BIGGBOSS 8 – ಚಕ್ರವರ್ತಿ ತುಂಬಾ ಡಾಮಿನೇಟಿಂಗ್ ಎಂದು ರೇಟ್ ಕೊಟ್ಟ ಸದಸ್ಯರು..!
ಬೆಂಗಳೂರು : ದೊಡ್ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದುಕೊಂಡಿರುವ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಮೊದಲ ದಿನವೇ ಮನೆ ಸದಸ್ಯರಿಂದ ನಿಷ್ಠೂರಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಅವರ ನೇರ ನುಡಿ. ಮನೆಗೆ ಬರುತ್ತಿದ್ದಂತೆ ಸದಸ್ಯರೆಲ್ಲರಿಗೂ ಅವರ ಹಾವ , ಬಾವ, ನಡೆತೆಯ ಮೇಲೆ ಅವರಿಗೆ ಅಂಕಗಳನ್ನ ನೀಡಿ ಅನೇಕ ಸದಸ್ಯರ ದೃಷ್ಟಿಯಲ್ಲಿ ನೆಗೆಟಿವ್ ಇಮೇಜ್ ಮೂಡಿಸಿದ್ದಾರೆ.
ಆದ್ರೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸುದೀಪ್ ಇದೇ ಚಾನ್ಸ್ ಮನೆಯ ಇತರೇ ಸದಸ್ಯರಿಗೂ ಕೊಟ್ಟಿದ್ದಾರೆ. ಚಕ್ರವರ್ತಿಗೆ ಅಂಕ ನೀಡಿ ಕಾರಣ ತಿಳಿಸುವಂತೆ ಹೇಳಿದ್ದಾರೆ. ಈ ವೇಳೆ ಮನೆಯ ಬಹುತೇಕ ಸದಸ್ಯರೂ ½ ,0, -1, ಹೀಗೆ ಅಂಕಗಳನ್ನ ನೀಡಿದ್ದಾರೆ. ಇನ್ನೂ ಬಹುತೇಕ ಎಲ್ಲರೂ ಕೊಟ್ಟ ಕಾರಣ ಒಂದೇ ರೀತಿಯಲ್ಲೇ ಇದ್ದು, ಚಕ್ರವರ್ತಿ ಅವರ ಬಳಿ ಭಾಷೆಯ ಮೇಲೆ ಹಿಡಿತ ಇರಬಹುದು. ಅದನ್ನು ಇಟ್ಟುಕೊಂಡು ಬೇರೆ ಟ್ಯಾಲೆಂಟ್ನ್ನು ರೂಲ್ ಮಾಡಲು ಸಾಧ್ಯವಿಲ್ಲ.
ತುಂಬಾ ಡಾಮಿನೇಟಿಂಗ್, ಬೇರೆಯವರ ಬಗ್ಗೆ ಕಾಮೆಂಟ್ ಮಡುವುದು ಸುಲಭ. ಆದರೆ ಅದರಂತೆ ನಡೆಯುವುದು ಕಷ್ಟ ಎಂದು ಸದಸ್ಯರು ಹೇಳಿದ್ದಾರೆ. ಸದಸ್ಯರ ಉತ್ತರಗಳಿಗೆ ಕೇವಲ ತಲೆ ಅಲ್ಲಾಡಿಸುತ್ತಾ ಕುಳಿತಿದ್ದ ಚಕ್ರವರ್ತಿ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
50 % ಸೀಟಿಂಗ್ ನಿರ್ಬಂಧದಲ್ಲಿ ಸಡಿಲಿಕೆ – ಸರ್ಕಾರಕ್ಕೆ ಥ್ಯಾಂಕ್ಸ್ ಹೇಳಿದ ಅಪ್ಪು..!
ಬಾಲಿವುಡ್ ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಗೂ ಕೊರೊನಾ ಪಾಸಿಟಿವ್..!








