BIGGBOSS 8 : ಜೈಲಿನಲ್ಲಿ ಚಕ್ರವರ್ತಿ – ಶಮಂತ್ ವಿರುದ್ಧ ರೊಚ್ಚಿಗೆದ್ದ ಚಂದ್ರಚೂಡ್..!
ಬೆಂಗಳೂರು : ಬಿಗ್ ಬಾಸ್ ಶೋ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿ ಮತ್ತೆ ಪುರಾರಂಭಾವಗಿದೆ.. ಈ ನಡುವೆ ಈಗಾಗಲೇ ಹೊರಗಡೆ ಹೋಗಿ ಎಪಿಸಸೋಡ್ ಗಳನ್ನ ನೋಡಿ ವಾಪಸ್ ತಪ್ಪುಗಳನ್ನ ಸರಿ ಪಡಿಸಿಕೊಂಡು ಹೊಸ ಗೇಮ್ ಸ್ಟ್ರಾಟರ್ಜಿಗಳೊಂದಿಗೆ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟಿದ್ದಾರೆ.. ಹಲವರಲ್ಲಿ ಬದಲಾವಣೆಗಳು ಕಾಣ್ತಿವೆ.. ಈ ನಡುವೆ ಫೈಟ್ ಗಳು ಕೂಡ ಆರಂಭವಾಗಿದೆ.. ಪರಸ್ಪರ ಭಿನ್ನಾಭಿಪ್ರಾಯಗಳು ಕಾಣುತ್ತಿವೆ.. ಅದ್ರಂತೆ ಮೊದಲ ಇನ್ನಿಂಗ್ಸ್ ನಲ್ಲಿ ಪ್ರಣಯ ಪಕ್ಷಿಗಳಂತೆ ದಿವ್ಯಾ ಸುರೇಶ್ ಲ್ಯಾಗ್ ಮಂಜು ನಡುವೆ ಯಾವುದಾದ್ರೂ ಒಂದೂ ಕಾರಣಕ್ಕೆ ಭಿನ್ನಾಭಿಪ್ರಾಯಗಳು ಉಂಟಾಗುತ್ತಲೇ ಇದೆ..
ಇದೀಗ ಮನೆ ಮಂದಿಯೆಲ್ಲಾ ಸೇರಿ ಚಂದ್ರಚೂಡ್ ಚಕ್ರವರ್ತಿಯವರಿಗೆ ಕಳಪೆ ಬೋರ್ಡ್ ಕೊಟ್ಟು ಜೈಲಿಗೆ ಕಳುಹಿಸಿದ್ದಾರೆ.. ಇದ್ರ ಬೆನ್ನಲ್ಲೇ ಶಮಂತ್ ವಿರುದ್ಧ ಚಕ್ರವರ್ತಿ ರೊಚ್ಚಿಗೆದ್ದಿದ್ದಾರೆ. ಇದೇ ಮೊದಲ ಬಾರಿಗೆ ಚಕ್ರವರ್ತಿ ಶಮಂತ್ ನಡುವೆ ಜಗಳವಾಗಿದೆ.
ಹೌದು ಪ್ರತಿವಾರ ಬಿಗ್‍ಬಾಸ್ ಮನೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಗೆ ಮನೆಯ ಎಲ್ಲಾ ಸದಸ್ಯರು ಸೇರಿ ಕಳಪೆ ಬೋರ್ಡ್ ಹಾಕುವುದು ನಿಯಮ. ಅದರಂತೆ ಈ ವಾರ ಮನೆಮಂದಿಯೆಲ್ಲಾ ಒಂದೊಂದು ಕಾರಣಗಳನ್ನು ಹೇಳಿ ಚಕ್ರವರ್ತಿ ಚಂದ್ರಚೂಡ್‍ಗೆ ಕಳಪೆ ಬೋರ್ಡ್ ನೀಡಿದ್ದಾರೆ. ಶಮಂತ್ ಕೂಡ ಒಂದು ಕಾರಣ ಕೊಟ್ಟು ಚಕ್ರವರ್ತಿಗೆ ಕಳಪೆ ಬೋರ್ಡ್ ನೀಡಿದ್ದಾರೆ.. ಆದ್ರೆ ಶಮಂತ್ ನೀಡಿದ್ದ ಕಾರಣವನ್ನು ಚಕ್ರವರ್ತಿ ವಿರೋಧಿಸಿದ್ದಾರೆ. ಈ ಬಗ್ಗೆ ದಿವ್ಯಾ ಉರುಡುಗ ಬಳಿ ಮಾತನಾಡ್ತಾ, ಕಳಪೆ ಬೋರ್ಡ್ ಹಾಕುವ ಮುನ್ನವೇ ನಿಮಗೆ ಕಳಪೆ ಬೋರ್ಡ್ ನೀಡುತ್ತೇನೆ ಎಂದು ಶಮಂತ್ ನನಗೆ ಮೊದಲೇ ಹೇಳಿದ್ದರು ಎನ್ನುತ್ತಾರೆ.
ಈ ವೇಳೆ ಶಮಂತ್, ದಿವ್ಯಾ ಉರುಡುಗರವರನ್ನು ನೀವು ಹಿಡಿದು ಕೊಳ್ಳಬಾರದಾಗಿತ್ತು. ನಿಮ್ಮದು ಮಿಸ್‍ಟೇಕ್ ಇದೆ, ಅದು ಬೇಕು, ಬೇಕು ಎಂದು ನೀವು ಮಾಡಿಲ್ಲ. ಇದೊಂದು ತಪ್ಪು ಬಿಟ್ಟರೆ ಬೇರೆ ಏನು ಇಲ್ಲ ಎಂದು ಹೇಳುತ್ತಾರೆ. ಅಲ್ಲದೇ ಇದೇ ವೇಳೆ ಪ್ರಿಯಾಂಕ ವಿಚಾರವಾಗಿ ಮಾತನಾಡಿದ ಚಕ್ರವರ್ತಿಯವರು, ಸಂದರ್ಭ ಬಂದಾಗ ಕೈ ಎತ್ತಿ ಬಿಡುತ್ತೀಯಾ, ಇದೇನಾ ನೀನು ವಿಶ್ವಾಸಕ್ಕೆ ಕೊಡುವ ಗೌರವ, ಮೋಸ ಮಾಡಿ ಬಿಡುತ್ತೀಯಾ, ಸುಳ್ಳು ಹೇಳಿ ನುಣುಚಿಕೊಂಡು ಬಿಡುತ್ತೀಯಾ, ತಪ್ಪಿಗೆ ತಪ್ಪು ಎಂದು ಹೇಳು, ಸರಿಗೆ ಸರಿ ಅಂತ ಹೇಳು, ನೀನು ಯಾವ ಸ್ನೇಹಿತರಿಗೆ ಬೇಕಾದರೂ ಕತ್ತು ಕುಯ್ದುಬಿಡುತ್ತೀಯಾ ಎಂದು ಬೈಯ್ಯುತ್ತಾರೆ.
ಇದರಿಂದ ರೊಚ್ಚಿಗೆದ್ದ ಶಮಂತ್, ಯಾವುದಕ್ಕೊ, ಯಾವುದೋ ಪದ ಬಳಸಬೇಡಿ. ನಾನು ಕತ್ತು ಕುಯ್ಯುವ ಕೆಲಸ ಮಾಡಿಲ್ಲ. ನಾನು ಇಷ್ಟು ವಾರ ಕಳಪೆ ಹಾಕಿದವರು ಯಾವತ್ತು ಕೂಡ ನನಗೆ ಕತ್ತು ಕುಯ್ದೆ ಎಂದು ಹೇಳಿಲ್ಲ. ಹೇಳಿದ ಕಾರಣವನ್ನು ಸ್ವೀಕರಿಸಿ, ನನ್ನದೇ ಎಲ್ಲೋ ತಪ್ಪು ಇರಬಹುದು ಎಂದು ಸುಮ್ಮನೇ ಆಗಿದ್ದಾರೆ. ನನ್ನನ್ನು ಕಾರಣ ಕೇಳಿದ್ದಾರೆ, ನಾನು ಕಾರಣ ಹೇಳಿದ್ದೇನೆ ಅಷ್ಟೇ.
ಕತ್ತು ಕುಯ್ಯೊದು ನಂಬಿಕೆ ದ್ರೋಹ, ಫ್ರೆಂಡ್ಸ್‍ನ ಕಳೆದುಕೊಳ್ಳುವುದು, ನಿಮಗೆ ಇದೆಲ್ಲದರ ಬಗ್ಗೆ ಮಾತನಾಡಲು ಯಾವುದೇ ಹಕ್ಕಿಲ್ಲ. ಎಷ್ಟು ದಿನ ಫ್ರೆಂಡ್ ನೀವು ನನಗೆ, ನನ್ನ ಬಗ್ಗೆ ಏನು ಗೊತ್ತು ನಿಮಗೆ, ಹೇಗೆ ಕತ್ತು ಕುಯ್ದೆ ಎಂದು ಹೇಳುತ್ತೀರಾ. ಕತ್ತು ಕುಯ್ದನಾ ನಾನು ನಿಮಗೆ, ಸುಮ್ಮನೆ ರಾಂಗ್ ಸ್ಟೇಟ್‍ಮೆಂಟ್ ಮಾಡಿ, ಇಲ್ಲದೇ ಇರುವ ಅನಿಸಿಕೆಯನ್ನು ಸೃಷ್ಟಿಸುವುದನ್ನು ಬಿಡಿ ಮೊದಲು, ನಾನು ಏನು ಬೇಕಾದರೂ ಮಾಡುತ್ತೇನೆ. ನಿಮಗೆ ನನ್ನ ಬಗ್ಗೆ ಸಂಪೂರ್ಣವಾಗಿ ಗೊತ್ತಿಲ್ಲ ಎಂದರೆ ಮಾತನಾಡಬಾರದು, ಮಾತನಾಡಬೇಡಿ ಎಂದು ಕಿಡಿಕಾರಿದ್ದಾರೆ. ಒಟ್ಟಾರೆ ಶಮಂತ್ ಹಾಗೂ ಚಕ್ರವರ್ತಿ ನಡುವೆ ಇದ್ದ ಉತ್ತಮ ಸಂಬಂಧದಲ್ಲಿ ಈಗ ಬಿರುಕು ಮೂಡುತ್ತಿದೆ..