‘ನಾನು ಒಳ್ಳೆಯವರಿಗೆ ಒಳ್ಳೆಯವನು ಕೆಟ್ಟವರಿಗೆ ದುಷ್ಟ’ – ದಿವ್ಯಾರನ್ನ ಕೆಣಕುತ್ತಲೇ ಇರುವ ಸಂಬರಗಿ
ಕೊರೊನಾ ಲಾಕ್ ಡೌನ್ ನಿಂದಾಗಿ ಅರ್ಧಕ್ಕೆ ನಿಂತು ಹೋಗಿದ್ದ ಬಿಗ್ ಬಾಸ್ ಕನ್ನಡದ ಸೀಸನ್ 8 ರಿಯಾಲಿಟಿ ಶೋ ಮತ್ತೆ ಆರಂಭವಾಗಿದೆ.. ಈಗಾಗಲೇ ಹೊರಗಡೆ ಹೋಗಿದ್ದ ಸ್ಪರ್ಧಿಗಳು ಯಾರು ಹೇಗೆ, ಹಿಂದೆ ನಮ್ಮ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಇದನ್ನೆಲ್ಲಾ ನೋಡಿಕೊಂಡು , ತಪ್ಪು ಸರಿಪಡಿಸಿಕೊಳ್ಳುವುದಕ್ಕೆ ಮಾಡಬೇಕಾದ ಸ್ಟ್ರಾಟರ್ಜಿ ಏನು ಇದನ್ನೆಲ್ಲಾ ಯೋಚನೆ ಮಾಡಿಕೊಂಡೇ ಮತ್ತೆ ಮನೆಗೆ ಕಾಲಿಟ್ಟಿದ್ದಾರೆ.. ಈ ನಡುವೆ ಇತ್ತೀಚೆಗೆ ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಸುರೇಶ್ ನಡುವೆ ಸ್ವಲ್ಪ ತಕರಾರುಗಳಾಗುತ್ತಿದ್ದು, ಆಗಾಗ ಕಿರಿಕ್ ಗಳನ್ನ ತೆಗೆದುಕೊಳ್ತಾಯಿದ್ದಾರೆ..
ಇತ್ತೀಚೆಗೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯ ವೇಳೆ ದಿವ್ಯಾ ಸುರೇಶ್ ಹೇಳಿದ ಒಂದು ಹೇಳಿಕೆಯಿಂದ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಆಕ್ರೋಶಗೊಂಡಿದ್ದಾರೆ. ವೀಕೆಂಡ್ ಸಂಚಿಕೆಯಲ್ಲಿ , ‘ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ರನ್ನು ಬಹುಶಃ ನಿಮ್ಮನ್ನು ಸೆಕ್ಯೂರಿಟಿ ಗಾರ್ಡ್ ಆಗಿ ಕರೆಸಿರಬಹುದು. ಯಾವಾಗಲೂ ಹಿಂದೆ ಮಾತನಾಡುತ್ತಿದ್ದರು ಎಂದು ನಮ್ಮ ಮನೆಯಲ್ಲಿ ಹೇಳುತ್ತಿದ್ದರು ಎಂದು ದಿವ್ಯಾ ಸುರೇಶ್ ಸುದೀಪ್ ಅವರ ಎದುರಲ್ಲಿ ಹೇಳಿದ್ದರು. ಇದು ಸಹಜವಾಗಿಯೇ ಸಂಬರಗಿ ಹಾಗೂ ಚಕ್ರವರ್ತಿಯವರನ್ನ ಕೆರಳಿಸಿದೆ..
ಅಲ್ಲದೇ ಪ್ರಶಾಂತ್ ಸಂಬರಗಿ ಅವರ ವಿರುದ್ಧ ಬಿಗ್ ಬಾಸ್ ಎಲಿಮಿನೇಟ್ ಪ್ರ್ಯಾಂಕ್ ಕೂಡ ಮಾಡಿ ಅವರನ್ನ ಅಳುವಂತೆಯೂ ಮಾಡಿತ್ತು.. ಈ ಪ್ರ್ಯಾಂಕ್ ನಂತೆ ವಾರದ ಕೊನೆಯಲ್ಲಿ ಪ್ರಶಾಂತ್ ಅವರನ್ನು ಎಲಿಮಿನೆಟ್ಗೊಳಿಸಿ ನಂತರ ಮನೆಯ ಸ್ಪರ್ಧಿಗಳಿಗೆ, ಪ್ರಶಾಂತ್ ಅವರು ಸೇವ್ ಆಗಿದ್ದು, ಬಿಗ್ಬಾಸ್ ಮುಂದಿನ ಆದೇಶದವರೆಗೂ ಮನೆಯಲ್ಲಿ ಪ್ರಶಾಂತ್ ಕಂಡರೂ ಕಾಣದಂತೆ ವರ್ತಿಸಬೇಕು ಎಂದು ಬಿಗ್ಬಾಸ್ ಸೂಚಿಸಿದ್ದರು. ನಂತರ ಮನೆ ಮಂದಿಯನ್ನೆಲ್ಲಾ ಮಾತನಡಿಸಲು ಸರ್ಕಸ್ ಮಾಡಿದ ಪ್ರಶಾಂತ್ ಜೊತೆಗೆ ಯಾರು ಕೂಡ ಮಾತನಾಡಲಿಲ್ಲ.
ಈ ವೇಳೆ ದಿವ್ಯಾ ಸುರೇಶ್ರ ನ್ನು ಬಿಡದೇ ಪ್ರಶಾಂತ್ ಸಂಬರ್ಗಿ ಕೆದಕುವ ಪ್ರಯತ್ನ ಮಾಡಿದ್ದಾರೆ. ಡೈನಿಂಗ್ ಹಾಲ್ ಬಳಿ ಕುಳಿತು ದಿವ್ಯಾ ಸುರೇಶ್ ಟಿಫಿನ್ ಮಾಡುತ್ತಿರುತ್ತಾರೆ. ಆಗ ಪ್ರಶಾಂತ್, ಪ್ರಿಯಾಂಕ ಆಚೆ ಹೋದಾಗ ನನ್ನ ಟಿವಿ ಸಂದರ್ಶನಗಳನ್ನು ನೋಡಿದ್ಯಾ. ಫೇಕ್ ಲವ್ ಸ್ಟೋರಿ ಬಗ್ಗೆ ಹೇಳಿದ್ದೇನೆ. ಅದನ್ನು ಇಲ್ಲಿಯೂ ಒಪ್ಪಿಕೊಂಡಿದ್ದಾರೆ. ಪ್ರಿಯಾಂಕ ಫೇಕ್ ಲವ್ ಸ್ಟೋರಿ ಬಗ್ಗೆ ಕೇಳಿದ್ಯಾ. ಕೃತಕವಾದ ಮೆಕಾನಿಕಲ್ ಲವ್ ಸ್ಟೋರಿ ಬಗ್ಗೆ ನಾನು ಆಚೆ ಹೇಳಿದ್ದೇನೆ. ಕರ್ನಾಟಕ ಜನತೆ ಮುಂದೆ ಆಡಿರುವ ನಾಟಕ ಒಪ್ಪಿಕೊಂಡಿದ್ದಾರೆ.
ಇರುವುದನ್ನು ಹಾಗೇ ನಾನು ಆಚೆ ನೇರವಾಗಿ ಹೇಳಿದರೆ ನಿಷ್ಠುರವಾಗಿ ಕೋಪ ಬರುತ್ತದೆ. ಪ್ರಿಯಾಂಕ ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್ಗೆ ಎಷ್ಟು ಕೆಲಸ ಗೊತ್ತಾ. ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್ಗೆ 30 ಸಾವಿರ ಸಂಬಳ ಜೊತೆಗೆ ಮನೆ ಕೂಡ ನೀಡಿದ್ದೇನೆ ಎಂದು ಅಣುಕಿಸಿದ್ದಾರೆ. ನಂತರ ಶಮಂತ್ ಕಿವಿಯ ಬಳಿ ಬಂದು ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು ಕೆಟ್ಟವರಿಗೆ ದುಷ್ಟ , ನನಗೆ ಶತ್ರುಗಳಿಗಿಂತ ಮಿತ್ರರು ಜಾಸ್ತಿ ಇದ್ದಾರೆ. ಆದರೆ ಶತ್ರುಗಳೇ ರಿಯಲ್ ಎಂದು ಹೇಳಿದ್ದಾರೆ. ಒಟ್ನಲ್ಲಿ ಸ್ಪರ್ಧಿಗಳ ನಡುವೆ ಶತ್ರ್ಉತ್ವ ,ಗಲಾಟೆ ನಡೆಯುತ್ತಿದೆ… ಅಸಮಾಧಾನ ಕಿಡಿ ಹೊತ್ತಿಕೊಂಡಿದ್ದು, ಇದು ಮುಂದಿನ ಯಾವ ತಿರುವು ಪಡೆದುಕೊಳ್ಳಲಿದೆ ಅನ್ನೋದನ್ನ ಕಾದು ನೋಡ್ಬೇಕಿದೆ..