BIGGBOSS 8 : ದೊಡ್ಮನೆಯ 2 ನೇ ಮಹಿಳಾ ಕ್ಯಾಪ್ಟನ್ ಆದ ದಿವ್ಯಾ ಸುರೇಶ್
ಆರಂಭದಲ್ಲಿ ಮನೆಯ ಪುರುಷ ಸದಸ್ಯರೇ ಕ್ಯಾಪ್ಟನ್ ಗಳಾಗುತ್ತಿದ್ದು, ಮಹಿಳಾ ಸ್ಪರ್ಧಿಗಳಿಗೆ ಕೊಂಚ ಅಸಮಾದಾನವಿತ್ತು.. ಆದ್ರೆ 2ನೇ ಇನ್ನಿಂಗ್ಸ್ ನಲ್ಲಿ ಮೊದಲಬಾರಿಗೆ ದಿವ್ಯಾ ಉರುಡುಗ ಮೊದಲ ಮಹಿಳಾ ಕ್ಯಾಪ್ಟನ್ ಆಗಿದ್ದರು.. ಇದೀಗ ಉರುಡುಗ ನಂತರ ದಿವ್ಯಾ ಸುರೇಶ್ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ದಿವ್ಯಾ ಸುರೇಶ್ ಮೇಕಪ್ ರೂಮಿನಲ್ಲಿ ಕುಳಿತುಕೊಂಡು ಮೇಕಪ್ ಮಾಡಿಕೊಳ್ಳುತ್ತಿದ್ದಾಗ , ಬಿಗ್‍ಬಾಸ್ ಈ ವಾರದ ಕ್ಯಾಪ್ಟನ್ ಆಗಿ ದಿವ್ಯಾ ಸುರೇಶ್ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳು ಅಂತ ಹೇಳಿ ಬಿಗ್‍ಬಾಸ್, ದಿವ್ಯಾ ಸುರೇಶ್ ನಿಮ್ಮ ಬಳಿ ಒಂದು ಸ್ಪೆಷಲ್ ಅಧಿಕಾರವಿದೆ ಅದನ್ನು ಈಗಲೇ ಬಳಸಿಕೊಳ್ಳಿ ಅದು ಒಂದು ದಿನಕ್ಕೆ ಮಾತ್ರ ಸೀಮಿತ ಅಂತ ಹೇಳಿ ಬಿಗ್‍ಬಾಸ್ ಎಂದು ಮೀರರ್ ನೋಡುತ್ತಾ ಒಬ್ಬೊಬ್ಬರೆ ಮಾತನಾಡಿಕೊಳ್ತಾ ಬಿಗ್ ಬಾಸ್ ಬಳಿ ಕೇಳಿಕೊಂಡಿದ್ದಾರೆ.
ಹೀಗೆ ಕ್ಯಾಪ್ಟನ್ ಕನಸು ಕಂಡಿದ್ದ ದಿವ್ಯಾ ಸುರೇಶ್ ಬಿಗ್ ಬಾಸ್ ನೀಡಿದ್ದ ಟಾಸ್ಕ್ ಗೆದ್ದು ಮನೆಯ ಕ್ಯಾಪ್ಟನ್ ಆಗಿದ್ದಾರೆ. ಬಳಿಕ ಬಿಗ್‍ಬಾಸ್ ದಿವ್ಯಾ ಸುರೇಶ್‍ರನ್ನು ಕ್ಯಾಪ್ಟನ್ ಆಗಿ ಘೋಷಿಸಿದ ನಂತರ ಫುಲ್ ಖುಷ್ ಆಗಿದ್ದಾರೆ.
BIGGBOSS 8 : ಜೈಲಿನಲ್ಲಿ ಚಕ್ರವರ್ತಿ – ಶಮಂತ್ ವಿರುದ್ಧ ರೊಚ್ಚಿಗೆದ್ದ ಚಂದ್ರಚೂಡ್..!
ನಂತರ ಮನೆಯ ಸ್ಪರ್ಧಿಗಳಿಗೆ ನಾನು ಇಂದು ಬೆಳಗ್ಗೆ ಪೌಡರ್ ರೂಮ್‍ನಲ್ಲೆ ಮೇಕಪ್ ಮಾಡಿಕೊಳ್ಳುತ್ತಿದ್ದೆ. ಈ ವೇಳೆ ಕ್ಯಾಮೆರಾ ನನಗೆ ಫೋಕಸ್ ಆಗಿತ್ತು. ಆಗ ಇದು ಬಿಗ್‍ಬಾಸ್ ಈ ವಾರದ ಕ್ಯಾಪ್ಟನ್ ಆಗಿ ದಿವ್ಯಾ ಸುರೇಶ್ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳು ಅಂತ ಹೇಳಿ ಬಿಗ್‍ಬಾಸ್ ಎಂದು ಕೇಳಿಕೊಂಡೆ ಇದು ನಿಜವಾಯ್ತು ಎಂದು ಸಂತಸಗೊಂಡಿದ್ದಾರೆ.








