BIGGBOSS 8 : ರಘು ಗೌಡ ಈಗ ನಿಜವಾಗಿ ಆಟ ಆಡಲು ಶುರುಮಾಡಿದ್ದಾರೆ : ರಘುಗೌಡ ಪತ್ನಿ ವಿದ್ಯಶ್ರೀ

1 min read

BIGGBOSS 8 : ರಘು ಗೌಡ ಈಗ ನಿಜವಾಗಿ ಆಟ ಆಡಲು ಶುರುಮಾಡಿದ್ದಾರೆ : ರಘುಗೌಡ ಪತ್ನಿ ವಿದ್ಯಶ್ರೀ

ದೊಡ್ಮನೆಯಲ್ಲಿ ರಘುಗೌಡ ಸೈಲೆಂಟ್ ಆಗ್ತಿದ್ದಾರೆ ಅನ್ನೋ ಚರ್ಚೆಗಳ ನಡುವೆಯೇ ಅವರ ಪತ್ನಿ ವಿದ್ಯಶ್ರೀ ಅವರು ಈ ಬಗ್ಗೆ ಮಾತನಾಡಿದ್ದಾರೆ. ಮೊದಲವಾರ ಅವರು ಸರಿಯಾಗಿ ಆಟವಾಡಲಿಲ್ಲ. ಅಲ್ಲಿನ ವಾತಾವರಣ ಹಿಡಿಸಿರಲಿಲ್ಲ ಅನ್ನಿಸುತ್ತೆ. ಕುಟುಂಬದಿಂದ ದೂರ ಉಳಿಯುವುದು ಕಷ್ಟವಾಗಿತ್ತು. ಅದು ಅಲ್ದೇ 10 ದಿನಗಳ ಕಾಲ ಕ್ವರಂಟೈನ್ ಅಲ್ಲಿ ಇದ್ದದ್ದು ಕೂಡ ಪರಿಣಾಮ ಬೀರಿರುತ್ತೆ.

BIGGBOSS 8 : ಬಿಗ್ ಬಾಸ್ ಮನೆಯಿಂದ ಆಚೆ ಹೋಗುವ 3ನೇ ಸ್ಪರ್ಧಿ ಯಾರು..?

ಆದ್ರೆ 2ನೇ ವಾರದಿಂದ ಅವರು ಅವರ ಆಟವನ್ನ ಆಡಲು ಶುರು ಮಾಡಿದ್ದಾರೆ. ಈಗ ಅವರು ತಮ್ಮ ಸಾಮರ್ಥ್ಯದಿಂದ ಆಡುತ್ತಿರೋದನ್ನ ಜನರು ಗಮನಿಸಿದ್ದಾರೆ. ಅವರ ಪ್ರತಿಸ್ಪರ್ಧಿಗಳು ಅವರನ್ನ ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಅವಶ್ಯಕತೆಯಿದೆ ಎಂದಿದ್ದಾರೆ.

ಇನ್ನೂ ಅವರು ಜನರ ಬಳಿ ಬೆರೆಯಬೇಕು. ಹೆಚ್ಚು ಹೆಚ್ಚಾಗಿ ಅವರ ಜೊತೆ ಮಾತನಾಡಬೇಕು. ಇದ್ರಿಂದ ಅವರನ್ನ ಅರ್ಥ ಮಾಡಿಕೊಳ್ಳುವುದಕ್ಕೆ ಬೇರೆಯವರಿಗೆ ಸಹಾಯವಾಗುತ್ತೆ ಎಂದಿದ್ದಾರೆ. ಆದ್ರೂ ಅವರು ಪ್ರಮಾಣಿಕವಾಗಿದ್ದಾರೆ. ದಿನಗಳೆದಂತೆಲ್ಲಾ ಅವರು ಉತ್ತಮವಾಗಿ ಆಡುತ್ತಾ ಹೋಗ್ತಾರೆ. ಇನ್ನೂ ಅವರು ಟಾಸ್ಕ್ ಗಳನ್ನ ಸರಿಯಾಗಿ ಮಾಡಲ್ಲ ಅನ್ನೋ ಅನುಮಾನಗಳು ಮನೆಯರಿಗಲ್ಲಾ ಇದೆ. ಆದ್ರೆ ಬಹುಶಃ ಸುದೀಪ್ ಅವರ ಮಾತುಗಳು ರಘು ಅವರನ್ನ ಪ್ರೇರಿಪಿಸಬಹುದು ಎಂದಿದ್ದಾರೆ.

ಬಣ್ಣ ಬದಲಾಗಿದೆ…! ಆದ್ರೆ, ಅದೇ ಆತ್ಮವಿಶ್ವಾಸ.. ಅದೇ ಆಕ್ರಮಣಕಾರಿ ಪ್ರವೃತ್ತಿ.. ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಸ ಮಂತ್ರ…!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd