ಉದ್ಯಮಿಯೊಬ್ಬರು 200 ಕೋಟಿ ರೂ. ಆಸ್ತಿ ದಾನ ಮಾಡಿ ಪತ್ನಿಯೊಂದಿಗೆ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ.
ಗುಜರಾತ್ ನ ಸಬರ್ಕಾಂತ ಜಿಲ್ಲೆಯ ಹಿಮತ್ ನಗರ ನಿವಾಸಿ ಉದ್ಯಮಿ ಭವೇಶ್ ಭಾಯ್ ಭಂಡಾರಿ ಹಾಗೂ ಅವರ ಪತ್ನಿ ಜೈನ್ ದೀಕ್ಷೆ ಪಡೆದು ಸನ್ಯಾಸಿಯಾಗಲು ಮುಂದಾಗಿದ್ದಾರೆ. ಹೀಗಾಗಿ 200 ಕೋಟಿ ರೂ. ಸಂಪತ್ತನ್ನು ದತ್ತಿ ಸಂಸ್ಥೆಗೆ ದಾನ ಮಾಡಿದ್ದಾರೆ. ಅಷ್ಟೇ ಅಲ್ಲ, ಎರಡು ವರ್ಷಗಳ ಹಿಂದೆ ಇವರ ಮಗ ಹಾಗೂ ಮಗಳು ತಮ್ಮ ಐಷಾರಾಮಿ ಜೀವನ ತ್ಯಜಿಸಿ ದೀಕ್ಷೆ ಪಡೆದಿದ್ದರು. ಈಗ ತಂದೆ-ತಾಯಿ ಕೂಡ ಅದೇ ಹಾದಿ ಹಿಡಿದಿದ್ದಾರೆ.
ಭವೇಶ್ ಭಂಡಾರಿ ಜೈನ್ ಸಮುದಾಯದ ಸನ್ಯಾಸಿಗಳು ಹಾಗೂ ಗುರುಗಳನ್ನು ಆರಾಧಿಸುತ್ತಾರೆ. ಅವರ ಮಗ ಮತ್ತು ಮಗಳು ಎರಡು ವರ್ಷಗಳ ಹಿಂದೆ ಸನ್ಯಾಸ ತೆಗೆದುಕೊಂಡಿದ್ದಾರೆ. 2022 ರಲ್ಲಿ ಅವರ ದೀಕ್ಷಾ ನಂತರ, ಭಾವೇಶ್ ಭಾಯ್ ಹಾಗೂ ಅವರ ಪತ್ನಿ ಈಗ ಲೌಕಿಕ ಜೀವನ ತ್ಯಜಿಸಿದ್ದಾರೆ.
ಭವೇಶ್ ಭಾಯ್ ಭಂಡಾರಿ ಅಹಮದಾಬಾದ್ ನಲ್ಲಿ ಕಟ್ಟಡ ನಿರ್ಮಾಣ ವ್ಯವಹಾರ ಮಾಡುತ್ತಿದ್ದರು. ಈ ಕೆಲಸ ತ್ಯಜಿಸಿದ್ದಾರೆ. ಇನ್ನು ಮುಂದೆ ಅವರು ಭಿಕ್ಷೆ ಬೇಡುತ್ತಾರೆ. ಬರಿಗಾಲಲ್ಲಿ ಇಡೀ ದೇಶ ಸುತ್ತುತ್ತಾರೆ.