`ಬಾಕ್ಸ್ ಆಫೀಸ್ ಸುಲ್ತಾನ’ ನ ಅಬ್ಬರಕ್ಕೆ ಹಿಂದಿನ ದಾಖಲೆಗಳೆಲ್ಲಾ ಪೀಸ್ ಪೀಸ್….!
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಎಬ್ಬಿಸಿದೆ. ರಾಬರ್ಟ್ ಸಿನಿಮಾದ ಬ್ಯೂಸಿನೆಸ್ ನಲ್ಲಿ ಭಾಗಿಯಾದವರ ಜೇಬು ತುಂಬಿ ತುಳುಕುತ್ತಿದೆ.
ರಾಬರ್ಟ್ ಆರ್ಭಟಕ್ಕೆ ಈ ಹಿಂದಿನ ದಾಖಲೆಗಳೆಲ್ಲಾ ಪೀಸ್ ಪೀಸ್ ಆಗೋಗಿದೆ. ದರ್ಶನ್ ಇಂದಿಗೂ ಎಂದಿಗೂ ಬಾಕ್ಸ್ ಆಫೀಸ್ ಸುಲ್ತಾನ ಅನ್ನೋದನ್ನ ರಾಬರ್ಟ್ ಸಿನಿಮಾ ಕಲೆಕ್ಷನ್ ಸಾರಿ ಹೇಳುತ್ತಿದೆ.
ರಾಬರ್ಟ್ ಸಿನಿಮಾದ ದೃಶ್ಯದ ಪೈರೆಸಿ ಯತ್ನ : ಆರೋಪಿ ವಿರುದ್ಧ ಪ್ರಕರಣ ದಾಖಲು..!
ಹೌದು..! ಗುರುವಾರ ತೆರಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ರಾಬರ್ಟ್ 3ನೇ ದಿನವೂ ಗಲ್ಲಾಪೆಟ್ಟಿಗೆ ತುಂಬಿಸಿಕೊಂಡಿದೆ. 3ನೇ ದಿನ ರಾಬರ್ಟ್ 14.10 ಕೋಟಿ ರೂ ರೂ. ಹಣ ಗಳಿಸಿ ದಾಖಲೆ ಬರೆದಿದೆ.
ಈ ಮೂಲಕ ಈ ಮೂರು ದಿನಗಳ ಕಲೆಕ್ಷನ್ ಸೇರಿಸಿದರೆ ಒಟ್ಟು 47.33 ಕೋಟಿ ರೂ. ಆಗಲಿದೆ. ಅಂದರೆ ರಾಬರ್ಟ್ ಹಾಫ್ ಸೆಂಚುರಿ ಬಾರಿಸಲು ಇನ್ನು ಎರಡು ಮುಕ್ಕಾಲು ಕೋಟಿ ರೂ. ಮಾತ್ರ ಬಾಕಿಯಿದೆ.
ಅಂದ್ಹಾಗೆ ಮೊದಲ ದಿನ ಈ ಚಿತ್ರಕ್ಕೆ 17.24 ಕೋಟಿ ರೂ. ಕಲೆಕ್ಷನ್ ಆಗಿತ್ತು. ತೆಲುಗು ವರ್ಷನ್ ನಿಂದ 3.21 ಕೋಟಿ ರೂ. ಸಿಕ್ಕಿತ್ತು. 2ನೇ ದಿನ ಬರೋಬ್ಬರಿ 12.78 ಕೋಟಿ ರೂ. ಗಳಿಕೆ ಮಾಡಿತ್ತು. 3ನೇ ದಿನ 14.10 ಕೋಟಿ ರೂ ರೂ. ಹಣ ಗಳಿಸಿ ದಾಖಲೆ ಬರೆದಿದೆ.








