BIGGBOSS 8 : ದಿವ್ಯಾ ಬಳಿ ಕ್ಷಮೆ ಕೇಳಿ, ಚಕ್ರವರ್ತಿಯೇ ಇದಕ್ಕೆಲ್ಲ ರೂವಾರಿ ಎಂದ ಸಂಬರಗಿ..!
ಬಿಗ್ ಬಾಸ್ ಶೋ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿ ಮತ್ತೆ ಪುರಾರಂಭಾವಗಿದೆ.. ಈ ನಡುವೆ ಈಗಾಗಲೇ ಹೊರಗಡೆ ಹೋಗಿ ಎಪಿಸಸೋಡ್ ಗಳನ್ನ ನೋಡಿ ವಾಪಸ್ ತಪ್ಪುಗಳನ್ನ ಸರಿ ಪಡಿಸಿಕೊಂಡು ಹೊಸ ಗೇಮ್ ಸ್ಟ್ರಾಟರ್ಜಿಗಳೊಂದಿಗೆ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟಿದ್ದಾರೆ.. ಹಲವರಲ್ಲಿ ಬದಲಾವಣೆಗಳು ಕಾಣ್ತಿವೆ.. ಈ ನಡುವೆ ಫೈಟ್ ಗಳು ಕೂಡ ಆರಂಭವಾಗಿದೆ.. ಪರಸ್ಪರ ಭಿನ್ನಾಭಿಪ್ರಾಯಗಳು ಕಾಣುತ್ತಿವೆ..
ಅಂತೆಯೇ ದಿವ್ಯಾ ಸುರೇಶ್ ಹಾಗೂ ಸಂಬರಗಿ , ಸಂಬರಗಿ ಹಾಗೂ , ಚಕ್ರವರ್ತಿ , ನಿಧಿ ಹಾಗೂ ಅರವಿಂದ್ , ನಿಧಿ ಹಾಗೂ ಶುಭಾ ಪುಂಜಾ , ಚಕ್ರವರ್ತಿ ಹಾಗೂ ಮಂಜು ನಡುವೆ ಈಗಾಗಲೇ ಮನೆಯಲ್ಲಿ ಗಲಾಟೆ ನಡೆದಿದೆ.. ಈ ನಡುವೆ ಶೋ ಮತ್ತೆ ಶುರುವಾದ ಬಳಿಕ 2ನೇ ಬಾರಿಗೆ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ದರ್ಶನ ನೀಡಿ ಎಂದಿನಂತೆ , ಮನೆ ಮಂದಿಯ ಕಾಲೆಳೆಯುತ್ತಾ ಬುದ್ದಿವಾದ ಹೇಳುವ ಕೆಲಸ ಮಾಡಿದ್ದಾರೆ..
ಅದ್ರಂತೆ ಸಂಬರಗಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.. ಪ್ರಶಾಂತ್ ಸಂಬರಗಿ ಇತ್ತೀಚೆಗೆ ದಿವ್ಯಾ ಸುರೇಶ್ ವೈಯಕ್ತಿಕ ವಿಚಾರ ಕುರಿತಂತೆ ಅಣುಕಿಸಿದ್ದರು.. ಇದೇ ವಿಚಾರವಾಗಿ ಬಿಗ್‍ಬಾಸ್ ಪಂಚಾಯತಿಯಲ್ಲಿ ಪ್ರಶಾಂತ್ ಸಂಬರಗಿಯವರಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಂತರ ತಮ್ಮ ತಪ್ಪನ್ನು ಅರಿತ ಪ್ರಶಾಂತ್ ಸಂಬರಗಿಯವರು ದಿವ್ಯಾ ಸುರೇಶ್ ಬಳಿ ಹೋಗಿ, ನೀನು ಡಿಗ್ರಿ ಕಾಲೇಜ್ ಪಿಕ್ಚರ್ ಮಾಡಿರುವುದರ ಬಗ್ಗೆ ನನಗೆ ಗೊತ್ತೆ ಇರಲಿಲ್ಲ. ಈ ಡ್ರಾಮವನ್ನೆಲ್ಲಾ ನನ್ನ ತಲೆಗೆ ಹಾಕಿದ್ದು ಚಕ್ರವರ್ತಿ. ನನಗೆ ಏನು ಗೊತ್ತಿರಲಿಲ್ಲ ನಾನು ಹೇಳುತ್ತೇನೆ, ನೀನು ರಿಯಾಕ್ಟ್ ಮಾಡು ಅಂತ ಹೇಳಿದ್ದರು.
ನನ್ನನ್ನು ನೀನು ಕರ್ನಾಟಕದ ಜನತೆ ಮುಂದೆ ಸೆಕ್ಯೂರಿಟಿ ಗಾರ್ಡ್ ಎಂದು ಕರೆದಿದ್ದೆ, ಹಾಗಾಗಿ ನೀನು ನನಗೆ ಕ್ಷಮೆ ಕೇಳುತ್ತೀಯಾ ಎಂದು ಕೊಂಡಿದ್ದೆ. ನಿನಗೆ ನಾನು ಪ್ರತಿ ಬಾರಿ ಗೈಡೆನ್ಸ್ ನೀಡಿದ್ದೇನೆ. ಆದರೆ ಏನಾದರೂ ತಪ್ಪು ಮಾಡಿದ್ನಾ ಎಂದು ಕ್ಷಮೆಯಾಚಿಸಿದ್ದಾರೆ.
ಇದಕ್ಕೆ ದಿವ್ಯಾ ಸುರೇಶ್ ಕೂಡ ನಾನು ನಿಮ್ಮ ಬಗ್ಗೆ ಆ ಹೇಳಿಕೆ ನೀಡಬಾರದಿತ್ತು ಸಾರಿ ಎಂದು ಕ್ಷಮೆ ಕೋರಿದ್ದಾರೆ. ನಂತರ ನೀನು ಸೆಕ್ಯೂರಿಟಿ ಗಾರ್ಡ್ ಎಂದಿದ್ದಕ್ಕೆ ಅಷ್ಟೇ ಕೋಪ ಇತ್ತು. ಆದರೆ ಇದರ ರೂವಾರಿ ಚಕ್ರವರ್ತಿ ಚಂದ್ರಚೂಡ್ ಎಂದು ಹೇಳಿದ್ದಾರೆ.
ಬಳಿಕ ಕಿಚ್ಚ ಸುದೀಪ್ ಮುಂದೆ ಕೂಡ ಈ ರ್ಯಾಗಿಂಗ್ ರೂವಾರಿ, ಸ್ಕ್ರಿಪ್ಟ್ ರೈಟರ್ ಚಕ್ರವರ್ತಿಯವರು ನಾನು ಕೇವಲ ಪಾತ್ರ ತುಂಬಿದ್ದೆ ಅಷ್ಟೇ ನಾನು ದಿವ್ಯಾ ಸುರೇಶ್‍ಗೆ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಕೂಡ ಅವಳಿಂದ ಕ್ಷಮೆ ನಿರೀಕ್ಷಿಸಿದ್ದೆ. ಯಾಕೆಂದರೆ ನನ್ನನ್ನು ಸೆಕ್ಯೂರಿಟಿ ಗಾರ್ಡ್ ಎಂದು ಕರೆದಿದ್ದಳು. ನಾನು ಅವಳಿಗೆ ತಿಳಿ ಹೇಳಿದ್ದೆ, ಅವಳಿಗೆ ಒಳ್ಳೆಯಾದಗಲಿ ಎಂದು ಬಯಸಿದ್ದೆ. ಅದೊಂದು ಬೇಜಾರಿತ್ತು. ಆದರೆ ಅದು ಬಿಟ್ಟರೆ ಅವಳು ಸ್ವೀಟ್ ಗರ್ಲ್. ಅವಳು ನನಗೆ ಬೇಜಾರು ಮಾಡಿದಕ್ಕೆ, ನಾನು ಅವಳಿಗೆ ಬೇಜಾರು ಮಾಡಲು ಹೊರಟಿದ್ದೆ. ಅದು ನನ್ನ ಚಿಕ್ಕತನ. ಆದರೆ ನಾನು ಅದನ್ನು ಕ್ಷಮಿಸಿ ಮುಂದೆ ಹೋಗಬೇಕಾಗಿತ್ತು ಎಂದಿದ್ದಾರೆ. ಒಟ್ನಲ್ಲಿ ಈಗಾಗಲೇ ಕುಚುಕು ಗೆಳೆಯರಾದ ಸಂಬರಗಿ ಪ್ರಶಾಂತ್ ಸಂಬಂಧದ ನಡುವೆ ಬಿರುಕು ಮೂಡಿದ್ದು, ಸಂಬರಗಿಯ ಹೇಳಿಕೆಯ ನಂತರ ಮತ್ತಷ್ಟು ಭಿನ್ನಾಭಿಪ್ರಾಯಗಳು ಹೆಚ್ಚಾಗುವ ಸಾಧ್ಯತೆ ಇದೆ.