿಲೀಸ್ ಆದ ಸಿನಿಮಾದ ಮಾದರಿಯನ್ನೇ ಹೋಲುವಂತಿದೆ.

ಬಾಲಕಿಯ ತಾಯಿ ಮತ್ತು ಆಕೆಯ ಪರಿಚಯಸ್ಥ ಮಹಿಬೂಬ್ ಎಂಬಾತ ಅನೇಕ ಬಾರಿ ಬಾಲಕನಿಗೆ ಬುದ್ಧಿವಾದ ಹೇಳಿದ್ದರೂ, ಬಾಲಕಿಯಿಂದ ದೂರವಿರುವಂತೆ ಬುದ್ಧಿವಾದ ಹೇಳಿದ್ದರು. ಆದ್ರೆ ಬಾಲಕ ಮಾತು ಕೇಳಿರಲಿಲ್ಲ. ಹೀಗಾಗಿ ಬಾಲಕನನ್ನು 3 ದಿನಗಳ ಹಿಂದೆ ಅಪಹರಿಸಿದ ಮಹಿಬೂಬ್ ಆತನ ಮರ್ಮಾಂಗ ಕತ್ತರಿಸಿ ಮೃತದೇಹವನ್ನು ಚೀಲಕ್ಕೆ ತುಂಬಿ ಭೀಮಾನದಿಗೆ ಎಸೆದಿದ್ದಾನೆ. ಇತ್ತ ಬಾಲಕನ ಕುಟುಂಬದವರು ಮಗ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು. ಪೊಲೀಸರು ನಾಪತ್ತೆ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದರು.

ಮಾವನನ್ನ ನಂಬಿ ಹೈದ್ರಾಬಾದ್ ಗೆ ಬಂದಿದ್ದ ಸೊಸೆ ಮೇಲೆ ಅತ್ಯಾಚಾರ..!  

ಇತ್ತ ನದಿಯಲ್ಲಿ ಚೀಲ ತೇಲಿ ಬಂದಿದ್ದನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಪರಿಶೀಲನೆ ನಡೆಸಿದ ಬಳಿಕ ಬಾಲಕನ ಸಾವಿನ ಸತ್ಯ ಬಯಲಾಗಿದೆ.  ಬಳಿಕ ಮಹಿಬೂಬ್ ಎಳೆತಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರೋದಾಗಿ ಆತ ಒಪ್ಪಿಕೊಂಡಿದ್ದಾನೆ. ಬಳಿಕ ಆತನನ್ನ ಪೊಲೀಸರು ಬಂಧಿಸಿದ್ದಾರೆ. ಬಾಲಕನ ಮೃತದೇಹ ಕಂಡು ಬಂದ ನಂತರ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಮಾವನನ್ನ ನಂಬಿ ಹೈದ್ರಾಬಾದ್ ಗೆ ಬಂದಿದ್ದ ಸೊಸೆ ಮೇಲೆ ಅತ್ಯಾಚಾರ..!  

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಮತ್ತಷ್ಟು ‌ಅಗ್ಗ !

ಮಹಿಳೆ ಮೇಲೆ ಅತ್ಯಚಾರವೆಸಗಿ ಬೆಂಕಿ ಹಚ್ಚಿ ಪರಾರಿಯಾದ ತಂದೆ – ಮಗ

ಶ್ರೀಹರಿಕೋಟಾ: ಇಸ್ರೊದಿಂದ ಬ್ರೆಜಿಲ್‌ ನ ಚೊಚ್ಚಲ ಉಪಗ್ರಹ ಉಡಾವಣೆ ಯಶಸ್ವಿ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd