ರಶ್ಮಿಕಾ ಬಳಿ ರೊಮ್ಯಾಂಟಿಕ್ ಆಗಿ ಪ್ರೇಮನಿವೇದನೆ ಮಾಡಿದ ವಿಜಯ್ ದೇವರಕೊಂಡ..!
ಹೈದ್ರಾಬಾದ್ : ಟಾಲಿವುಡ್, ಬಾಲಿವುಡ್ ನಲ್ಲಿ ಬ್ಯುಸಿಯಾಗಿರುವ ಕಿರಿಕ್ ರಾಣಿ ಹಾಗೂ ತೆಲುಗಿನ ರೊಮ್ಯಾಂಟಿಕ್ ಹೀರೋ ವಿಜಯ್ ದೇವರಕೊಂಡ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಇದೆ ಅನ್ನೋ ವದಂತಿಗಳು ಇಂದು ನೆನ್ನೆಯದಲ್ಲ. ಗೀತಾ ಗೋವಿಂದಂ ಸಿನಿಮಾದ ಟೈಮ್ ನಿಂದಲೂ ಇವರಿಬ್ಬರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇರುತ್ತೆ. ಹಾಗಂತ ಈ ಜೋಡಿ ಮಾತ್ರ ಇಂತಹ ಗಾಸಿಫ್ ಗಳಿಗೆ ತಲೆ ಕೆಡಿಸಿಕೊಳ್ತಿರುವಂತೆ ಕಾಣ್ತಿಲ್ಲ.. ಹೀಗಾಗಿ ಈ ಜೋಡಿ ಆಗಾಗ ಒಟ್ಟಾಗಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.
ಅಷ್ಟೇ ಅಲ್ಗಲ ಇತ್ತೀಚೆಗೆ ವಿಜಯ್ ದೇವರಕೊಂಡ ರಶ್ಮಿಕಾ ಮುಂದೆ ಮಂಡಿಯೂರಿ ಅತ್ಯಂತ ರೊಮ್ಯಾಂಟಿಕ್ ಆಗಿ ಪ್ರೇಮನಿವೇದನೆ ಮಾಡಿಕೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಅಂದ್ಹಾಗೆ ವಿಜಯ್ ದೇವರಕೊಂಡ ರಿಯಲ್ ಆಗಿ ರಶ್ಮಿಕಾಗೆ ಪ್ರಪೋಸ್ ಮಾಡಿಲ್ಲ.. ಬದಲಾಗಿ ಇದೊಂದು ಜಾಹೀರಾತಿನ ಶೂಟಿಂಗ್ ಫೋಟೋವಾಗಿದೆ.
ರಶ್ಮಿಕಾ ಮಂದಣ್ಣ ಎದುರು ಮಂಡಿಯೂರಿ ಕುಳಿತಿರುವ ವಿಜಯ್ ದೇವರಕೊಂಡ ಕೈಯಲ್ಲಿ ಉಡುಗೊರೆ ಹಿಡಿದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ಫ್ಯಾನ್ಸ್ ‘ಪ್ರಪೋಸ್ ಮಾಡ್ತಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ. ತುಂಬಾ ಜನ ಎಕ್ಸೈಟ್ ಆಗಿದ್ದಾರೆ. ಇನ್ನೂ ಹಲವರು ಇದು ಕೇವಲ ರೀಲ್ ಅಂತ ಗೊತ್ತಾಗಿ ನಿರಾಸೆಯಾಗಿದ್ದಾರೆ.
ಅಂದ್ಹಾಗೆ, ಇದು ಜಾಹೀರಾತು ಚಿತ್ರೀಕರಣ. ನಟಿ ರಶ್ಮಿಕಾ ಮಂದಣ್ಣ ಅವರು ಸಂತೂರ್ ಕಂಪನಿಗೆ ರಾಯಭಾರಿಯಾಗಿ ನೇಮಕವಾಗಿದ್ದು, ನೂತನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಜೊತೆ ದೇವರಕೊಂಡ ಸಹ ಈ ಜಾಹೀರಾತಿನಲ್ಲಿ ನಟಿಸಿದ್ದಾರೆ. ಇದಕ್ಕೂ ಮುಂಚೆ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಫೋಟೋ ಹಂಚಿಕೊಂಡಿದ್ದರು. ದೇವರಕೊಂಡ ಕೈಯಲ್ಲಿ ಉಡುಗೊರೆ ಇದ್ದ ಹಿಂಬದಿಯ ಫೋಟೋ ಶೇರ್ ಮಾಡಿ, ಇದು ಯಾರು ಗೆಸ್ ಮಾಡಿ ಎಂದು ಕೇಳಿದ್ದರು. ಆಗ ಬಹುತೇಕರು ಇದು ದೇವರಕೊಂಡ ಎಂದು ಗೆಸ್ ಮಾಡಿದ್ದರು.
ಒಟ್ಟಾರೆ ಡುಪ್ ಆಗ್ಲಿ ರಿಯಲ್ ಆಗ್ಲಿ ಆನ್ ಸ್ಕ್ರೀನ್ ಆಫ್ ಸ್ಕ್ರೀನ್ ಈ ಜೋಡಿ ನಡುವಿನ ಕೆಮಿಸ್ಟ್ರಿ , ಕನೆಕ್ಷನ್ ಗಮನಿಸಿರುವ ನೆಟ್ಟಿಗರು ಇವರಿಬ್ಬರ ನಡುವೆ ಪಕ್ಕಾ ಒಂದು ಕ್ಯೂಟ್ ಲವ್ ಕಹಾನಿ ಇದೇ ಅಂತಲೇ ಗಾಸಿಫ್ ಮಾಡ್ತಾಯಿರುತ್ತಾರೆ.
ಇತ್ತೀಚೆಗೆ ಮುಂಬೈ ಹೋಟೆಲ್ ನಲ್ಲಿ ಇಬ್ಬರು ಒಟ್ಟಾಗಿ ಡಿನ್ನರ್ ಮಾಡಿ ಹಹೊರ ಬರುವಾಗ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದ್ದರು. ಬಳಿಕ ಹೈದ್ರಾಬಾದ್ ಜಿಮ್ ನಲ್ಲಿ ಒಟ್ಟಿಗೆ ವರ್ಕೌಟ್ ಮುಗಿಸಿ ಹೊರಬಂದಾಗಲೂ ಸಿಕ್ಕಿಹಾಕಿಕೊಂಡಿದ್ದರು.