Bigg boss kannada: ಮುಂದಿನ ವಾರಾಂತ್ಯಕ್ಕೆ ಕಿಚ್ಚ ಸುದೀಪ್ ಗೈರು ಸಾಧ್ಯತೆ…
ಕಿರುತೆರೆಯ ಬಿಗ್ ಬಾಸ್ ಮೂರು ವಾರಗಳನ್ನಪೂರೈಸಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಕಿಚ್ಚ ಸುದೀಪ್ ಪ್ರತಿ ವಾರಾತ್ಯಂದಲ್ಲಿ ಸ್ಪರ್ದಿಗಳೊಂದಿಗೆ ಮಾತನಾಡುತ್ತಾ ಹುರಿದುಂಬಿಸುತ್ತಿದ್ದಾರೆ. ಕೆಲವರನ್ನ ಹೊಗಳಿ ತಪ್ಪು ಮಾಡಿದವರಿಗೆ ಬೈದು ಸರಿದಾರಿಗೆ ತರುತ್ತಿದ್ದಾರೆ.
ಆದರೆ ಮೂರನೇ ವಾರದ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಸಿಕ್ಕಾಪಟ್ಟೆ ಗರಂ ಆಗಿಬಿಟ್ಟಿದ್ದರು.. ಆರ್ಯವರ್ಧನ್ ಗುರೂಜಿ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಕೆಂಡಾಮಂಡಲರಾಗಿದ್ದರು.. ಅಲ್ದೇ ರೂಪೇಶ್ ಸಾನ್ಯಾಗೆ ಲಿಮಿಟ್ ಕ್ರಾಸ್ ಮಾಡಬೇಡಿ ಎಂದೂ ಎಚ್ಚರಿಸಿದ್ದರು..
ಇದೀಗ ಈ ವಾರ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡಲು ಕಿಚ್ಚ ಸುದೀಪ್ ಬರುವುದಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಅಭಿಮಾನಿಗಳಿಗೆ ಒಂದೆಡೆ ಬೇಸರ , ಶಾಕ್ ಆದ್ರೆ , ಯಾಕೆ ಎಂಬ ಪ್ರಶ್ನೆಗಳು , ಅನುಮಾನಗಳು ಹುಟ್ಟಿಕೊಂಡಿವೆ.
ಹಾಗಂತ ಯಾರದ್ದೋ ಮೇಲೆ ಬೇಸರದಿಂದಾಗಲಿ , ಮತ್ತೊಂದು ಕಾರಣದಿಂದಾಗಲಿ ಕಿಚ್ಚ ಅಂದು ಗೈರಾಗುತ್ತಿಲ್ಲ.. ಬದಲಾಗಿ ಅಕ್ಟೋಬರ್ 21 ರಂದು ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ( ಸಾಕ್ಷ್ಯ ಚಿತ್ರ) ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್ ಇದ್ದು ಇಲ್ಲಿ ಕಿಚ್ಚ ಸುದೀಪ್ ಭಾಗವಹಿಸುತ್ತಿದ್ದಾರೆ. ಅದೇ ಕಾರಣಕ್ಕೆ ಬಿಗ್ ಬಾಸ್ ನ ವಾರದ ಕಾರ್ಯಕ್ರಮದಲ್ಲಿ ಅವರು ಇರುವುದಿಲ್ಲ ಎನ್ನಲಾಗ್ತಿದೆ.
ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯಾಗಲಿ, ಬಿಗ್ ಬಾಸ್ ಕನ್ನಡ ತಂಡವಾಗಲಿ, ಕಿಚ್ಚ ಸುದೀಪ್ ಆಗಲಿ ಅಧಿಕೃತ ಮಾಹಿತಿ ನೀಡಿಲ್ಲ, ಪ್ರತಿಕ್ರಿಯೆ ಅಥವಾ ಸ್ಪಷ್ಟನೆ ಕೊಟ್ಟಿಲ್ಲ.
Bigg Boss Kannada: Kiccha Sudeep likely to miss next weekend…