BIGGBOSS 8: ಮಂಜು ಆಸೆ ಈಡೇರಿಸಿ ಬಿಗ್ ಬಾಸ್..! -ವೈಲ್ಡ್ ಕಾರ್ಡ್ ನಲ್ಲಿ ಮತ್ತಿಬ್ಬರ ಎಂಟ್ರಿ

1 min read

ಮಂಜು ಆಸೆ ಈಡೇರಿಸಿ ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್ ಬಾಸ್..!

BIGGBOSS 8 – ವೈಲ್ಡ್ ಕಾರ್ಡ್ ನಲ್ಲಿ ಮತ್ತಿಬ್ಬರ ಎಂಟ್ರಿ…!

ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ದಿನೇ ದಿನೇ ಕಾಂಪಿಟೇಷನ್ ಹೆಚ್ಚಾಗುತ್ತಲೇ ಇದೆ. 6ನೇ ವಾರ ಪತ್ರಕರ್ತ ಚಂದ್ರಚೂಡ್ ಎಂಟ್ರಿಯಿಂದಾಗಿ ಮನೆಯವರು ಶಾಕ್ ಆಗಿದ್ದರು. ಜೊತೆಗೆ ಚಕ್ರವರ್ತಿ ಹೆಚ್ಚು ಲೈಮ್ ಲೈಟ್ ಗೂ ಬಂದಿದ್ದಾರೆ. ಚಕ್ರವರ್ತಿ ಬಂದ ಶಾಕ್ ನಿಂದಲೇ ಹೊರ ಬಂದಿರದ ಮನೆ ಮಂದಿಗೆ ಈಗ ಬಿಗ್ ಸರ್ಪ್ರೈಸ್ ಸಿಕ್ಕಿದೆ. ಆದ್ರೆ ಈ ಸರ್ಪ್ರೈಸ್ ನಿಂದ ಮನೆ ಸಸದಸ್ಯರು ಅಷ್ಟು ಖುಷಿಯಾಗಿದ್ದಾರೋ ಇಲ್ವೋ ಗೊತ್ತಿಲ್ಲ ಆದ್ರೆ ಲ್ಯಾಗ್ ಮಂಜುಗಂತು ಫುಲ್ ಖುಷ್ ಆಗಿರುತ್ತೆ.

ಯಾಕಂದ್ರೆ ಕಳೆದ ಶನಿವಾರ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಹುಡುಗಿಯರು ಬಂದಿದ್ರೆ ಚನ್ನಾಗಿರುತಿತ್ತು ಎಂದಿದ್ರು. ಇದೀಗ ಅವರ ಆಸೆ ಈಡೇರಿಸುವ ಬಿಗ್ ಬಾಸ್ ಮನೆಗೆ ಒಬ್ಬರಲ್ಲ ಇಬ್ಬರು ಹುಡುಯಗಿಯನ್ನ ಕಳುಹಿಸಿದ್ದಾರೆ. ಹೌದು ಬಿಗ್ ಬಾಸ್ ಮನೆಗೆ ಇಬ್ಬರು ಕ್ಯೂಟ್ ಸುಂರಿಯರ ಎಂಟ್ರಿಯಾಗಿದೆ. ಮನೆಯವರ ಇನ್ ಸೆಕ್ಯುರಿಟೀಸ್ ಹೆಚ್ಚಾಗಿದೆ. ನಿನ್ನೆ ಮನೆಗೆ ಪ್ರಿಯಾಂಕಾ ತಮ್ಮೀಶ್ ಹಾಗೂ ವೈಜಯಂತಿ ಆಡಿಗ ಎಂಟ್ರಿಕೊಟ್ಟಿದ್ದಾರೆ.

ಪ್ರಿಯಾಂಕಾ ತಿಮ್ಮೇಶ್

ಮುಖ್ಯವಾಗಿ ಪ್ರಿಯಾಂಕಾ ತಿಮ್ಮೇಶ್ ಕನ್ನಡಿಗರಿಗೆ ಚಿರಪರಿಚಿತರೇ. ಪ್ರಿಯಾಂಕಾ ತಿಮ್ಮೇಶ್ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೀತಿಯಿಂದ ಸಿರಿಯಲ್ ನಿಂದ ವೃತ್ತಿ ಜೀವನ ಆರಂಭಿಸಿದ ಈ ಭದ್ರಾವತಿ ಹುಡುಗಿ ಬಳಿಕ ಮೊದಲ ಸಿನಿಮಾ ಗಣಪದಲ್ಲಿ ಕಾಣಿಸಿಕೊಂಡಿದ್ದರು. ನಂತರ ಪಟಾಕಿ, ಭೀಮ ಸೇನಾ ನಳ ಮಹಾರಾಜ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಅವರ ನಟನೆಯ ಶುಗರ್ ಲೆಸ್ ಹಾಗೂ ಅರ್ಜುನ್ ಗೌಡ ಸಿನಿಮಾಗಳ ಸಹ ರಿಲೀಸ್ ಆಗಬೇಕಿದೆ.

ವೈಜಯಂತಿ ಆಡಿಗ

ಇವರು ಕೂಡ ‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ತಮ್ಮ ಕುಟುಂಬದ ಹೋಟೆಲ್ ಬ್ಯುಸಿನೆಸ್ ನೋಡಿಕೊಂಡಿದ್ದಾರೆ. ಈ ಇಬ್ಬರೂ ಸದಸ್ಯರನ್ನ ಮನೆ ಮಂದಿ ಆಧರದಿಂದಲೇ ಸ್ವಾಗತಿಸಿದ್ದಾರೆ. ಆದ್ರೆ ಮನಸ್ಸಿನಲ್ಲಿ ಕಾಂಪಿಟೇಶನ್ ಹೆಚ್ಚಾಯ್ರತು ಅನ್ನೋ ದುಗುಡವು ಇದ್ದೇ ಇರುತ್ತದೆ.

belagavi
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd