BIGGBOSS 8 : ಅರವಿಂದ್ ಬಳಿ ಕಳಚಿಬಿತ್ತು ಸಂಬರಗಿಯ ಅಸಲಿ ಮುಖವಾಡ – ನಿಧಿ ಬಳಿ ಸಾರಿ ಕೇಳಿದ ಕ್ಯಾಪ್ಟನ್..!
ಬೆಂಗಳೂರು : ಇತ್ತೀಚೆಗೆ ನಡೆದ ಹಾಸ್ಟೆಲ್ ಟಾಸ್ಕ್ ವೇಳೆ ಮೋಸದಾಟ ಆಡಿರುವ ಹಣೆ ಪಟ್ಟಿ ಹೊತ್ತ ಮೂವರು ಸದಸ್ಯರಾದ ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಮನೆ ಸದಸ್ಯರ ಅಸಮಾದಾನಕ್ಕೆ ಗುರಿಯಾಗಿದ್ದಾರೆ. ಇತ್ತ ಅರವಿಂದ್ ಸಹ ಈ ಮೂವರಿಗೂ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ತಂತ್ರಗಾರಿಕೆ ಇರಬೇಕು ಆದ್ರೆ ಕುತಂತ್ರವಲ್ಲ ಎಂದು ಕಕಿಡಿಕಾರಿದ್ದರು. ಅಲ್ದೇ ಟಾಸ್ಕ್ ನಲ್ಲಿ ಕಳಪೆ ಪ್ರದರ್ಶನ ತೋರಿದ ಸದಸ್ಯೆಯಾಗಿ ಅಂತಿಮವಾಗಿ ನಿಧಿಯನ್ನ ಆಯ್ಕೆ ಮಾಡಿದ್ದರು. ಆದ್ರೆ ಇದೀಗ ಅರವಿಂದ್ ಗೆ ಈ ಗೇಮ್ ಪ್ಲಾನ್ ನ ಅಸಲಿ ಕಿಂಗ್ ಪಿನ್ ಬಗ್ಗೆ ಗೊತ್ತಾಘಿದ್ದು, ತಮ್ಮ ನಿರ್ಧಾರದ ಬಗ್ಗೆ ಪಶ್ಚಾತಾಪ ಪಟ್ಟಿದ್ದು, ನಿಧಿ ಬಳಿ ಸಾರಿ ಕೇಳಿದ್ದಾರೆ.


ಹೌದು.. ಬಿಗ್ ಬಾಸ್ ಅರವಿಂದ್ ರನ್ನ ಸೀಕ್ರೆಟ್ ರೂಮ್ ಗೆ ಕರೆಸಿ ಅಸಲಿ ವಿಚಾರವೊಂದನ್ನು ತಿಳಿಸಿದ್ದಾರೆ. ಲವ್ ಲೆಟರ್ ಗೇಮ್‍ನಲ್ಲಿ ಯಾರು ವಿನ್ನರ್ ಆಗ್ತಾರೋ ಅವರಿಗೆ ಕ್ಯಾಪ್ಟನ್ಸಿ ಟಾಸ್ಕ್‍ನಲ್ಲಿ ಭಾಗವಹಿಸುವ ಅವಕಾಶ ಇತ್ತು. ಅತ್ಯುತ್ತಮ ಟಾಸ್ಕ್ ನಿರ್ವಹಣೆ ಮತ್ತು ಅತ್ಯುತ್ತಮ ಆಟಗಾರ್ತಿಯನ್ನಾಗಿ ದಿವ್ಯಾ ಸುರೇಶ್ ರನ್ನು ಹೆಸರಿಸಲಾಗಿತ್ತು. ಎರಡು ಪಟ್ಟಗಳನ್ನು ಒಬ್ಬರಿಗೆ ನೀಡಿದ್ದರಿಂದ, ಮನೆಯ ಮತ್ತೊಬ್ಬ ಸದಸ್ಯರಿಗೆ ಕ್ಯಾಪ್ಟನ್ಸಿ ಟಾಸ್ಕ್‍ನಲ್ಲಿ ಭಾಗವಹಿಸುವ ಅವಕಾಶ ಮಿಸ್ ಆಗಿತ್ತು. ಈ ರೀತಿ ಆಗೋಕೆ ಯಾರು ಕಾರಣ ಅನ್ನೋದನ್ನು ಬಿಗ್ ಬಾಸ್ ಬಹಿರಂಗಪಡಿಸಿದ್ದಾರೆ. ಅರವಿಂದ್‍ಗೆ ತೋರಿಸಿದ ವೀಡಿಯೋದಲ್ಲಿ ದಿವ್ಯಾ ಸುರೇಶ್ ಆಯ್ಕೆಗೆ ಪ್ರಶಾಂತ್ ಕಾರಣ ಅನ್ನೋದು ಗೊತ್ತಾಗಿದೆ.
ಈ ವಿಚಾರದ ಕುರಿತಾಗಿ ಪ್ರಶಾಂತ್ ಬಳಿ ಅರವಿಂದ್ ಚರ್ಚೆ ಮಾಡಿದ್ದರು. ಆಗ ಪ್ರಶಾಂತ್, ಎಲ್ಲ ಆರೋಪಗಳನ್ನು ನಿಧಿ ಮೇಲೆ ಹಾಕಿದ್ದರು. ಚರ್ಚೆ ಮಾಡುವುದಕ್ಕೆ ನನಗೆ ನಿಧಿ ಅವಕಾಶವನ್ನೇ ನೀಡಲಿಲ್ಲ ಎಂದೆಲ್ಲ ಹೇಳಿದ್ದರು. ಆದರೆ ವೀಡಿಯೋದಲ್ಲಿ ನಿಧಿ, ಬೇರೆಯವರ ಹೆಸರು ಹೇಳಿದರೂ, ಬಲವಂತವಾಗಿ ದಿವ್ಯಾ ಸುರೇಶ್ ಹೆಸರನ್ನು ಪ್ರಶಾಂತ್ ಹೇಳಿರುವುದು ಬಹಿರಂಗವಾಗಿದೆ. ಕನ್ಪೆಷನ್ ರೂಮ್‍ನಲ್ಲಿ ಈ ವೀಡಿಯೋ ನೋಡಿ ನಂತರ ನಿಧಿ ಬಳಿ ಅರವಿಂದ್ ಕ್ಷಮೆಯನ್ನು ಕೇಳಿದ್ದಾರೆ. ಬಿಗ್ ಬಾಸ್ ನನಗೆ ನಿಮ್ಮಿಬ್ಬರ ಚರ್ಚೆಯ ವೀಡಿಯೋ ತೋರಿಸಿದರು. ಅಸಲಿ ವಿಚಾರ ಗೊತ್ತಾಯಿತು ಎಂದರು. ಇನ್ಮುಂದೆ ಪ್ರಸಾಂಬ್ ಸಂಬರಗಿ ವಿರುದ್ಧ ಅರವಿಂದ್ ಹಾಗೂ ಸಂಬರಗಿ ಅಸಲಿಯತ್ತು ಗೊತ್ತಾದ ಮೇಲೆ ಮನೆ ಸದಸ್ಯರ ರಿಯಾಕ್ಷನ್ ಹೇಗಿರುತ್ತೆ ಅನ್ನೋದನ್ನ ಕಾದು ನೊಡಬೇಕಾಗಿದೆ.








