BIGGBOSS 8 – ಒಬ್ಬ ವ್ಯಕ್ತಿ ಮೇಲೆ ಇಷ್ಟು ಅನ್ಯಾಯವೇ..? ನಾನು 36 ಗಂಟೆಗಳ ಕಾಲ ಊಟ ಮಾಲ್ಲ – ಸಂಬರಗಿ..!
ಬೆಂಗಳೂರು : ಬಾಸ್ ಮನೆಯಲ್ಲಿ ಸದಾ ಎಲ್ಲರ ಬಳಿ ಕಾಲು ಕೆರೆದುಕೊಂಡು ಜಗಳ ಮಾಡುವ , ಸುಖಾ ಸುಮ್ಮನೆ ಕಾರಣವೇ ಇಲ್ಲದೆ ವಯಕ್ತಿಕ ವಿಚಾರಗಳನ್ನ ಇಟ್ಟುಕೊಂಡು ಗಲಾಟೆ ಮಾಡಿಕೊಳ್ಳುವ ಸದಸ್ಯ ಅಂದ್ರೆ ಅದು ಪ್ರಶಾಂತ್ ಸಂಬರಗಿ..
ಇವರ ವರ್ತನೆ ಜನರಿಗೆ ವಿಚಿತ್ರ ಇನ್ನಿಸುವ ಜೊತೆಗೆ ಕೆಲವೊಮ್ಮೆ ಕೋಪವನ್ನೂ ಬರಿಸುತ್ತೆ. ಅದು ಅಲ್ದೇ ಮಾತಿಗೆ ಮುಂಚೆ ಉಪವಾಸ ಮಾಡಿ ಪ್ರತಿಭಟನೆ ಮಾಡುವುದು ಸಂಬರಗಿ ಹಳೆ ಚಾಳಿ.. ಇದೀಗ ಸಂಬರಗಿ ಅಂತಹದ್ದೇ ಹೈಡ್ರಾಮಾ ಮಾಡಿದ್ದಾರೆ.
ಇದೀಗ ಮನೆಯಲ್ಲಿ ಕ್ಯಾಪ್ಟನ್ಸಿ ಟಾಕ್ಸ್ ನಲ್ಲಿ ಗಲಾಟೆ ನಡೆದಿದೆ. ಇದೇ ಕಾರಣಕ್ಕೆ ಸಂಬರಗಿ 36 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್ಗೆ ಸ್ಟರ್ಧಿಗಳನ್ನು ಆಯ್ಕೆ ಮಾಡಲು, ಬಿಗ್ ಬಾಸ್ ಈ ವಾರ ಚಟುವಟಿಕೆಯೊಂದನ್ನು ನೀಡಿದ್ದರು. ಮನೆಯ ಅಂಗಳದಲ್ಲಿ ನಿಂತಿರುವ ರೈಲು ಗಾಡಿಯಲ್ಲಿರುವ ಮೂರು ಬೋಗಿಗಳಲ್ಲಿ, ಮೊದಲ ಬೋಗಿಯಲ್ಲಿ ಮೂವರಿಗೆ ಕೂರಲು ಅವಕಾಶ ಇದೆ. ಎರಡನೇ ಬೋಗಿಯಲ್ಲಿ 7 ಜನ ಮತ್ತು ಕೊನೆಯ ಬೋಗಿಯಲ್ಲಿ ಇಬ್ಬರು ಇರಲಿದ್ದಾರೆ.
ಬಿಗ್ ಬಾಸ್ ನೀಡುವ ಟಾಸ್ಕ್ಗಳನ್ನು ಆಡುವ ಮೂಲಕ ಬೋಗಿಯಲ್ಲಿರುವ ಸದಸ್ಯರ ಸ್ಥಾನಗಳು ಅದಲು ಬದಲು ಆಗುತ್ತವೆ. ಮೂರು ದಿನ ಟಾಸ್ಕ್ ನಡೆಸಲಾಗಿದೆ. ಮೊದಲ ಬೋಗಿಯಲ್ಲಿ ಚಕ್ರವರ್ತಿ ಚಂದ್ರಚೂಡ್ ಮಂಜು ಪಾವಗಡ ಮತ್ತು ಅರವಿಂದ್ ಉಳಿದುಕೊಂಡರು. ಆ ಮೂಲಕ ಅವರು ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆಯಾದರು. ಆದರೆ, ಇದರಿಂದ ಪ್ರಶಾಂತ್ ಸಂಬರಗಿ ಬೇಸರ ಮಾಡಿಕೊಂಡಿದ್ದಾರೆ. ಕೊನೇ ಕ್ಷಣದಲ್ಲಿ ನಾನು ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆಯಾಗುವುದನ್ನು ತಪ್ಪಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಒಂದು ಷಡ್ಯಂತ್ರದ ರೂಪದಲ್ಲಿ ನನ್ನನ್ನು 2ನೇ ಸ್ಥಾನಕ್ಕೆ ನಿಲ್ಲಿಸಿ, ನನ್ನ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಆಡುವ ಹಕ್ಕನ್ನು ಕಿತ್ತುಕೊಂಡಿದ್ದಾರೆ. ನನ್ನ ಮಾತಿಗೆ ಬೆಲೆ ಇಲ್ಲದೇ ಇರುವುದು ಕಂಡುಬರುತ್ತಿದೆ. ಇದನ್ನು ನಾನು ಪ್ರತಿಭಟಿಸುವ ಸಲುವಾಗಿ 36 ಗಂಟೆಗಳ ಕಾಲ ಯಾವುದೇ ಆಹಾರ ಸೇವಿಸುವುದಿಲ್ಲ. ಉಪವಾಸ ಇರುತ್ತೇನೆ. ಈ ಗುಂಪುಗಾರಿಕೆ, ನನ್ನನ್ನು ಕ್ಯಾಪ್ಟನ್ಸಿಗೆ ಆಡಬಾರದು ಎಂದು ಹುನ್ನಾರ ಮಾಡಿದ್ದಾರಲ್ಲ, ಅದರ ವಿರುದ್ಧ ಪ್ರತಿಭಟನೆ ಮಾಡುತ್ತೇನೆ. ಈಗಿನಿಂದ ನನ್ನ ಉಪವಾಸ ಸತ್ಯಾಗ್ರಹ ಆರಂಭವಾಗಿದೆ ಎಂದು ಕ್ಯಾಮೆರಾ ಮುಂದೆ ಹೇಳಿದ್ದಾರೆ.
ಆತ ಸ್ಪೋರ್ಟ್ಸ್ ಮ್ಯಾನ್ ಅಂತ ಬೇರೆ ಹೇಳಿಕೊಳ್ಳೋತ್ತಾನೆ. ಕ್ರೀಡಾ ಸ್ಪೂರ್ತಿನೇ ಇರಲಿಲ್ಲ. ಮತ್ತೆ ಮೂರು ಜನ ಆಡೋಣ ಬಾ ಅಂತ ಕರೆದೆ ಬರಲಿಲ್ಲ. ಚಕ್ರವರ್ತಿ ನಾನು 36 ಗಂಟೆಗಳ ಕಾಲ ಉಪವಾಸ ಈಗ ಪ್ರಾರಂಭ ಮಾಡಿದ್ದೇನೆ. 36 ಅಲ್ಲ, 48 ಗಂಟೆಗಳವರೆಗೂ ಹೋಗ್ತಿನಿ. ಬಿಗ್ ಬಾಸ್ ಊಟ ಮಾಡಿ ಅನ್ನೋವರೆಗೂ ಹೋಗ್ತಿನಿ. ಒಬ್ಬ ವ್ಯಕ್ತಿ ಮೇಲೆ ಇಷ್ಟೊಂದು ಅನ್ಯಾಯವೇ. ಇಷ್ಟೊಂದು ಷಡ್ಯಂತ್ರವೇ. ಎಂದು ಚಕ್ರವರ್ತಿ ಮುಂದೆ ಪ್ರಶಾಂತ್ ತನ್ನ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇತ್ತ ಚಕ್ರವರ್ತಿ ಇದಕ್ಕೆ ಏನೂ ಪ್ರತಿಕ್ರಿಯಿಸದೇ ಸುಮ್ಮನಾಗಿದ್ದಾರೆ. ಮತ್ತೊಂದೆಡೆ ಮನೆ ಸದಸ್ಯರು ಎಂದಿನಂತೆ ಪ್ರಶಾಂತ್ ಸಂಬರಗಿಯ ನೌಟಂಕಿಯನ್ನ ನೋಡಿಯೂ ನೋಡದಂತೆ ಸಸುಮ್ಮನಾಗಿದ್ದಾರೆ.