BIGGBOSS 8 – ‘ಅರವಿಂದ್ – ದಿವ್ಯಾ ಗ್ರ್ಯಾಂಡ್ ಫಿನಾಲೆಗೆ ಬರೋದು ಪಕ್ಕಾ’..!

1 min read

BIGGBOSS 8 – ‘ಅರವಿಂದ್ – ದಿವ್ಯಾ ಗ್ರ್ಯಾಂಡ್ ಫಿನಾಲೆಗೆ ಬರೋದು ಪಕ್ಕಾ’..!

ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಪ್ರಣಯ ಪಕ್ಷಿಗಳಂತೆ ಇರುವ ದಿವ್ಯಾ ಉರುಡುಗ ಹಾಗೂ ಅರವಿಮದ್ ನಡುವೆ ಪಕ್ಕಾ ಸಮ್ ಥಿಂಗ್ ಸಮ್ ಥಿಂಗ್ ಇದೆ ಅನ್ನೋದು ಮನೆಯ ಸದಸ್ಯರು ಹಾಗೂ ಪ್ರೇಕ್ಷಕರ ವಾದ. ಇಬ್ಬರೂ ಜೊತೆಯಲ್ಲಿಯೇ ಇರುವುದು, ತಿರುಗಾಡುವುದು, ಒಟ್ಟಾಗಿಯೇ ಕಾಣಿಸಿಕೊಳ್ಳುವುದು, ಹೀಗೆ ತುಂಬಾ ಕ್ಯೂಟ್ ಆಗಿ ಕಾಣಿಸಿಕೊಳ್ಳುವ ಈ ಜೋಡಿ ಗ್ರ್ಯಾಂಡ್ ಫಿನಾಲೆಯ ವರೆಗೂ ಬರೋದು ಪಕ್ಕಾ ಅಂತೆ..

ರಘು ಗೌಡ ಅಡುಗೆ ಮನೆಯಲ್ಲಿದ್ದ ವೈಷ್ಣವಿ ಮತ್ತು ದಿವ್ಯಾ ಉರುಡುಗ ಜೊತೆ ಗ್ರ್ಯಾಂಡ್ ಫಿನಾಲೆ ಹೇಗಿರುತ್ತೆ ಎಂದು ಚರ್ಚೆ ಮಾಡಿದ್ದಾರೆ. ಈ ವೇಳೆ ದಿವ್ಯಾ, ಅರವಿಂದ್ ಬಿಗ್‌ಬಾಸ್ ಮನೆಯಲ್ಲಿರುವ ಒಂದು ಜೋಡಿ ಎನಿಸಿಕೊಂಡು ಬಿಟ್ಟಿದ್ದಾರೆ. ಒಬ್ಬರಿಗೊಬ್ಬರು ಸದಾ ಜೊತೆಯಾಗಿ ಇರುತ್ತಾರೆ. ವೇದಿಕೆ ಮೇಲೆ ದಿವ್ಯಾ, ಅರವಿಂದ್ ಹೋಗ್ತಾರೆ, ಇಬ್ಬರಲ್ಲಿ ಯಾರ್ ಸೋತ್ರು ಲಾಸ್ ಇಲ್ಲ ಎಂಬುದು ದಿವ್ಯಾ ಮನಸ್ಸಿಲ್ಲಿದೆ ಎಂದು ರಘು ಹೇಳುತ್ತಾ ದಿವ್ಯಾ ಅವರ ಕಾಲೆಳೆದಿದ್ದಾರೆ.

ದಿವ್ಯಾ ಅಂದುಕೊಳ್ತಾ ಇರ್ತಾಳೆ, ಟಾಪ್ 2ರಲ್ಲಿ ಅರವಿಂದ್ ಮತ್ತು ದಿವ್ಯಾ. ಗೆದ್ರು, ಸೋತ್ರು ಕೂಡ ನೋವು ಮತ್ತು ಖುಷಿ ಎರಡೂ ಇರತ್ತೆ. ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ ಹೇಗೆ ರಿಯಾಕ್ಟ್ ಮಾಡಬೇಕು ಎಂದು ಎಷ್ಟು ಕನಸು ಕಂಡಿರುತ್ತಾಳೋ ಯಾರೋ ಒಬ್ಬರ ಕೈಯನ್ನು ಎತ್ತಿದ ಕೂಡಲೇ, ಒಬ್ಬರಿಗೊಬ್ಬರು ತಬ್ಬಿಕೊಂಡು, ನಿಂಗ್ ಬಂದ್ರೆ ಏನು, ನಂಗ್ ಬಂದ್ರೆ ಏನು. ವಿಲ್ ಯೂ ಮ್ಯಾರಿ ಮೀ..ಎಂದು ಅಲ್ಲಿಯೇ ಅರವಿಂದ್ ತಾಳಿ ಕಟ್ಟಿಬಿಡ್ತಾನೆ ಎಂದು ಅರವಿಂದ್ ಹೇಳಿದ್ದಾರೆ. ಈ ವೇಳೆ ದಿವ್ಯಾ ಜೋರಾಗಿ ನಕ್ಕಿದ್ದಾರೆ. ನನಗೆ ಲವ್ ಸ್ಟೋರಿ ಅಂದರೆ ತುಂಬ ಇಷ್ಟ. ಜೊತೆಯಲ್ಲಿ ಇದ್ದವರು ಲವ್ ಮಾಡೋದು ಚೆನ್ನಾಗಿರುತ್ತದೆ. ನನಗೆ ಆಗ್ತಾ ಇಲ್ವಲ್ಲಾ ಅಂತ ಹೊಟ್ಟೆ ಹುರಿ ಎಂದು ರಘು ಹೇಳಿದ್ದಾರೆ.

BIGGBOSS 8 – ದೊಡ್ಮನೆಯಲ್ಲಿ ಲೇಡಿ ಸ್ಪರ್ಧಿಗಳ ನಡುವೆ ಜಡೆ ಜಂಗಿ ಕುಸ್ತಿ..!

BIGGBOSS 8 – ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ನಿರೂಪಣೆ ಮಾಡಲ್ಲ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd