BIGGBOSS 8 : 72 ದಿನಗಳ ಹಿಂದೆ ನಾನು ನೋಡಿದ್ದ ಕೆಪಿ ಹೀಗೆ ಇರಲಿಲ್ಲ ಎಂದ ಕಿಚ್ಚ
ಲಾಕ್ ಡೌನ್ ಮುಗಿದ ನಂತರ ಮೂರನೇ ಬಾರಿಗೆ ವೀಕೆಂಡ್ ಸಂಚಿಕೆ ನಡೆದಿದ್ದು, ಕಿಚ್ಚ ಸುದೀಪ್ ಎಂದಿನಂತೆಯೇ ಮನರಂಜಿಸಿ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದು, ಬುದ್ದಿವಾದ ಹೇಳಿತ್ತಾ , ಸ್ಫರ್ಧಿಗಳ ಕಾಳೆಲೆದಿದ್ದಾರೆ.
ಈ ವೇಳೆ ಅರವಿಂದ್ ಬಗ್ಗೆ ಬೇಸರ ಹೊರಹಾಕಿರೋ ಕಿಚ್ಚ ಸುದೀಪ್ 72 ದಿನಗಳ ಹಿಂದೆ ನಾನು ನೋಡಿದ ಕೆಪಿ ಹೀಗಿರಲಿಲ್ಲ ಎಂದಿದ್ದಾರೆ. ಹೌದು.. ಅರವಿಂದ್ ಹಾಗೂ ಪ್ರಶಾಂತ್ ನಡುವೆ ಆದ ಜಗಳದ ವಿಚಾರವನ್ನು ಸುದೀಪ್ ಪ್ರಸ್ತಾಪ ಮಾಡಿ , ಈ ಬಗ್ಗೆ ಹೇಳೋಕೆ ಏನಾದ್ರೂ ಇದೆಯಾ ಎಂದು ಅರವಿಂದ್ ಗೆ ಕೇಳಿದರು. ಇದಕ್ಕೆ ಉತ್ತರಿಸಿದ ಅರವಿಂದ್, ನಾನು ಪ್ರೊವೋಕ್ ಮಾಡಿದೆ ಎಂದು ನನಗೆ ಅನ್ನಿಸಿತು. ಅಷ್ಟೆಲ್ಲ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಫೀಲ್ ಆಯಿತು ಎಂದರು ಅರವಿಂದ್ ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ.
ಹ್ಯಾಟ್ರಿಕ್ ಹೀರೋ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಸಿನಿತಾರೆಯರು
ಹಿಂದಿನ ರಾತ್ರಿ ದಿವ್ಯಾ ಉರುಡುಗ ಬಳಿ ಹೋಗಿ ನಾನು ಕ್ಷಮೆ ಕೇಳಿದ್ದೆ. ಅವಾಗಲೇ ಚಾಪ್ಟರ್ ಕ್ಲೋಸ್ ಆಗಿತ್ತು. ಕ್ಷಮಿಸಿ ಎಂದು ಅವರ ಬಳಿ ಹೇಳಿದ್ದೆ. ಕ್ಯಾಪ್ಟನ್ಸಿ ಮುಗಿದಾಗ ದಿವ್ಯಾಗೆ ನಾನು ಗುಡ್ ಜಾಬ್ ಎಂದೆ. ಆದಾಗ್ಯೂ ಅರವಿಂದ್ ಪ್ರೊವೋಕ್ ಮಾಡಿದ್ರು ಎಂದು ಪ್ರಶಾಂತ್ ಬೇಸರ ಹೊರ ಹಾಕಿದರು. ನಿಮಗೆ ಸಾರಿ ಕೇಳಬೇಕು ಎಂದು ಅನಿಸಿಲ್ಲವೇ ಎಂದು ಪ್ರಶಾಂತ್ ಅವರನ್ನು ಸುದೀಪ್ ಕೇಳಿದರು. ನಾನು ಅಷ್ಟಾಗಿ ಟೆಂಪರ್ ಕಳೆದುಕೊಳ್ಳುವುದಿಲ್ಲ. ಆದರೆ ಆದಿನ ನಾನು ನಿಜಕ್ಕೂ ನಿಯಂತ್ರಣ ಕಳೆದುಕೊಂಡಿದ್ದೆ. ಇದಕ್ಕೆ ಕ್ಷಮೆ ಕೂಡ ಕೇಳಿದೆ ಎಂದು ಪ್ರಶಾಂತ್ ಹೇಳಿದರು.
ದಿವ್ಯಾ ಅವರ ಕ್ಯಾಪ್ಟನ್ಸಿ ಮುಗಿಯಿತ್ತು ಎಂದು ಬಿಗ್‍ಬಾಸ್ ಹೇಳಿದಾಗ ಪ್ರಶಾಂತ್ ಅವರು ದಿವ್ಯಾ ಅವರ ಕ್ಯಾಪ್ಟನ್ಸಿ ಕುರಿತಾಗಿ ಹೊಗಳುತ್ತಾರೆ. ಆದರೆ ನೀವು ಇದನ್ನೆಲ್ಲ ನಂಬಬೇಡ, ಮುಂದೆ ಒಂದು ಹಿಂದೆ ಒಂದು ತರ ಪ್ರಶಾಂತ್ ಅವರು ಎಂದು ಹೇಳುತ್ತೀರಾ. ಆದರೆ ಅರವಿಂದ್ ಅವರೆ ದಿವ್ಯಾ ಅವರ ಬಳಿ ಪ್ರಾಶಾಂತ್ ಅವರು ಕ್ಷಮೆ ಕೇಳಿ ಸರಿಯಾಗಿತ್ತು. ಆದರೆ ನೀವು ಮತ್ತೆ ಜಗಳವನ್ನು ಪ್ರಾರಂಭ ಮಾಡಿದ್ದೀರಿ ಎಂದು ಸುದೀಪ್ ಅರವಿಂದ್ ಗೆ ಪ್ರಶ್ನಿಸಿದ್ದಾರೆ.
ಸುದೀಪ್ ಪ್ರಶ್ನೆಗೆ ಉತ್ತರಿಸಿದ ಅರವಿಂದ್, ಸಾರಿ ಕೇಳಿಲ್ಲ ಎಂದರು. ನಿಮ್ಮ ಮೇಲೆ ಏನು ಪ್ರಭಾವ ಬೀರಿತು ದಿವ್ಯಾ ಮತ್ತು ಪ್ರಶಾಂತ್ ನಡುವೆ ಒಪ್ಪಂದ ಇತ್ತು. ಆದರೆ ನೀವು ಅದನ್ನು ಉಲ್ಲಂಘಿಸಿದ್ದೀರಿ. ನೇರವಾಗಿ ಮಾತನಾಡಿ, ಸ್ವಂತ ಬುದ್ಧಿ ಇಲ್ಲವಾ ಎಂದು ನೀವೇ ಕೇಳ್ತಿರಿ. ಈಗ ನೀವು ಅದನ್ನೇ ಮಾಡಿದ್ದೀರಿ. ಇದು ನಿಮ್ಮ ವ್ಯಕ್ತಿತ್ವಕ್ಕೆ ಸರಿ ಕಾಣುತ್ತಿದೆಯೇ? 72 ದಿನಗಳ ಹಿಂದೆ ನೋಡಿದ ಕೆಪಿ ಹೀಗೆ ಇರಲಿಲ್ಲ. ಈಗ ಯಾಕೆ ಹೀಗಾದ್ರಿ. ಎಂದು ಸುದೀಪ್ ಪ್ರಶ್ನಿಸಿದರು. ಈ ವೇಳೆ ನಾನು ಪ್ರಭಾವಕ್ಕೆ ಒಳಗಾಗಿದ್ದು ಹೌದು ಎಂದು ಅರವಿಂದ್ ಒಪ್ಪಿಕೊಂಡರು.
ಖಾಸಗಿ ವಾಹಿನಿಯಿಂದ ರಕ್ಷಿತ್ ಶೆಟ್ಟಿ ತೇಜೋವಧೆ : ಸಿಂಪಲ್ ಸ್ಟಾರ್ ಪ್ರತಿಕ್ರಿಯೆ
ಎದರು ಮಾತನಾಡು ಎಂದು ಹೇಳುತ್ತಿರಾ ಪ್ರತಿಯೊಬ್ಬರು ಆದರೆ ನೀವು ಎಲ್ಲರೂ ಹಿಂದೆ ಇಂದ ಮಾತನಾಡುತ್ತೀರಾ. ನನಗೆ ಗೊತ್ತು. ಒಳ್ಳೆಯದ್ದು, ಕೆಟ್ಟದ್ದು ಎಲ್ಲವನ್ನೂ ಮಾತನಾಡುತ್ತಿರ. ಯಾಕೆಂದ್ರೆ ನಿಮಗೆಬೇರೆ ವಿಷಯವಿಲ್ಲ. ಮಾತನಾಡಿ ಆದರೆ ಮಾತನಾಡುವುದೇ ಇಲ್ಲ ಎಂದು ಹೇಳಬೇಡಿ. ಜಗಳ ಮಾಡುವುದು ಮುಖ್ಯವಲ್ಲ. ಆದರೆ ಇದರ ಅವಶ್ಯಕತೆ ಇದೆಯಾ ಎಂದು ಯೋಚಿಸಿ ಎಂದು ಸುದೀಪ್ ಹೇಳಿದ್ದಾರೆ. ಆಗ ಅರವಿಂದ್, ಪ್ರಶಾಂತ್, ಚಕ್ರವರ್ತಿ ಸುದೀಪ್ ಅವರ ಬಳಿ ಕೈ ಮುಗಿದು ಕ್ಷಮೆ ಕೇಳಿದ್ದಾರೆ.
ಒಟ್ಟಾರೆ ಇನ್ನೂ ಬಿಗ್ ಬಾಸ್ ಗ್ರಾಂಡ್ ಫಿನಾಲೆಗೆ ಕೆಲವೇ ದಿನಗಳು ಬಾಕಿಯಿದ್ದು, ಸೋಲೋದ್ಯಾರು ಗೆಲ್ಲೋದ್ಯಾರು ಲೆಕ್ಕಾಚಾರಗಳು ಶುರುವಾಗಿವೆ.. ಅದ್ರಲ್ಲೂ ಶೋ ಅರ್ಧಕ್ಕೆ ನಿಂತು ಎಲ್ಲರೂ ಹೊರಗಡೆ ಹೋಗಿ ಮತ್ತೆ ದೊಡ್ಮನೆಗೆ ಮನೆಗೆ ಬಂದ ನಂತರ ಎಲ್ಲರೂ ಬದಲಾದ ವರಸೆಯಲ್ಲಿ ಕಾಣಿಸಿಕೊಂಡಿದ್ದಾರೆ.. ಆಪ್ತರ ನಡುವೆ ಗಲಾಟೆಗಳು ಆಗಿರುವ ಉದಾಹರಣೆಗಳೂ ಇವೆ.