BIGGBOSS 8 – ಸಂಬರಗಿಗೆ ಅನ್ಯಾಯ ಮಾಡಿದ್ರಾ ಲ್ಯಾಗ್ ಮಂಜು..!
ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಪಾರ್ಟಿ ಅಂತ ಹೆಸರಿಸುವುದಾದ್ರೆ ಪ್ರಶಾಂತ್ ಸಂಬರಗಿಗಿಂತ ಆ ಟೈಟಲ್ ಗೆ ಬೇರೆ ಯಾರೂ ಸ್ಯೂಟ್ ಆಗೋದಿಲ್ಲ ಎನ್ನಿಸುತ್ತೆ. ಪ್ರತಿ ಬಾರಿ ಒಬ್ಬರಲ್ಲಾ ಒಬ್ಬರ ಜೊತೆಗೆ ತಮಗೆ ಸಂಬಂಧವಿಲ್ಲದ ವಿಚಾರವಾಗಿಯೂ ಕಿತ್ತಾಡಿಕೊಳ್ತಾ ಇರುತ್ತಾರೆ. ಕೆಲವೊಮ್ಮೆ ವಯಕ್ತಿ ವಿಚಾರವಾಗಿಯೂ ಮಾತನಾಡಿ ಬಹುತೇಕ ಸದಸ್ಯರ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾರೆ.
ಈ ಸಾಲಿಗೆ ಆರಂಭದಲ್ಲಿ ಪ್ರಶಾಂತ್ ದೋಸ್ತಾ ಆಗಿದ್ದ ಮಂಜು ಸಹ ಬರುತ್ತಾರೆ. ಆರಂಭದ ದಿನಗಳಲ್ಲಿ ಅಳಿಯ ಹಾಗೂ ಮಾವನ ಜೋಡಿ ಸಾಕಷ್ಟು ಸೌಂಡ್ ಮಾಡಿತ್ತು. ಇವರಿಬ್ಬರ ನಡುವಿನ ಬಾಂಡಿಂಗ್ ಬಲಬವಾಗಿತ್ತು. ಆದ್ರೆ ಕ್ರಮೇಣ ಈ ಜೋಡಿ ನಡುವೆ ಬಿರುಕು ಮೂಡಿ ಈ ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗಲ್ಲಾ ಅನ್ನೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ.
ಪ್ರಶಾಂತ್ ಸಂಬರಗಿ ಆಗಾಗ ತಮ್ಮ ಸೋಲಿಗೆ ಇನ್ನೊಬ್ಬರ ಹೆಸರನ್ನ ಹೇಳುತ್ತಾ ಇರುತ್ತಾರೆ. ಹಾಗೆ ಇತ್ತೀಚೆಗೆ ನಡೆದ ಟಾಸ್ಕ್ ನಲ್ಲಿ ಪ್ರಶಾಂತ್ ಸೋತಿದ್ದಕ್ಕೆ ಮಂಜುನೇ ಕಾರಣ ಎಂದು ಮನೆಮಂದಿ ಬಳಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅಲ್ಲದೆ ನಿನ್ನೆ ಮಂಜು ವಿರುದ್ಧ ಪ್ರಶಾಂತ್ 38 ಗಂಟೆಗಳ ಕಾಲ ಉಪವಾಸ ಸತ್ಯಗ್ರಹ ನಡೆಸಲು ಕೂಡ ಮುಂದಾಗಿದ್ದರು.
ಇಂದು ನಿಧಿ ಸುಬ್ಬಯ್ಯ ಬಳಿ ಮಾತನಾಡಿರುವ ಸಂಬರಗಿ ನನಗೆ ಮಂಜುನಿಂದ ಅನ್ಯಾಯವಾಗಿದೆ ಎಂದು ಹೇಳಿದ್ದರು. ಈ ಇಬ್ಬರ ಮಾತು ಕೇಳಿಸಿಕೊಂಡು ದಿವ್ಯಾ ಸುರೇಶ್ ಈ ಬಗ್ಗೆ ಮಂಜು ಬಳಿ ಚರ್ಚೆ ನಡೆಸಿದರು. ಬೆಡ್ ರೂಮ್ ಏರಿಯಾದಲ್ಲಿ ಮಂಜು ಕುಳಿತಿದ್ದ ವೇಳೆ ದಿವ್ಯಾ ಸುರೇಶ್, ನಿನ್ನಂದ ಅನ್ಯಾಯವಾಗಿದೆ ಎಂದು ನಿಧಿ ಸುಬ್ಬಯ್ಯ ಬಳಿ ಪ್ರಶಾಂತ್ ಹೇಳುತ್ತಿದ್ದರು. ನೀನು ಎಲ್ಲರನ್ನು ಇನ್ಫ್ಲೂಯನ್ಸ್ ಮಾಡಿದ್ಯಾ ಹಾಗೂ ಪ್ರಶಾಂತ್ ಕ್ಯಾಪ್ಟನ್ ಆಗಬಾರದು ಎಂಬ ಕಾರಣಕ್ಕೆ ಫೇವರಿಸಮ್ ಮಾಡಿದ್ಯಾ ಅಂತಿದ್ದರು.
ಆದರೆ ಅನ್ಯಾಯ ಆಗಿದೆ ಎಂದಾಗ ಅವರ ಬಳಿ ಹೋಗಿ ಮಾತನಾಡಬೇಕು. ನೀನು ಏನು ಅನ್ಯಾಯವಾಗಿದೆ ಎಂದು ಕೇಳಿದಾಗಲೂ ಅವರು ಉತ್ತರಿಸದೇ ಸುಮ್ಮನೆ ಇದ್ದರೆ, ಅದು ತಪ್ಪಾಗುತ್ತದೆ. ಅಂದಿನದ್ದು, ಅಂದೇ ಮಾತನಾಡಿ ಬಗೆಹರಿಸಿಕೊಳ್ಳಬಹುದಾಗಿತ್ತು. ಆದರೆ ನಾನು ಎಲ್ಲದಕ್ಕೂ ಹೋರಾಡುತ್ತೇನೆ, ದಿಕ್ಕಾರ ಎಂದರೆ ಅದಕ್ಕೆ ಏನು ಅರ್ಥಬರುತ್ತದೆ ಎನ್ನುತ್ತಾರೆ. ಆಗ ಮಂಜು ಹೋಗಲಿ ಬಿಡು ಅವರು ಮಾತನಾಡಿದಾಗ ಮಾತನಾಡುತ್ತೇನೆ ಎಂದಿದ್ದಾರೆ.
ನಂತರ ದಿವ್ಯಾ ಸುರೇಶ್ ಮಾತಿಗೆ ಮುಂಚೆ ಜನಗಳಿಗೆ ಕಾಣಿಸುತ್ತಿರುತ್ತದೆ ಅಲ್ವಾ ಎಂದು ಹೇಳುತ್ತಾರೆ. ಆದ್ರೆ ಅದೇ ಜನರೇ ಅಂದು ಕೂಡ ನಿಧಿ ಸುಬ್ಬಯ್ಯ ಜೊತೆ ಜಗಳವಾದಾಗ ಕಾಲ್ ಮಾಡಿ ಉಗಿದ್ರಾಲ್ವಾ ಎಂದು ಚರ್ಚೆ ನಡೆಸಿದ್ದಾರೆ. ಒಟ್ಟಾರೆ ದಿನಗಳೆದಂತೆಲ್ಲಾ ಮನೆಯಲ್ಲಿ ಮನೆಯ ಸದಸ್ಯರು ನಡುವಿನ ವೈಮಸ್ಸು, ಗೊಂದಲ ಕಿತ್ತಾಟಗಳು ಒಂದ್ ಹೆಜ್ಜೆ ಮುಂದಕ್ಕೆ ಹೋಗ್ತಿದ್ದು, ಮುಂದೆ ,ಮಂಜು ಹಾಗೂ ಸಂಬರಗಿ ನಡುವಿನ ಗಲಾಟೆ ಯಾವ ಹಂತಕ್ಕೆ ತಿರುಗಲಿದೆ ಅನ್ನೋದನ್ನ ಕಾದು ನೋಡ್ಬೇಕಿದೆ..