ಸೌಂಡಿಂಗ್ ರಾಕೆಟ್ (ಆರ್ ಹೆಚ್ -560) ಉಡಾವಣೆ

1 min read
sounding rocket

ಸೌಂಡಿಂಗ್ ರಾಕೆಟ್ (ಆರ್‍ಹೆಚ್ -560) ಉಡಾವಣೆ

ನವದೆಹಲಿ : ಇಸ್ರೋ ಶ್ರೀಹರಿಕೋಟದ ಸತೋಶ ಧವಮ್ ಬಾಹ್ಯಾಕಾಶ ಕೇಂದ್ರದಿಂದ ಸೌಂಡಿಂಗ್ ರಾಕೆಟ್ ಆರ್ ಹೆಚ್ 560 ಅನ್ನು ಉಡಾವಣೆ ಮಾಡಿದೆ.

ಇದು ತಟಸ್ಥ ಮಾರುತಗಳು ಮತ್ತು ಪ್ಲಾಸ್ಮಾ ಡೈನಾಮಿಕ್ಸ್‍ನಲ್ಲಿನ ವರ್ತನೆಗಳ ವ್ಯತ್ಯಾಸಗಳನ್ನು ಅಧ್ಯಯನ ನಡೆಸುವ ಸಲುವಾಗಿ ಕೆಲಸ ಮಾಡಲಿದೆ ಎಂದು ಇಸ್ರೋ ತನ್ನ ಅಧಿಕೃತ ಟ್ವೀಟ್ ಖಾತೆಯಲ್ಲಿ ಮಾಹಿತಿ ನೀಡಿದೆ.

sounding rocket

ಈ ಸೌಂಡಿಂಗ್ ರಾಕೆಟ್‍ಗಳು ಒಂದು ಅಥವಾ ಎರಡು-ಹಂತದ ಘನ ಪ್ರೊಪೆಲ್ಲಂಟ್ ರಾಕೆಟ್ ಗಳಾಗಿದ್ದು, ಇವುಗಳನ್ನು ವಾತಾವರಣದ ಮೇಲಿನ ಪ್ರದೇಶಗಳನ್ನು ಪರೀಕ್ಷಿಸಲು ಮತ್ತು ಬಾಹ್ಯಾಕಾಶ ಸಂಶೋಧನೆಗೆ ಬಳಸಲಾಗುತ್ತದೆ.

1965 ರಿಂದ ಸ್ಥಳೀಯವಾಗಿ ತಯಾರಿಸಿದ್ದ ಸೌಂಡಿಂಗ್ ರಾಕೆಟ್‍ಗಳನ್ನು ಉಡಾಯಿಸಲು ಪ್ರಾರಂಭಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd