BIGGBOSS 8 : ವಿಶ್ವನಾಥ್ ಗೆ ಚಕ್ರವರ್ತಿ ಕೊಟ್ಟ ಸಲಹೆ ಏನು..? ಅದಕ್ಕೆ ವಿಶ್ವ ಹೇಳಿದ್ದೇನು..?
ಬಿಗ್ ಬಾಸ್ 8 ನೇ ಆವೃತ್ತಿಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟಿರೋ ಚಕ್ರವರ್ತಿ ಮೊದಲ ದಿನವೇ ಸ್ಪರ್ಧಿಗಳ ಬಗ್ಗೆ ನೇರವಾಗಿ ಮಾತನಾಡಿ ಫೋಕಸ್ ಆಗಿದ್ದಾರೆ. ಇನ್ನೂ ಮನೆ ಮಂದಿಗಿಂತ ಒಂದು ತಿಂಗಳು ಹೆಚ್ಚಿಗೆ ಹೊರ ಜಗತ್ತು ನೋಡಿರುವ ಚಕ್ರವರ್ತಿ ಪ್ರತಿ ಮನೆಯವರಿಗೂ ಅಂಕಗಳನ್ನೂ ನೀಡಿದ್ರೂ.
ಇದೀಗ ಚಕ್ರವರ್ತಿ ಕಣ್ಣು ಬಿದ್ದಿರೋದು ಮನೆಯ ಕಿರಿಯ ಸದಸ್ಯ ವಿಶ್ವನಾಥ್ ಮೇಲೆ. ಹೌದು ವಿಶ್ವನಾಥ್ ಮುಂದೆ ಕೆಲ ವಿಷಯಗಳನ್ನ ಹಂಚಿಕೊಂಡಿರುವ ಚಕ್ರವರ್ತಿ, ಆಟ ಸೇರಿದಂತೆ ಮನೆಯಲ್ಲಿ ಹೆಚ್ಚು ಸಕ್ರಿಯನಾಗುವಂತೆ ಸಲಹೆ ನೀಡಿದ್ದಾರೆ.
ರಘು, ನಿಧಿ, ನನಗೆ ಸೇರಿದಂತೆ ಬಹುತೇಕರಿಗೆ ಈ ಅವಕಾಶ ಸಿಕ್ಕಿದ್ದು ನಮ್ಮ ಜೀವನದ ಸೆಕೆಂಡ್ ಹಾಫ್. ನಾವೆಲ್ಲ 40 ವರ್ಷ ಮೇಲ್ಪಟ್ಟವರು. ಆದ್ರೆ ನೀನು ಇನ್ನೂ ಚಿಕ್ಕವನು. ನಿನ್ನಲ್ಲಿರುವ ಟ್ಯಾಲೆಂಟ್ ಜನತೆಗೆ ತೋರಿಸು. ನಾವೆಲ್ಲ ಇಲ್ಲಿ ಬಂದಿರೋದು ನಮ್ಮ ಪ್ರತಿಭೆ ತೋರಿಸಲು ಎಂದು ಚಕ್ರವರ್ತಿ ಹೇಳಿದ್ರು. ನೀನು ನಿನ್ನ ಪ್ರತಿಭೆ ತೋರಿಸಬೇಕು ಅನ್ನೋದು ನನ್ನ ಆಸೆ ಎಂದು ಹೇಳಿದರು.
ಚಕ್ರವರ್ತಿ ಮಾತುಗಳಿಗೆ ಉತ್ತರಿಸಿದ ವಿಶ್ವನಾಥ್, ಬರೆಯೋದಕ್ಕೆ ಪೆನ್ನು, ಪೇಪರ್ ಇಲ್ಲ ಅನ್ನೋ ನೆಪ ಹೇಳಲ್ಲ. ಆದ್ರೆ ಇಲ್ಲಿಯ ಒತ್ತಡದಿಂದ ಆಗ್ತಿಲ್ಲ ಎಂದಿದ್ದಾನೆ. ಇನ್ನೂ ಅದೇನೇ ಸ್ಟ್ರೆಸ್ ಇರಲಿ, ನಾನು ನಿಂಗೆ ಸಾಹಿತ್ಯ ಬರೆದುಕೊಡ್ತೀನಿ ಅಂತ ಮಾತು ಕೊಟ್ಟರು.
ಕಬ್ಜ ಶೂಟಿಂಗ್ ವೇಳೆ ಉಪ್ಪಿ ತಲೆಗೆ ರಾಡ್ ತಗುಲಿ ಪೆಟ್ಟು..!
90 ಹೊಡಿ ಮನೇಗ್ ನಡಿ…. 500ನೇ ಸಿನಿಮಾಗೆ ನಾಯಕರಾದ ವೈಜನಾಥ ಬಿರಾದರ್..!
ಆ ಡೈರಕ್ಟರ್ ಜೊತೆ ರಶ್ಮಿಕಾ ಚರ್ಚೆ : ಬಾಲಿವುಡ್ ನಲ್ಲಿ ರಶ್ಮಿಕಾ ಸದ್ದು…
ರಾಬರ್ಟ್ , ಹೀರೋ ಬಳಿಕ ‘ಯುರತ್ನ’ನಿಗೂ ತಟ್ಟಿದ ಪೈರೆಸಿ ಬಿಸಿ..!