BIGG BOSS 8 : 2ನೇ ವಾರ ನಿರ್ಮಲಾಗೆ ದೊಡ್ಮನೆಯಿಂದ ಗೇಟ್ ಪಾಸ್..!
ಬಿಗ್ ಬಾಸ್ 8 ನೇ ಆವೃತ್ತಿ ಯಶಸ್ವಿಯಾಗಿ 2 ವಾರಗಳನ್ನ ಪೂರ್ಣಗೊಳಿಸಿದೆ. ಈ ನಡುವೆ 2ನೇ ಸ್ಪರ್ಧಿ ಕೂಡ ಮನೆಯಿಂದ ಆಚೆ ಎಡಗಾಲಿಟ್ಟಿದ್ದಾರೆ. ಮೊದಲನೇ ವಾರವೇ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರಗಡೆ ಹೋಗಿದ್ದರು. ಇದೀಗ ಈ ವಾರ ನಿರ್ಮಲಾ ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ಮನೆಗೆ 2ನೇ ವಾರಗಳಿಗೆ ಗುಡ್ ಬೈ ಹೇಳಿದ್ದಾರೆ.
ಹೌದು.. ನಿರ್ಮಲಾ ಮೊದಲಿನಿಂದಲೂ ಮನೆಯ ಸ್ಪರ್ಧಿಗಳಿಗೆ ಅಷ್ಟಾಗಿ ಇಷ್ಟವಾಗುತ್ತಿರಲಿಲ್ಲ. ಬಹುತೇಕ ಮನೆಯಲ್ಲಿ ಫೋಕಸ್ ಅವರ ಮೇಲೆಯೇ ಇರುತ್ತಿತ್ತು. ಅವರ ವಿಚಿತ್ರ ನಡವಳಿಕೆ , ರಾತ್ರಿ ಕ್ಯಾಮರಾ ಮುಂದೆ ಒಬ್ಬಬ್ಬರೇ ಮಾತನಾಡುವುದು, ಓಡಾಡುವುದು ಹೀಗೆ ಅವರ ವರ್ತನೆಗಳು ಅಷ್ಟಾಗಿ ಯಾರಿಗೂ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಬಹುತೇಕ ಮನೆ ಮಂದಿಯಲ್ಲ ಅವರನ್ನ ಡಿಸ್ ಲೈಕ್ ಮಾಡಿದ್ದರು. ನಾಮಿನೇಷನ್ ನಲ್ಲಿ ಹೆಚ್ಚು ವೋಟ್ ಗಳು ಸಹ ಅವರಿಗೆ ಸಿಕ್ಕಿತ್ತು.
`ಬಾಕ್ಸ್ ಆಫೀಸ್ ಸುಲ್ತಾನ’ ನ ಅಬ್ಬರಕ್ಕೆ ಹಿಂದಿನ ದಾಖಲೆಗಳೆಲ್ಲಾ ಪೀಸ್ ಪೀಸ್….!
ಇನ್ನೂ ಈ ವಾರ ಮನೆಯಿಂದ ಆಚೆ ಹೋಗಲು ವಿಶ್ವನಾಥ್, ನಿರ್ಮಲಾ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರ್ಗಿ, ಗೀತಾ, ಚಂದ್ರಕಲಾ ಮೋಹನ್, ನಿಧಿ ಸುಬ್ಬಯ್ಯ, ಶುಭಾ ಪೂಂಜಾ ನಾಮಿನೇಟ್ ಆಗಿದ್ದರು. ಆದ್ರೆ ಇವರೆಲ್ಲಾ ಸೇಫ್ ಆಗಿ ನಿರ್ಮಲಾ ಮನೆಯಿಂದ ಆಚೆ ಹೋದರು.
ರಾಬರ್ಟ್ ಸಿನಿಮಾದ ದೃಶ್ಯದ ಪೈರೆಸಿ ಯತ್ನ : ಆರೋಪಿ ವಿರುದ್ಧ ಪ್ರಕರಣ ದಾಖಲು..!
ಈ ವೇಳೆ ಬಿಗ್ ಬಾಸ್ ನಿರ್ಮಲಾಗೆ ವಿಶೇಷ ಅಧಿಕಾರ ಕೊಟ್ಟು ಮುಂದಿನ ವಾರ ನೇರವಾಗಿ ಡೇಂಜರ್ ಝೋನ್ ಗೆ ನಾಮಿನೇಟ್ ಮಾಡುವ ಸ್ಪರ್ಧಿ ಹೆಸರು ತಿಳಿಸುವಂತೆ ಹೇಳಿದ್ರೆ. ಈ ವೇಳೆ ನಿರ್ಮಲಾ ಯಾರ ಹೆಸರನ್ನೂ ಸಹ ಹೇಳಲು ನಿರಾಕರಿಸಿದ್ರು. ಆದ್ರೆ ಫೇಕ್ ಎಂದು ಗುರುತಿಸಬೇಕಾಗಿದ್ದ ಆಟದಲ್ಲಿ ನಿರ್ಮಲಾ ಪ್ರಶಾಂತ್ ಅವರನ್ನ ಫೇಕ್ ಎಂದಿದ್ದ ಕಾರಣ ಬಿಗ್ ಬಾಸ್ ನೇರವಾಗಿ ಪ್ರಶಾಂತ್ ಸಂಬರ್ಗಿಯವರನ್ನ ನಾಮಿನೇಟ್ ಮಾಡಿದ್ರು. ಈ ಮೂಲಕ ಮುಂದಿನ ವಾರ ಎಲಿಮೇಶನ್ ರೌಂಡ್ ಗೆ ನಾಮಿನೇಟ್ ಆದ ಮೊದಲ ಸ್ಪರ್ಧಿಯಾಗಿದ್ದಾರೆ.








