ಮನೆಯಲ್ಲಿ ಮತ್ತೊಂದು ಹೈಡ್ರಾಮಾ – ನನಗೆ ಚಪ್ಪಳಿಯಲ್ಲಿ ಹೊಡೆಯಿರಿ ಎಂದ ಚಕ್ರವರ್ತಿ..!

1 min read

ಮನೆಯಲ್ಲಿ ಮತ್ತೊಂದು ಹೈಡ್ರಾಮಾ – ನನಗೆ ಚಪ್ಪಳಿಯಲ್ಲಿ ಹೊಡೆಯಿರಿ ಎಂದ ಚಕ್ರವರ್ತಿ..!

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಬಮದಾಗಿನಿಂದಲೂ ಒಂದಲ್ಲಾ ಒಂದು ಹೈಡ್ರಾಮಾಗಳಲ್ಲಿ ಮೇನ್ ಕ್ಯಾರೆಕ್ಟರ್ ಆಗಿರುತ್ತಾರೆ ಚಂದ್ರಚೂಡ್ ಚಕ್ರವರ್ತಿ .. ಮನೆಗೆ ಬಂದಾಗಿನಿಂದಲೂ ನೇರ ನುಡಿ , ಕಹಿ ಮಾತಗಳಿಮದಲೇ ಇತರೇ ಸ್ಪರ್ಧಿಗಳ ವಿರೋಧ ಕಟ್ಟಿಕೊಂಡಿರುವ ಚಕ್ರವರ್ತಿ ಸ್ಪರ್ಧಿಗಳ ಜೊತೆ ಜಂಗಿ ಕುಸ್ತಿಗೂ ಇಳಿದಿದ್ದಾರೆ. ಇಂತಹ ಚಕ್ರವರ್ತಿ ಇದೀಗ ತನಗೆ ಚಪ್ಪಳಿಯಲ್ಲಿ ಹೊಡೆಯಿರಿ ಎಂದು ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹೌದು.. ಬಿಗ್‍ಬಾಸ್ ನೀಡಿದ ಟಾಸ್ಕ್ ಒಂದನ್ನು ಮಂಜು, ಅರವಿಂದ್ ಮತ್ತು ರಾಜೀವ್ ಅವರು ಮಾಡಿದರು. ಇದರ ಕುರಿತು ಮಾತಿಗಿಳಿದ ಚಕ್ರವರ್ತಿ ಬಿಗ್‍ಮನೆಯಲ್ಲಿ ಟಾಸ್ಕ್ ಕೊಟ್ಟಾಗ ನಾವು ಆಟ ಆಡಿ ತೋರಿಸುತ್ತೇವೆ ಎಂದಾಗ ಕೆಲವರು ಈ ಆಟವನ್ನು ಇಂತವರೇ ಆಡಲಿ ಎಂದು ಬೊಟ್ಟು ಮಾಡುತ್ತಾರೆ. ನಾವು ಆಟವಾಡಲು ಸಿದ್ಧರಾದರೆ. ಬೇಡ ಎಂದು ಹೇಳುತ್ತಾರೆ. ಅಂತವರ ವಿರುದ್ಧ ನಾನು ಧ್ವನಿ ಎತ್ತುತ್ತೇನೆ ಆದರೆ ನನ್ನಿಂದ ಮನೆಯಲ್ಲಿ ಜಗಳವಾಗುವುದು ಬೇಡ ಎಂದು ಸುಮ್ಮನಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಕೇಳಿಸಿಕೊಂಡ ಮಂಜು, ಅರವಿಂದ್ ಮತ್ತು ರಾಜೀವ್ ನೀವು ಆಟ ಆಡಬಾರದು ಎಂದು ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಚಕ್ರವರ್ತಿ ನಾನು ಆಟವಾಡಲು ಹೊರಟಾಗ ನಿಧಿ ಅವರು ರಾಜೀವ್ ಅವರು ಆಟವಾಡಲಿ. ನೀವು ಆಟವಾಡುವುದು ಬೇಡ ಎಂದಿದ್ದರು ಎಂದರು. ಇದಕ್ಕೆ ಗರಂ ಆದ ನಿಧಿ ಎಲ್ಲದಕ್ಕೂ ನನ್ನ ಹೆಸರನ್ನು ತೆಗೆದುಕೊಳ್ಳಬೇಡಿ ನಾನು ನೀವು ಆಡಬಾರದು ಎಂದು ಹೇಳಿಲ್ಲ ಎಂದರು.

ನಂತರ ಚಕ್ರವರ್ತಿ ನಾನು ಆಡುತ್ತೇನೆ ಎಂದು ಕೈ ಎತ್ತಿದಾಗ ಬೇಡ ರಾಜೀವ್ ಆಡಲಿ ಎಂದು ನಿಧಿ ಹೇಳಿದ್ದು ಕೇಳಿಸಿಕೊಂಡಿದ್ದೇನೆ ಎಂದರು. ನಂತರ ಮಾತಿನ ಚಕಮಕಿ ಜೋರಾಗಿ ಚಕ್ರವರ್ತಿ ನಾನು ರಘು, ಸಂಬರಗಿ ಮತ್ತು ಶಮಂತ್ ಜೊತೆಗಿದ್ದೆ ಆ ಸಂದರ್ಭ ನಾನು ನಿಧಿ ಅವರ ಬಗ್ಗೆ ಮಾತನಾಡಿದ್ದೆ ಎಂದು ಅವರು ಹೇಳಿದರೆ ನನಗೆ ನೀವು ಚಪ್ಪಲಿಯಲ್ಲಿ ಹೊಡಿಯಿರಿ ಎಂದರು.

ಒಟ್ಟಾರೆ ಒಂದಂತೂ ನಿಜ ಏನೇ ಗಲಾಟೆ ಗದ್ದಲಗಳಿರಲಿ ಇತ್ತೀಚೆಗೆ ಆ ಲಿಸ್ಟ್ ನಲ್ಲಿ ಒಂದೋ ನಿಧಿ ಇಲ್ಲಾ ಪ್ರಶಾಂತ್ ಇಲ್ಲ ಚಕ್ರವರ್ತಿ ಅದಕ್ಕೂ ಮೀರಿ ದಿವ್ಯಾ ಸುರೇಶ್ ಹೆಸರು ಹೆಚ್ಚಾಗಿಯೇ ಕೇಳಿಬರುತ್ತಿರೋದನ್ನ ಅಲ್ಲೆಗಳೆಯುವಂತಿಲ್ಲ.

ಏರ್ ಆಂಬ್ಯುಲೆನ್ಸ್ ಮೂಲಕ ಕೊರೊನಾ ಸೋಂಕಿತೆಗೆ ಚಿಕಿತ್ಸೆ ಕೊಡಿಸಿದ ‘ರಿಯಲ್ ಹೀರೋ’ ಸೋನು..!

ಡಾ. ರಾಜ್ ಕುಮಾರ್ ಅವರ 92ನೇ ಹುಟ್ಟುಹಬ್ಬ : ವರನಟನ ನೆನಪಲ್ಲಿ ವಿಶೇಷ ಹಾಡು ಹಾಡಿದ ಅಪ್ಪು..!

ಪ್ರೀತಿಯ ಹೊಸ ಮಾರ್ಗ ಹುಡುಕುವ 4 ವಿಭಿನ್ನ ಕಥೆಗಳು

ಇಡೀ ಭಾರತದ ಅತಿ ಹೆಚ್ಚು ಸಿನಿಪ್ರಿಯರು ಕಾಯುತ್ತಿರುವ ಸಿನಿಮಾ ಯಾವುದು ಗೊತ್ತಾ..! ಬುಕ್ ಮೈ ಶೋ ನಲ್ಲಿ ರೆಕಾರ್ಡ್ ಮುರಿದ ‘ರಾಖಿ ಭಾಯ್”..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd