ಹ್ಯಾಟ್ರಿಕ್ ಹೀರೋ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಸಿನಿತಾರೆಯರು

1 min read

ಹ್ಯಾಟ್ರಿಕ್ ಹೀರೋ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಸಿನಿತಾರೆಯರು

ಓಂ ಮೂಲಕ ಸಿನಿಮಾ ರಂಗದಲ್ಲಿ ಪಾತಕ  ಲೋಕ ಪರಿಚಯಿಸಿ ಸೆನ್ಷೇಷನ್ ಕ್ರಿಯೇಟ್ ಮಾಡಿ ಸ್ಯಾಂಡಲ್ ವುಡ್ ನಲ್ಲಿ ‘ವಜ್ರಕಾಯ’ನಾಗಿ ನಾಗಿ ಮೆರೆದು, ಅಪಾರ ಅಭಿಮಾನಿಗಳನ್ನ ಸಂಪಾದನೆ ಮಾಡಿರುವ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರಿಗೆ ಇಂದು 59ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಸೂಪರ್ ಹಿಟ್ ಸಿನಿಮಾಗಳನ್ನ  ನೀಡುತ್ತಾ ಸ್ಯಾಮಡಲ್ ವುಡ್ ನಲ್ಲಿ ಇಷ್ಟು ವರ್ಗಳ ಕಾಲ ಆಳಿರುವ ಶಿವಣ್ಣನ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು , ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾ ಮೂಲಕವೇ ವಿಶ್ ಮಾಡ್ತಾ ಇದ್ದಾರೆ..

ಶಿವಣ್ಣ ಕುಟುಂಬದ ಜೊತೆ ತುಂಬಾ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ರಾತ್ರಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಸಂಭ್ರಮಿಸಿದ್ದಾರೆ. ಕೇಕ್ ಕತ್ತರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹುಟ್ಟುಹಬ್ಬ ಆಚರಣೆ ಇಲ್ಲದಿದ್ದರೂ ಅಭಿಮಾನಿಗಳು ಮತ್ತು ಗಣ್ಯರ ಪ್ರೀತಿಯ ಶುಭಾಶಯಗಳು ಹರಿದುಬರುತ್ತಿದೆ.

ಇನ್ನು ಚಿತ್ರರಂಗದ  ಸ್ಟಾರ್ ಗಳು ಶಿವಣ್ಣನಿಗೆ ಸೋಷಿಯಲ್ ಮೀಡಿಯಾದ ಮೂಲಕ ವಿಶ್ ಮಾಡ್ತಾ ಇದ್ದಾರೆ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

“ಬಹುಮುಖ ಪ್ರತಿಭೆ ಅದ್ಭುತ ವ್ಯಕ್ತಿ. ನಿಮಗೆ ಜನ್ಮದಿನದ ಶುಭಾಶಯಗಳು ಶಿವಣ್ಣ. ಆರೋಗ್ಯ ಮತ್ತು ಸಂತೋಷದಿಂದ ಇರಿ” ಎಂದು ಟ್ವೀಟ್ ಮಡಿದ್ದಾರೆ. 

ನಟ ಡಾಲಿ ಧನಂಜಯ್

“ಪ್ರೀತಿಯ ಅಣ್ಣನಿಗೆ ಹುಟ್ಟು ಹಬ್ಬದ ಶುಭಾಶಯ Love you forever” ಎಂದು ಬರೆದುಕೊಂಡು ವಿಡಿಯೋ ಹಂಚಿಕೊಳ್ಳುವ ಮೂಲಕ ವಿಶ್ ಮಾಡಿದ್ದಾರೆ.

ನಟ ರಮೇಶ್ ಅರವಿಂದ್

ರಮೇಶ್ ಅರವಿಂದ್ ನಮ್ಮೂರ ಮಂದಾರ ಹೂವೆ ಸಿನಿಮಾದ ಫೋಟೋವನ್ನು ರಮೇಶ್ ಅರವಿಂದ್ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ. “ನಮ್ಮೂರ ಮಂದಾರ ಹೂವೆ ಸಿನಿಮಾದಿಂದ ಇಲ್ಲಿಯ ವರೆಗೂ ಒಂದು ಸುದೀರ್ಘ ಪಯಣ ನಮ್ಮದು” ಎಂದು ಬರೆದುಕೊಂಡಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ

“ಸದಾ ‘ಆನಂದ’ವಾಗಿ ಕಾಣಸಿಗುವ Energyಗೆ ಸಮನಾರ್ಥಕ ಪದದಂತಿರುವ. ಮುತ್ತಣ್ಣ, ಓಂ ಸತ್ಯ, ಜೋಗಿ. ಅಣ್ಣತಂಗಿ, ಮಾದೇಶ, ಭಜರಂಗಿ ಹೀಗೆ ವಿವಿಧ ವೇಷಭೂಷ ತೊಟ್ಟು 125 ಚಿತ್ರಗಳಿದ್ದರೂ ಇನ್ನೂ ಚಿರಯುವಕರಂತೆ ಮಿನುಗುವ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ವಿಶ್ ಮಾಡಿದ್ದಾರೆ.

ಶಿವರಾಜ್ ಕುಮಾರ್ ಹುಟ್ಟುಹಬ್ಬದ ಸಂದರ್ಭ ಇಂದು ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2  ಸಿನಿಮಾದ  ಟೀಸರ್ ಬಿಡುಗಡೆ ಆಗಲಿದೆ.  ವಿಜಯ್ ಮಿಲ್ಟನ್ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ 123ನೇ ಸಿನಿಮಾದ ಹೆಸರು ಇಂದು ಘೋಷಣೆ ಆಗಲಿದೆ. ಈ ಸಿನಿಮಾದಲ್ಲಿ ನಟ ಧನಂಜಯ್ ಹಾಗೂ ಪೃಥ್ವಿ ಅಂಬರ್ ಸಹ ನಟಿಸುತ್ತಿದ್ದಾರೆ.

ರಿಷಬ್ ಶೆಟ್ಟಿ, ಶಿವಣ್ಣನಿಗಾಗಿ ನಿರ್ದೇಶಿಸಲಿರುವ 126ನೇ ಹೊಸ ಸಿನಿಮಾದ ಟೈಟಲ್ ಸಹ ಇಂದೇ ಘೋಷಣೆ ಆಗಲಿದೆ. ಶಿವಣ್ಣನಿಗಾಗಿ ಅನಿಲ್ ರವಿಪುಡಿ ನಿರ್ದೇಶಿಸಲಿರುವ ಸಿನಿಮಾ, ಹರ್ಷಾ ನಿರ್ದೇಶಿಸಲಿರುವ ವೇದ ಸಿನಿಮಾಗಳ ಬಗ್ಗೆಯೂ ಅಪ್‌ಡೇಟ್ ಇಂದು ಹೊರಬೀಳುವ ಸಾಧ್ಯತೆ ಇದೆ. ಶಿವರಾಜ್ ಕುಮಾರ್ ಅವರು ಅನೇಕ ಎವರ್ ಗ್ರೀನ್ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಜೋಗಿ , ಓಂ , ಭಜಜರಂಗಿ , ವಜ್ರಕಾಯ , ಸಾಕಷ್ಟು  ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಖಾಸಗಿ ವಾಹಿನಿಯಿಂದ  ರಕ್ಷಿತ್ ಶೆಟ್ಟಿ ತೇಜೋವಧೆ :  ಸಿಂಪಲ್ ಸ್ಟಾರ್  ಪ್ರತಿಕ್ರಿಯೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd