BIGGBOSS 8 – ‘ಹೆಣ್ಣಿನ  ಹಿಂದೆ ನಾವ್ ಹೋದ್ರೆ ಚೀಪ್, ಅವರೇ ನಮ್ ಹಿಂದೆ ಬರ್ಬೇಕು’..!

1 min read

BIGGBOSS 8 – ‘ಹೆಣ್ಣಿನ  ಹಿಂದೆ ನಾವ್ ಹೋದ್ರೆ ಚೀಪ್, ಅವರೇ ನಮ್ ಹಿಂದೆ ಬರ್ಬೇಕು’..!

ಪ್ರಶಾಂತ್ ಸಂಬರಗಿ ಮುಂಚಿನಿಂದಲೂ ಮನೆ ಮಂದಿ ಜೊತೆ ಕಿತ್ತಾಡಿಕೊಂಡು ಪ್ರತಿಯೊಂದನ್ನೂ ವಿರೋಧಿಸಿಕೊಂಡು, ಕೆಲವೊಮ್ಮೆ ವಯಕ್ತಿ ವಿಚಾರಗಳನ್ನ ಇಟ್ಟುಕೊಂಡು ಗಲಾಟೆ ಮಾಡುವುದು..  ವಿವಾದಾತ್ಮಕ ಹೇಳಿಕೆಗಳನ್ನ ನೀಡಿಕೊಂಡೇ ಬಂದಿರುವವರು..  ಅಲ್ದೇ ಆಗಾಗ ಶಮಂತ್ ಗೌಡಗೆ ದಿವ್ಯಾ ಸುರೇಶ್ ನ ಪಟಾಯಿಸಿಕೊಳ್ಲೋಕೆ ಐಡಿಯಾ ಗಳನ್ನ ಕೊಟ್ಟಿದ್ದಾರೆ. ಸದ್ಯಕ್ಕೆ ಮನೆಯಲ್ಲಿ ಸಂಬರಗಿ , ಚಕ್ರವರ್ತಿ , ಶಮಂತ್ ಸ್ವಲ್ಪ ಕ್ಲೋಸ್ ಆಗಿದ್ದಾರೆ.  ಶಮಂತ್ ಗೆ ಆಗಾಗ ಒಂಟಿ ತನ ಕಾಡ್ತಿರುತ್ತೆ.. ಈ ಬಗ್ಗೆ ಹಲವು ಬಾರಿ ಸಂಬರಗಿ ಬಳಿ , ದಿವ್ಯಾ ಉರುಡುಗ ಬಳಿಯೂ ಹೇಳಿಕೊಂಡಿದ್ದರು. ಅದೇ ರೀತಿ ಇಂದು ಪ್ರಶಾಂತ್ ಸಂಬರಗಿ ಬಳಿ ಮತ್ತೆ ಈ ವಿಚಾರದ ಕುರಿತು ಹೇಳಿದ್ದು, ಇದಕ್ಕೆ ಸಂಬರಗಿ ಬುದ್ಧಿವಾದ ಹೇಳಿದ್ದಾರೆ.

ಈ ಬಾರಿ ಮುಂದಿನ ವಾರ ಸುದೀಪ್ ಸರ್ ಶಮಂತ್ ಬಿಟ್ಟರೆ ನೀವು ಯಾರ ಹತ್ತಿರವೂ ಕಾಣಿಸಿಕೊಳ್ಳುವುದಿಲ್ಲವಲ್ಲ ಎಂದು ಹೇಳಬೇಕು, ಹಂಗ್ ಮಾಡ್ತೀನಿ ಎಂದು ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಅವರು ಕುಳಿತಾಗ ಶಮಂತ್ ಹೇಳುತ್ತಾರೆ. ಆಗ ಪ್ರತಿಕ್ರಿಯಿಸಿದ ಸಂಬರಗಿ, ಸುಮ್ನಿರು ನೀನು ಏನೂ ಮಾಡಬೇಡ. ಅವಾಗ್ಲೆ ಹೇಳಿದಿನಿ, ಹುಡ್ಗೀರನ್ನ ನೀನು ಚೇಸ್ ಮಾಡಬೇಡ, ಅವರು ನಿನ್ನನ್ನು ಚೇಸ್ ಮಾಡಬೇಕು.

ಲೈಫ್‍ನಲ್ಲಿ ಪಾಠ ಹೇಳಿಕೊಟ್ಟಿದ್ದೇನೆ ನಿನಗೆ ಎಂದು ಹೇಳಿದ್ದಾರೆ. ಹೆಣ್ಣಿನ ಹಿಂದೆ ನಾವು ಹೋದರೆ ಚೀಪ್, ಅವರು ನಮ್ಮ ಹಿಂದೆ ಬರಬೇಕು ಎಂದು ಬುದ್ಧಿವಾದ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶಮಂತ್, ನಾನು ಯಾರ ಹಿಂದೆ ಹೋದೆ ಇವಾಗ ಎಂದು ಪ್ರಶ್ನಿಸಿದ್ದಾರೆ.  ಶಮಂತ್ ಆರಂಭದಲ್ಲಿ ದಿವ್ಯಾ ಸುರೇಶ್ ಹಿಂದೆ ಬಿದ್ದಿದ್ದರು. ಆದ್ರೆ ಇದ್ಯಾವುದಕ್ಕೂ ದಿವ್ಯಾ ಕ್ಯಾರೇ ಅನ್ನದ ಕಾರಣ ಶಮಂತ್ ಸುಮ್ಮನಾಗಿದ್ರು.. ಬಳಿಕ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಪ್ರಿಯಾಂಕಾಗೆ ಕವನ ಬರೆದು ಇಂಪ್ರೆಸ್ ಮಾಡೋ ಪ್ರಯತ್ನ ಮಾಡಿದ್ರು. ಆದ್ರೆ ಪ್ರಿಯಾಂಕಾ ತಿಮ್ಮೇಶ್ ಇದಕ್ಕೆ ಕೇರ್ ಮಾಡಿಲ್ಲ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd