BIGGBOSS 8 : ಕೇಳಿದ ಪ್ರಶ್ನೆಗಳಿಗೆಲ್ಲಾ ದಿವ್ಯಾ ಉತ್ತರ ಒಂದೇ.. ಅರವಿಂದ್.. ಅರವಿಂದ್…! 

1 min read

BIGGBOSS 8 : ಕೇಳಿದ ಪ್ರಶ್ನೆಗಳಿಗೆಲ್ಲಾ ದಿವ್ಯಾ ಉತ್ತರ ಒಂದೇ.. ಅರವಿಂದ್.. ಅರವಿಂದ್…!

ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಪ್ರಣಯಪಕ್ಷಿಗಳು ಕ್ಯೂಟ್ ಜೋಡಿಯಾಗಿ ಗುರುತಿಸಿಕೊಂಡು ಸದಾ ಜೊತೆಯಲ್ಲೇ ಇರುವ ಜೋಡಿ ಅಂದ್ರೆ ದಿವ್ಯಾ ಉರುಡುಗ ಹಾಗೆ ಅರವಿಂದ್.. ಇವರಿಬ್ಬರ ನಡುವೆ ಒಂದು ಸ್ಪಾರ್ಕ್ ಇದೆ. ಇಬ್ಬರ ನಡುವೆ ಸ್ಟ್ರಾಂಗ್ ಬಾಂಡಿಗ್ ಇದೆ..  ಈ ಜೋಡಿ ಮನೆ ಮಂದಿಗೆ  ಹರಟೆಯ ಟಾಪಿಕ್ ಆದ್ರೆ  ಹೊರಗಡೆ ಪ್ರೇಕ್ಷಕರ ಫೇವರೇಟ್ ಕೂಡ ಆಗಿದ್ದಾರೆ. ಆಗಾಗ ಈ ಜೋಡಿ ತಮ್ಮ ನಡುವಿನ ಹೊಂದಾಣಿಕೆ ಹಾಗೂ ಸ್ಟ್ರಾಂಗ್ ಬಾಂಡಿಂಗ್ ನ ಸಾಬೀತು ಪಡಿಸುತ್ತಿರುತ್ತಾರೆ. ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಅನ್ನೋದನ್ನೂ ತೋರಿಸುತ್ತಾರೆ.

ಇದೀಗ  ಬಿಗ್‍ಬಾಸ್ ನೀಡಿದ್ದ ಸ್ಪರ್ಧೆಯಲ್ಲಿ ಮತ್ತೊಮ್ಮೆ ಈ ಜೋಡಿ ಎಲ್ಲರ ಗಮನ ಸೆಳೆದಿದೆ.  ಮನೆಯ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಗೇಮ್ ಕೊಟ್ಟಿದ್ದರು. ಬೌಲ್‍ನಲ್ಲಿ ಕೆಲವು ಪ್ರಶ್ನೆಗಳಿರುವ ಚೀಟಿಗಳನ್ನು ಇಡಲಾಗಿತ್ತು. ಅದರಲ್ಲಿ 2 ಚೀಟಿಗಳನ್ನು ಎತ್ತಿಕೊಂಡು ಅಲ್ಲಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡಬೇಕಿತ್ತು. ಆಗ ದಿವ್ಯಾ ಉರುಡುಗ ತಮಗೆ ಬಂದಿರುವ ಎಲ್ಲಾ ಪ್ರಶ್ನೆಗಳಿಗೆ ಅರವಿಂದ್ ಎಂದು ತುಂಬಾ ಪ್ರೀತಿಯಿಂದ ಉತ್ತರಿಸಿದ್ದಾರೆ.

ಪ್ರಶ್ನೆ – ಈ ಮನೆಯಿಂದ ನಿಮ್ಮ ಲೈಫ್ ಲಾಂಗ್ ಫ್ರೆಂಡ್ ಯಾರಾದರೂ ಆಗಬಹುದು ಎಂದು ಅನ್ನಿಸಿದರೆ ಯಾರು ಮತ್ತೆ ಯಾಕೆ..?

ಈ ಪ್ರಶ್ನೆಯನ್ನ ದಿವ್ಯಾ ಓದುತ್ತಿದ್ದಂತೆ  ಮನೆಯಿತರೇ ಸದಸ್ಯರು ಕಿರುಚಾಡಿದರು. ಅಲ್ಲದೇ ತುಂಬಾ ಕಷ್ಟವಾದ ಪ್ರಶ್ನೆ ಇದೆ… ದಿವ್ಯಾ ನೀನು ಈ ಪ್ರಶ್ನೆಗೆ ಹೇಗೆ ಉತ್ತರಿಸುತ್ತೀಯಾ ಎಂದು ಗೇಲಿಮಾಡಿದ್ದಾರೆ.

ಉತ್ತರಿಸಿದ ದಿವ್ಯಾ ಅರವಿಂದ್ ಎಂದಿದ್ದಾರೆ – ಈ ಮನೆಯಲ್ಲಿ ಅರವಿಂದ್ ನಾನು ತುಂಬಾ ಹೊಂದಿಕೊಂಡು ಇದ್ದೇವೆ. ಅವರ ಜೊತೆಗೆ ಇದ್ದರೇ ನಾನು ಆರಾಮಾಗಿ ಖುಷಿಯಾಗಿ ಇರುತ್ತೇನೆ.  ಅದಕ್ಕಿಂತ ಇನ್ನೇನು ಬೇಕು ಎಂದು ದಿವ್ಯಾ ತುಂಬಾ ಪ್ರೀತಿಯಿಂದ ಹೇಳಿದ್ದಾರೆ.

ಪ್ರಶ್ನೆ – ಈ ಮನೆಯಲ್ಲಿರುವ ಸದಸ್ಯರಲ್ಲಿ ನಿಮಗೆ ಟಫ್ ಕಾಂಪಿಟೆಟರ್  ಸ್ಪರ್ಧಿಗಳು ಯಾರು?

ಉತ್ತರಿಸಿದ ದಿವ್ಯಾ ನನಗೆ ಅರವಿಂದ್ ಮತ್ತು ಮಂಜು ಇಬ್ಬರು ಟಫ್ ಕಾಂಪಿಟೇಟರ್ ಗಳಾಗಿದ್ದಾರೆ ಎಂದಿದ್ದಾರೆ. ಅದ್ರಲ್ಲೂ ಅರವಿಂದ್ ದಿ ಬೆಸ್ಟ್ ಆಗಿ ಆಡುತ್ತಾರೆ ಎಂದಿದ್ದಾರೆ.

ದಿವ್ಯಾ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ ಮನೆ ಮಂದಿ ಎಕ್ಸೈಟ್ ಆಗಿ ಅರವಿಂದ್ ಹಾಗೂ ದಿವ್ಯಾ ಮುಖವನ್ನೇ ನೋಡುತ್ತಾ ತಮಾಷೆ ಮಾಡುತ್ತಿದ್ದರು. ಇತ್ತ ಅರವಿಂದ್ ಮುಖದಲ್ಲೂ ನಾಚಿಕೆ ಕಂಡುಬಂದಿತ್ತು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd