ಸಿನಿಮಾರಂಗದ ಕಾರ್ಮಿಕರಿಗೆ ನೆರವಾದ ಮೆಗಾಸ್ಟಾರ್ – ಉಚಿತ ಕೊರೊನಾ ಲಸಿಕೆ..!

1 min read

ಸಿನಿಮಾರಂಗದ ಕಾರ್ಮಿಕರಿಗೆ ನೆರವಾದ ಮೆಗಾಸ್ಟಾರ್ – ಉಚಿತ ಕೊರೊನಾ ಲಸಿಕೆ..!

ಹೈದ್ರಾಬಾದ್ : ದೇಶದೆಲ್ಲೆಡೆ ಕೊರೊನಾ 2 ಅಲೆ ಅಪ್ಪಳಿಸಿದ್ದು, ಜನರು ಕಂಗಾಲಾಗಿದ್ದಾರೆ. ಮತ್ತೊಂದೆಡೆ  ಸಾವಿನ ಸಂಖ್ಯೆಯು , ಸೋಂಕಿತರ ಸಂಖ್ಯೆಯೂ ಸರ್ವಕಾಲೀನ ದಾಖಲೆ ಬರೆದಿದೆ.. ಮತ್ತೊಂದೆಡೆ  ದೇಶಾದ್ಯಂತ ಲಸಿಕೆ ಅಭಿಯಾನವು ಜಾರಿಯಲ್ಲಿದ್ದು, ಜನರಿಗೆ ಲಸಿಕೆ ಪಡೆಯುವಂತೆ ಸರ್ಕಾರ ಸೂಚನೆ ನೀಡಿದೆ.

ಇನ್ನೂ ಇಂತಹ ಸಂಕಷ್ಟ ಸಮಯದಲ್ಲಿ ಹಲವಾರು ಗಣ್ಯರು , ಸಮಾಜಜ ಸೇವಕರು ಜನರಿಗೆ ಸಹಾಯಾಸ್ತ ಚಾಚುತ್ತಿದ್ದಾರೆ. ಇತ್ತ ಮೆಗಾಸ್ಟಾರ್ ಚಿರಂಜೀವಿ ಅವರು ಸಿನಿಮಾರಂಗದಲ್ಲಿ ಕೆಲಸ ಮಾಡುವವರಿಗೆ ಉಚಿತ ಕೊರೊನಾ ಲಸಿಕೆ ನೀಡಲು ಮುಂದಾಗಿದ್ದಾರೆ. ಅಪೋಲೋ ಫೌಂಡೇಶನ್ ಜೊತೆ ಸೇರಿ ಈ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಉಚಿತ ಕೊರೊನಾ ಲಸಿಕೆ ಮತ್ತು ರಿಯಾಯಿತಿ ದರದಲ್ಲಿ ಔಷಧಿಗಳನ್ನು ಪೂರೈಸಲು ರೆಡಿಯಾಗಿದ್ದಾರೆ.

ಒಂದು ತಿಂಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಸಿನಿಮಾ ಕಾರ್ಮಿಕರು ಮತ್ತು ಸಿನಿಮಾ ಪತ್ರಕರ್ತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವ ಮೂಲಕ ವ್ಯಾಕ್ಸಿನ್ ಪಡೆಯಬಹುದು. ಈ ಬಗ್ಗೆ ಸ್ವತಃ ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ. ಚಿರಂಜೀವಿ ಈ ಮಹತ್ವದ ಕಾರ್ಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮುಂದುವರೆದ ಕೊರೊನಾ ರಣಕೇಕೆ : 24 ಗಂಟೆಗಳಲ್ಲಿ 2,95,041 ಕೇಸ್ ದೃಢ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd