BIGGBOSS 8 : ದೋಸ್ತಿಗಳ ನಡುವೆ ಗುದ್ದಾಟ ಶುರು – ಬುದ್ದಿ ಹೇಳಿದ ಚಕ್ರವರ್ತಿ ವಿರುದ್ಧವೇ ತಿರುಗಿ ಬಿದ್ದ ಸಂಬರಗಿ..!  

1 min read

BIGGBOSS 8 : ದೋಸ್ತಿಗಳ ನಡುವೆ ಗುದ್ದಾಟ ಶುರು – ಬುದ್ದಿ ಹೇಳಿದ ಚಕ್ರವರ್ತಿ ವಿರುದ್ಧವೇ ತಿರುಗಿ ಬಿದ್ದ ಸಂಬರಗಿ..!

ಬೆಂಗಳೂರು : ಬಿಗ್‍ಬಾಸ್ ನಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟ ಚಂದ್ರಚೂಡ್ ಚಕ್ರವರ್ತಿ ಹಾಗೂ ಅವರದ್ದೇ ವ್ಯಕ್ತಿತ್ವಕ್ಕೆ ಹೋಲುವ ಪ್ರಶಾಂತ್ ಸಂಬರಗಿ ಇಬ್ಬರೂ ಮನೆಯಲ್ಲಿ ಉತ್ತಮ ಸ್ನೇಹಿತರಾಗಿರುವಂತೆ ಕಾಣುತ್ತಿದೆ.

ಆದ್ರೆ  ಇತ್ತೀಚೆಗೆ ಮನೆಲ್ಲಿ ಮನಸ್ಥಾಪಗಳು , ಗಲಾಟೆಗಳು ಹೆಚ್ಚಾಗುತ್ತಿದೆ.  ಅಲ್ಲದೇ ಮತ್ತೊಮ್ಮೆ ಸಂಬರಗಿ ವಿರುದ್ಧ ಇಡೀ ಮನೆ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ. ಅನವಶ್ಯಕ ಹಾಗೂ ವಯಸಕ್ತಿಕ ಸಂಬಂಧವೇ ಇಲ್ಲದ ವಿಚಾರಗಳನ್ನ ತಂದು ಸದಸ್ಯರನ್ನ ಕೆಣಕುವುದು ಸಂಬರಗಿಯ ಹಳೇ ಚಾಳಿಯಾಗಿದೆ. ಅದರಂತೆ ಈ ಬಾರಿಯೂ  ತಮ್ಮ ಚಾಳಿ ಮುಂದುವರೆಸಿ ಮನೆಯವರನ್ನ ಮತ್ತೆ ವಿರೋಧ ಕಟ್ಟಿಕೊಂಡಿದ್ದಾರೆ.

ಈ ಬಾರಿ ತನ್ನ ಸ್ನೇಹಿತ ಚಕ್ರವರ್ತಿ ವಿರುದ್ಧ ಸಂಬರಗಿ ಕೆಂಡಕಾರಿದ್ದಾರೆ. ಯಾರು ನಂಬರ್ ಒನ್ ವಿಚಾರದಲ್ಲಿ ಅನಾವಶ್ಯಕ ವಿಚಾರಗಳನ್ನ ಮುನ್ನಲೆಗೆ ತಂದ ಕಾರಣಕ್ಕೆ ನಡೆದ ಗಲಾಟೆ ವೇಳೆ ನಿನ್ನ ವಾದಗಳನ್ನ ಸರಿಯಾದ ಮಾರ್ಗದಲ್ಲಿ ಮಂಡಿಸು ಎಂದು ಚಕ್ರವರ್ತಿ ಸಲಹೆ ನೀಡಿದ್ದಾರೆ.

ಅಲ್ಲದೇ ದಿವ್ಯಾ ಸುರೇಶ್ ಜೊತೆ ಚೆನ್ನಾಗಿಯೇ ಮಾತಾಡ್ತಿಯಾ. ಮಂಜು ವಿಷಯದಲ್ಲಿ ಆಕೆ ಹೆಸರನ್ನ ಬಳಸಿಕೊಳ್ಳೋದು ತಪ್ಪು. ಮಂಜು ಕಾಮಿಡಿ ಇಷ್ಟ ಆಗಲ್ಲ ಅಂದ್ರೆ ನೇರವಾಗಿ ಹೇಳು. ಪದೇ ಪದೇ ದಿವ್ಯಾ ಹೆಸರನ್ನ ತೆಗೆದುಕೊಳ್ಳಬೇಡ. ಎಲ್ಲ ವಿಷಯಗಳನ್ನ ತಾಳ್ಮೆಯಿಂದ ಯೋಚಿಸಿ ಬಗೆಹರಿಸಿಕೊಳ್ಳಬೇಕೇ ಹೊರತು ಹೀಗೆ ಕೂಗಾಡಿ ಅಲ್ಲ ಎಂದು ಸಂಬರಗಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ಧಾರೆ.

ಆದ್ರೆ ಇದ್ರಿಂದ ಸಿಟ್ಟಿಗೆದ್ದ ಸಂಬರಗಿ ನಾನು ಇನ್ಮುಂದೆ ಹೆಣ್ಣಿನ ಹೆಸರು ಬಳಸಬಾರದು ಅಂತ ಡಿಸೈಡ್ ಮಾಡಿದ್ದೀನಿ. ನಿನಗಿಂತ ಹೆಚ್ಚು ಮಹಿಳೆಯರನ್ನ ಗೌರವಿಸುತ್ತೇನೆ ಮತ್ತು ಪೂಜಿಸುತ್ತೇನೆ. ಯಾರ ವೈಯಕ್ತಿಕ ವಿಚಾರಗಳನ್ನು ಮಾತಾಡಿಲ್ಲ. ಯಾರ ಪರ್ಸನಲ್ ವಿಚಾರ ಮಾತಾಡಿದ್ದೀನಿ ಅಂತ ತೋರಿಸು ಎಂದು ಚಕ್ರವರ್ತಿ ವಿರುದ್ಧ ಕೆಂಡ ಕಾರಿದ್ದಾರೆ.

100 ಆಮ್ಲಜನಕ ಸಾಂದ್ರಕವನ್ನ  ದಾನ ಮಾಡಿದ ಅಕ್ಷಯ್ ಕುಮಾರ್ ದಂಪತಿ

‘ಹೆಮ್ಮಾರಿ’ ಬಲಿಯಾದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್..!

KGF 2 ನಲ್ಲಿ ‘ರಾಖಿ’ ಜೊತೆ ಹೆಜ್ಜೆ ಹಾಕಲಿದ್ದಾರೆ ನೋರಾ ಫತೇಹಿ..! ಹಿಂದಿಗೆ ಧ್ವನಿ ನೀಡಲ್ವಂತೆ ಯಶ್ ..!

ಟಾಲಿವುಡ್  ನ ಸ್ಟಾರ್ ನಟ ಅಲ್ಲು ಅರ್ಜುನ್ ಗೆ ಕೊರೊನಾ ಪಾಸಿಟಿವ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd