BIGG BOSS 8: ಅತ್ಯುತ್ತಮ ಆಟಗಾರನ ಮೆಡೆಲ್ ಹಿಡಿದು ಭಾವುಕರಾದ ಲ್ಯಾಜ್ ಮಂಜು..!  

1 min read

BIGG BOSS 8: ಅತ್ಯುತ್ತಮ ಆಟಗಾರನ ಮೆಡೆಲ್ ಹಿಡಿದು ಭಾವುಕರಾದ ಲ್ಯಾಜ್ ಮಂಜು..!

ಬಿಗ್ ಬಾಸ್ 8ನೇ ಆವೃತ್ತಿಯಲ್ಲಿ ಮೊದಲ ವಾರವೇ ಮನೆಯಿಂದ ಧನಶ್ರೀ ಔಟ್ ಆಗಿದ್ದು, ಇನ್ನೇನು 2ನೇ ವಾರವೂ ಮುಕ್ತಾ ಹಂತಕ್ಕೆ ತಲುಪಿದೆ. ಈ ನಡುವೆ ಟಾಸ್ಕ್ ಗಳು, ಸ್ಪರ್ಧಿಗಳ ನಡುವಿನ ಕಿತ್ತಾಟ ಎಲ್ಲವೂ ರಂಗೇರುತ್ತಿದೆ. ಹೀಗಿರೋವಾಗ ಬಿಗ್ ಬಾಸ್ ಈ ವಾರ ಆಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರನ್ನ, ಜೊತೆಗೆ ಕಳಪೆ ಪ್ರದರ್ಶನ ನೀಡಿದವರನ್ನೂ ಆಯ್ಕೆ ಮಾಡಿ ಎಂದು ಮನೆಯವರಿಗೆ ಅವಕಾಶ ಕೊಟ್ಟಿತ್ತು. ಉತ್ತಮ ಪ್ರದರ್ಶನದಲ್ಲಿ ಬಹುತೇಕ ಎಲ್ಲಾ ವೋಟ್ ಗಳು ಲ್ಯಾಗ್  ಮಂಜುಗೆ ಸಿಕ್ಕಿತ್ತು. ಕೊನೆಗೆ ಮೆಡೆಲ್ ಪಡೆದ ಮಂಜು ಭಾವುಕರಾಗಿ ಮಾತನಾಡಿ ಮನೆಯ ಸದಸ್ಯರಿಗೆ ಧನ್ಯವಾದಗಳನ್ನ ತಿಳಿಸುತ್ತಾ ಇದು ನನ್ನ ಜೀವನದ ಮೊದಲನೇ ಮೆಡೆಲ್ ಎಂದು ಸಂತಸ ಹಂಚಿಕೊಂಡ್ರು.

ಹೌದು.. ಮನೆಯ ಎಲ್ಲ ಸದಸ್ಯರು ಚರ್ಚಿಸಿ ಒಮ್ಮತದಿಂದ ನಿರ್ಧರಿಸಬೇಕು ಹಾಗೂ ಮನೆಯವರ ತೀರ್ಮಾನವನ್ನು ಕ್ಯಾಪ್ಟನ್ ರಾಜೀವ್ ಸೂಕ್ತ ಕಾರಣಗಳೊಂದಿಗೆ ತಿಳಿಸಬೇಕು ಎಂದು ಬಿಗ್ ಬಾಸ್ ಸೂಚಿಸಿದರು.

ಲ್ಯಾಗ್ ಮಂಜು ಪರ ಓಟ್ ಹಾಕಿದವರು

ಅದರಂತೆ  ಮೊದಲು ಗೀತಾ ಅವರು ಮಾತನಾಡಿ ಲ್ಯಾಗ್ ಮಂಜುರವರ ಹೆಸರನ್ನು ಸೂಚಿಸಿದರು. ಮಂಜು ನಮ್ಮೆಲ್ಲರನ್ನು ಬಹಳ ನಗಿಸುತ್ತಾ ನಮ್ಮನ್ನ ಎಂಟರ್ ಟೈನ್‍ ಮಾಡ್ತಾರೆ ಎಂದಿದ್ದಾರೆ.

ಬಳಿಕ ಚಂದ್ರಕಲಾ ಸಹ ಲ್ಯಾಗ್ ಮಂಜು ಅವರ ಹೆಸರನ್ನ ಹೇಳುತ್ತಾ ಬಿಗ್ ಬಾಸ್ ಮನೆಯಲ್ಲಿ ನಾವೆಲ್ಲ ಒಂದು ಕುಟುಂಬದವರ ರೀತಿಯಲ್ಲಿ ಇದ್ದೇವೆ ಎಂದರೆ ಅದಕ್ಕೆ ಕಾರಣ ಮಂಜು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನೂ ದಿವ್ಯಾ ಉರುಡುಗ ಕೂಡ ಮಂಜು ಅವರ ಹೆಸರನ್ನೇ ಸೂಚಿಸಿ ಕ್ಯಾಪ್ಟನ್ ಸ್ಥಾನವನ್ನು ಮಂಜು ಅವರು ಬಹಳ ಚೆನ್ನಾಗಿ ನಿಭಾಯಿಸಿದರು ಎಂದಿದ್ದಾರೆ. ವಿಶ್ವನಾಥ್ ಹಾವೇರಿ ಕೂಡ ಮಂಜು ಹೆಸರನ್ನು ಸೂಚಿಸಿ, ಎಂಟರಟೈನ್ ಮೆಂಟ್ ಅನ್ನೇ ಕಾರಣವಾಗಿ ಕೊಟ್ಟಿದ್ದಾರೆ.

ಇದೇ ವೇಳೆ ರೇಸ್ ಅರವಿಂದ್ ಕೂಡ ಮಂಜು ಹೆಸರನ್ನು ಸೂಚಿಸಿ ಟಾಸ್ಕ್‍ ನಲ್ಲಿ  ಆಗಲಿ, ಕೆಲಸದಲ್ಲಿಯೇ ಆಗಲಿ ಒಂದು ಒಳ್ಳೆಯ ಸಪೋರ್ಟಿವ್ ರೋಲ್ ಮಂಜು ಎಂದಿದ್ದಾರೆ.

ಇನ್ನೂ ದಿವ್ಯಾ ಸುರೇಶ್ ಸಹ ಮಂಜು ಅವರ ಹೆಸರನ್ನೇ ತೆಗೆದುಕೊಳ್ಳುತ್ತಾ  ಟಾಸ್ಕ್ ಆಗಲಿ ಅಥವಾ ನಮ್ಮನ್ನೆಲ್ಲಾ ನಿಭಾಯಿಸುವ ರೀತಿ ಅವರಿಗೆ ಚನ್ನಾಗಿ ಗೊತ್ತಿದೆ ಎಂದಿದ್ದಾರೆ.

ರಾಜೀವ್ ಓಟ್ ಸಹ ಲ್ಯಾಗ್ ಮಂಜು ಪರ ಇತ್ತು.

ಅರವಿಂದ ಪರ ಓಟ್ ಮಾಡಿದ ಸದಸ್ಯರು

ಶುಭ ಪೂಂಜಾ ಹಾಗೂ ಮಂಜು ಅವರು ರೇಸರ್ ಅರವಿಂದ್ ಉತ್ತಮವಾಗಿ ಪ್ರದರ್ಶನ ತೋರಿರೋದಾಗಿ ಅವರ ಹೆಸರನ್ನ ಸೂಚಿಸಿದ್ರು.

ರಾಜೀವ್ ಪರ ಓಟ್ ಮಾಡಿದ ಸದಸ್ಯರು

ವೈಷ್ಣವಿ ಗೌಡ, ಶಂಕರ್, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ, ರಘು ಅವರು ರಾಜೀವ್ ಹೆಸರನ್ನ ಆಯ್ಕೆ ಮಾಡಿದರು. ಉತ್ತಮವಾಗಿ ಪ್ರದರ್ಶನ ತೋರುತ್ತಿರೋದಾಗಿ ಅಭಿಪ್ರಾಯಪಟ್ಟರು.

ಪ್ರಶಾಂತ್ ಸಂಬರಗಿ ಪರ ಓಟ್ ಮಾಡಿದ ಸದಸ್ಯರು

ಬ್ರೋ ಗೌಡ ಹಾಗೂ ನಿರ್ಮಲ ಪ್ರಶಾಂತ್ ಸಂಬರಗಿಯ ಹೆಸರನ್ನು ಸೂಚಿಸಿದರು.

ಮನೆಯ ಸದಸ್ಯರ ಅಭಿಪ್ರಾಯವನ್ನ ಗಮಿನಿಸಿದ ರಾಜೀವ್ ಅವರು ಬಳಿಕ ತಮ್ಮ ವೋಟ್ ಅನ್ನ ಸಹ ಮಂಜು ಗೆ ನೀಡಿದರು.  ನಾನು ನನ್ನ ಕರ್ತವ್ಯವನ್ನು ನಿಭಾಯಿಸುತ್ತಿದ್ದೇನೆ. ಹಾಗಾಗಿ ಮನೆಯನ್ನು ಮನರಂಜಿಸುತ್ತಿರುವ ಮಂಜುಗೆ ಈ ವಾರದ ಉತ್ತಮ ಆಟಗಾರರೆಂದು ಆಯ್ಕೆ ಮಾಡುತ್ತೇನೆ ಎಂದು ಹೇಳುತ್ತಾ ಶುಭಾಶಯ ತಿಳಿಸಿ ಮೆಡಲ್ ನೀಡಿದರು.

ಈ ವೇಳೆ ಮನೆ ಮಧಿ ಜೋರಾಗಿ ಶಿಳ್ಳೆ ಮತ್ತು ಚಪ್ಪಾಳೆಯನ್ನು ಹೊಡೆಯುತ್ತಾ ಮಂಜುರವರ ಹೆಸರನ್ನು ಕೂಗುತ್ತಾರೆ.

ಇನ್ನೂ ಈ ವಾರ ಕಳಪೆ ಪ್ರದರ್ಶನ ತೋರಿದ ಸ್ಪರ್ಧಿಯಾಗಿ ಮನೆಯವರಿಂದ ಬ್ರೋ ಗೌಡ ಆಯ್ಕೆಯಾದರು.  ಬಳಿಕ ಬ್ರೋ ಗೌಡ  ಬಿಗ್ ಬಾಸ್ ಆದೇಶದಂತೆ  ಜೈಲು ಸೇರಿದ್ರು.

ಸೌಂಡಿಂಗ್ ರಾಕೆಟ್ (ಆರ್ ಹೆಚ್ -560) ಉಡಾವಣೆ

ಅಂಬಾನಿ ಬಾಂಬ್ ಬೆದರಿಕೆ ಪ್ರಕರಣ- ಜೈಶ್-ಉಲ್-ಹಿಂದ್ ಬಳಸಿದ ಮೊಬೈಲ್ ವಶಪಡಿಸಿಕೊಂಡ ತಿಹಾರ್ ಜೈಲಿನ ಅಧಿಕಾರಿಗಳು

ಶಕ್ತಿಶಾಲಿ ಶನೈಶ್ಚರ ದೇವನನ್ನು ನೆನೆಸುತ್ತಾ ಈ ಶನಿವಾರದ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಿ..!!

ಬೇಸಿಗೆಯ ಬಿರು ಬಿಸಿಲಿಗೆ ತಂಪಾದ ಸಾಗು/ಸಬ್ಬಕ್ಕಿ ಖೀರು

ಕಡಲೆಹಿಟ್ಟಿನ ಆರೋಗ್ಯ ಪ್ರಯೋಜನಗಳು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd