BiggBoss Kannada: ಮನೆಯಿಂದ ಹೊರನಡೆಯಲು ಬ್ಯಾಗ್ ಸಮೇತ ಸಿದ್ದರಾದ ರೂಪೇಶ್ ರಾಜಣ್ಣ…
ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ನಡುವೆ ಜಗಳವಾಗುತ್ತಲೇ ಇರುತ್ತೆ. ಇದೀಗ ಕನ್ನಡ ರಾಜ್ಯೋತ್ಸವದ ದಿನದಂದೇ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ನಡುವೆ ದೊಡ್ಡ ಗಲಾಟೆ ನಡೆದಿದ್ದು ಸಿಟ್ಟಲ್ಲಿ ಸ್ಯೂಟ್ ಕೇಸ್ ಹಿಡಿದು ರಾಜಣ್ಣ ಮನೆಯಿಂದ ಹೊರಹೋಗಲು ಸಿದ್ಧರಾಗಿದ್ದಾರೆ..
ಬ್ಯಾಗ್ ಎತ್ತಿಕೊಂಡು ಮನೆಯಿಂದ ತಮ್ಮನ್ನು ಕಳುಹಿಸುವಂತೆ ಮನೆಯ ಮುಖ್ಯ ಬಾಗಿಲಿನವರೆಗೂ ಬಂದಿದ್ದಾರೆ.
ಅನುಪಮಾ ಗೌಡ ಅವರ ಮುಂದಾಳತ್ವದಲ್ಲಿ ಕ್ಯಾಪ್ಟನ್ಸಿ ಆಯ್ಕೆಯ ಟೆಸ್ಟ್ ನಡೆದಿತ್ತು. ಗಾರ್ಡನ್ ಏರಿಯಾದಲ್ಲಿ ಬಜರ್ ಒಂದನ್ನು ಇಟ್ಟಿದ್ದು, ಮೊದಲು ಈ ಬಜರ್ ಯಾರು ಒತ್ತುತ್ತಾರೋ, ಅವರು ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆ ಆಗಲಿದ್ದಾರೆ ಎನ್ನುವುದು ನಿಯಮವಾಗಿತ್ತು. ಅದರಂತೆ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಓಡುತ್ತಾ ಬಂದು ಇಬ್ಬರೂ ಒಂದೇ ವೇಳೆಗೆ ಬಜರ್ ಮುಟ್ಟಿದರು. ಆದ್ರೆ ಯಾರು ಮೊದಲು ಮುಟ್ಟಿದ್ದು ಎಂಬ ಗೊಂದಲ ಎದುರಾಯಿತು.
ಮೊದಲು ಬಜರ್ ಮುಟ್ಟಿದ್ದು ನಾನೇ ಎಂದು ಸಂಬರ್ಗಿ ಕೈ ಎತ್ತಿದರೆ, ನಾನು ಮುಟ್ಟಿದ್ದು ಎಂದು ರೂಪೇಶ್ ರಾಜಣ್ ವಾದಿಸುತ್ತಾರೆ.. ಸಂಬರ್ಗಿಯೇ ಮೊದಲು ಮುಟ್ಟಿದ್ದು ಎಂದು ಅನುಪಮಾ ಗೌಡ ಹೇಳಿದ್ದೇ ತಡ ರೊಚ್ಚಿಗೆದ್ದ ರೂಪೇಶ್ ರಾಜಣ್ಣ ಅನುಪಮ ಮೇಲೆ ಸಿಟ್ಟಾಗಿದ್ದಾರೆ.. ಈ ರೀತಿಯಾದರೆ ನಾನು ಮನೆಯಲ್ಲಿ ಇರೋದೇ ಇಲ್ಲ ಎನ್ನುತ್ತಾ ಬ್ಯಾಗ್ ಸಮೇತ ಹೊರಟು ನಿಂತಿದ್ದಾರೆ..
ನಾನು ಮನೆಯಿಂದ ಹೊರ ಹೋಗಬೇಕು, ದಯವಿಟ್ಟು ಬಾಗಿಲು ತೆಗೆಯಿರಿ ಎಂದು ಬಿಗ್ ಬಾಸ್ ಅವರನ್ನು ಮನವಿ ಮಾಡಿಕೊಂಡಿದ್ದಾರೆ.. ಹೇಗೋ ಅವರನ್ನ ರೂಪೇಶ್ , ಸಾನ್ಯಾ ಸೇರಿ ಸಮಾಧಾನಪಡಿಸಿದ್ಧಾರೆ.
Bigg Boss Kannada: Rupesh Rajanna ready to walk out of the house with a bag…