bigboss 8 : ಛಲ ಬಿಡದೇ ಕೊನೆ ವರೆಗೂ ಹೋರಾಡಿ ಫೈನಲ್ಸ್ ನಲ್ಲಿ ಹೊರನಡೆದ ಡಿಯು..!
ಬಿಗ್ ಬಾಸ್ ಸೀಸನ್ 8 ರ ವಿನ್ನರ್ ಆಗಿ ಮಂಜು ಪಾವಗಡ ಹೊರಹೊಮ್ಮಿದ್ದಾರೆ.. ಹಳ್ಳಿ ಹಕ್ಕಿಗೆ ಶುಭಾಷಯಗಳ ಮಹಾಪೂರವೇ ಹರಿದುಬರ್ತಾಯಿದೆ.. ಬೈಕ್ ರೇಸರ್ ಅರವಿಂದ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.. ಈ ನಡುವೆ ಟಾಪ್ 3 ಕಂಟೆಸ್ಟೆಂಟ್ ಆಗಿ ಫೈಬನಲ್ ಪ್ರವೇಶ ಮಾಡಿದ್ದ ದಿವ್ಯಾ ಉರುಡುಗ 3ನೇ ಟಾಪ್ ಕಂಟೆಸ್ಟೆಂಟ್ ಆಗಿ ಮನೆಯಿಂದ ಹೊರಬರಬೇಕಾಯ್ತು…
ಮನೆಯಲ್ಲಿ ಆರಂಭದಿಂದಲೇ ಪುರುಷ ಸದಸ್ಯರಿಗಿಂತಲೂ ತಾವೇನು ಕಡಿಮೆಯಿಲ್ಲ ಎನ್ನುವಂತಹ ರೀತಿಯಲ್ಲೇ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ದಿವ್ಯಾ ಮಹಿಳಾ ಸ್ಪರ್ಧಿಗಳ ಪೈಕಿ ಟಫ್ ಕಾಂಪಿಟೇಟರ್ ಎಂದೇ ಗುರುತಿಸಿಕೊಂಡಿದ್ದರು. ಅವರ ಆಟದ ಸ್ಪೂರ್ತಿ ಜೊತೆಗೆ ನೇರ ನುಡಿ , ಎಷ್ಟೇ ಕಷ್ಟದ ಸಂದರ್ಭ ಇದ್ರು ಎದುರಿಸುವ ದಿಟ್ಟತನ ಜೊತೆಗೆ ಅರವಿಂದ್ ಜೊತೆಗಿನ ಕ್ಯೂಟ್ ಕೆಮಿಸ್ಟ್ರಿ ಇಂದಾಗಿ ಪ್ರೇಕ್ಷಕರ ಗಮನ ತನ್ನತ್ತ ಸೆಳೆದುಕೊಂಡಿದ್ದ ಡಿಯು ಆರಂಭದಿಂದಲೂ ಲೈಮ್ ಲೈಟ್ ನಲ್ಲಿಯೇ ಇದ್ದರು..
ಒಬ್ಬರಿಗೆ ಗೆಲುವು ಅಗತ್ಯ, ಮತ್ತೊಬ್ಬರಿಗೆ ಗೆಲುವು ಅನಿವಾರ್ಯ – ವಿನ್ನರ್ ಘೋಷಣೆಗೂ ಮುನ್ನ ಚಕ್ರವರ್ತಿ ಅವರಾಡಿದ ಮಾತುಗಳಿವು..!
ಅರವಿಂದ್ ಮತ್ತು ಡಿಯು ಕೆಮಿಸ್ಟ್ರಿ ಫ್ಯಾನ್ಸ್ ಗೆ ತುಂಬಾನೇ ಹಿಡಿಸಿತ್ತು.. ಈ ಕ್ಯೂಟ್ ಜೋಡಿ ಹೆಸರಲ್ಲಿ ಆರ್ವಿಯಾ ಫ್ಯಾನ್ ಪೇಜ್ ಕೂಡ ಕ್ರಿಯೇಟ್ ಆಗಿತ್ತು.. ಈ ಮುದ್ದಾದ ಜೋಡಿ ಬಿಗ್ಬಾಸ್ ವೀಕ್ಷಕರಿಗೆ ಅತ್ಯಂತ ಹತ್ತಿರವಾದ ಜೋಡಿಯಾಗಿತ್ತು.
ಬಿಗ್ಬಾಸ್ ಮೊದಲ ಇನ್ನಿಂಗ್ಸ್ ಕೊನೆಯಲ್ಲಿ ಅನಾರೋಗ್ಯದ ನಿಮಿತ್ತವಾಗಿ ಆಚೆ ಬಂದಿದ್ದ ದಿವ್ಯಾ ಅವರು ಬಿಗ್ಬಾಸ್ ಫಿನಾಲೆ ಹಂತದವರೆಗೂ ಬರುತ್ತಾರೆ ಎಂದು ಯಾರೂ ಕೂಡಾ ಊಹೆ ಮಾಡಿರಲಿಲ್ಲ. ದಿವ್ಯಾ ಉರುಡುಗ ಆಟ ಎಂದು ಬಂದರೆ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಮನೆಯವರು ಜೊತೆಗೆ ಹೊಂದಿಕೊಂಡು ಇರುತ್ತಿದ್ದರು..
2 ಬಾರಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿ ಒಂದು ಬಾರಿ ಕಿಚ್ಚನ ಚಪ್ಪಾಳೆ ಪಡೆದಿದ್ದ ದಿವ್ಯಾ ಮಹಿಳಾ ಸ್ಪರ್ಧಿಗಳ ಪೈಕಿ ಬಲಿಷ್ಠ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲ ಆಟದ ಮಧ್ಯದಲ್ಲಿ ಟಾಸ್ಕ್ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದ ದಿವ್ಯಾ, ಕೈಗೆ ಏಟಾಗಿದ್ದನ್ನೂ ಲೆಕ್ಕಿಸದೇ ಟಾಸ್ಕ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತಾವು ಸ್ಟ್ರಾಂಗ್ ಕಂಟೆಸ್ಟೆಂಟ್ ಅನ್ನೋದಕ್ಕೆ ಸಬೂತು ನೀಡಿದ್ದರು.. ಆದ್ರೆ ಫಿನಾಲೆವರೆಗೂ ಬಂದು 2ನೇ ರನ್ನರ್ ಅಪ್ ಆಗಿ ಹೊರನಡೆದರು..
ಬಿಗ್ ಬಾಸ್ ಸೀಸನ್ 8ರಲ್ಲಿ ನಿರೀಕ್ಷೆಯಂತೆಯೇ ಮಂಜು ಪಾವಗಡ ಅವರು ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಮೊದಲನೇ ರನ್ನರ್ ಅಪ್ ಅರವಿಂದ್ ಕೆಪಿ ಆದ್ರೆ 2ನೇ ರನ್ನರ್ ಅಪ್ ದಿವ್ಯಾ ಉರುಡುಗ ಆಗಿದ್ದಾರೆ. ಮಂಜು ಪಾವಗಡ ಆರಂಭದಿಂದ್ಲೂ ಮನೆ ಮಂದಿಯನ್ನ , ಪ್ರೇಕ್ಷಕರನ್ನ ನಗಿಸುತ್ತಾ ನಗುತ್ತಾ ಆಟವಾಡುತ್ತಾ ಜನರ ಮನಸನ್ನ ಗೆದ್ದು ಇಂದು ಟ್ರೊಫಿಯ ಹಕ್ಕುದಾರರಾಗಿದ್ದಾರೆ.. ಅವರಿಗೆ ಬಿಗ್ ಬಾಸ್ ಕಡೆಯಿಂದ 53 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ..