BIGGBOSS 8 : ಟಾಸ್ಕ್ ವೇಳೆ ನಿಧಿ – ಅರವಿಂದ್ ನಡುವೆ ಮಾತಿನ ಚಕಮಕಿ
ಬಿಗ್ ಬಾಸ್ ಶೋ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿ ಮತ್ತೆ ಪುರಾರಂಭಾವಗಿದೆ.. ಈ ನಡುವೆ ಈಗಾಗಲೇ ಹೊರಗಡೆ ಹೋಗಿ ಎಪಿಸಸೋಡ್ ಗಳನ್ನ ನೋಡಿ ವಾಪಸ್ ತಪ್ಪುಗಳನ್ನ ಸರಿ ಪಡಿಸಿಕೊಂಡು ಹೊಸ ಗೇಮ್ ಸ್ಟ್ರಾಟರ್ಜಿಗಳೊಂದಿಗೆ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟಿದ್ದಾರೆ.. ಹಲವರಲ್ಲಿ ಬದಲಾವಣೆಗಳು ಕಾಣ್ತಿವೆ.. ಈ ನಡುವೆ ಫೈಟ್ ಗಳು ಕೂಡ ಆರಂಭವಾಗಿದೆ.. ಪರಸ್ಪರ ಭಿನ್ನಾಭಿಪ್ರಾಯಗಳು ಕಾಣುತ್ತಿವೆ.. ಎರಡನೇ ಇನ್ನಿಂಗ್ಸ್ ನ 7ನೇ ದಿನ ಅರವಿಂದ್ ಕೆಪಿ ಮತ್ತು ನಿಧಿ ಸುಬ್ಬಯ್ಯ ನಡುವೆ ಭಾರೀ ಮಾತಿನ ಚಕಮಕಿ ನಡೆದಿದೆ.
‘ಥರ ಥರ ಈ ಎತ್ತರ’ ಟಾಸ್ಕ ನ ಮೂರನೇ ಸುತ್ತು ವೇಳೆ ಅರವಿಂದ್ ತರುತ್ತಿದ್ದಾಗ ಟಿಶ್ಯು ರೋಲ್ ಗಾರ್ಡನ್ ಏರಿಯಾದಲ್ಲಿ ಬಿದ್ದಿತ್ತು. ಈ ಟಿಶ್ಯುವನ್ನು ಮಂಜು ಮತ್ತು ನಿಧಿ ಎತ್ತಿದ್ದರು. ಈ ವಿಚಾರದ ಬಗ್ಗೆ ಅರವಿಂದ್ ಅಲ್ಲೇ ಆಕ್ಷೇಪ ವ್ಯಕ್ತಪಡಿಸಿ ಎತ್ತುವಂತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಈ ಟಾಸ್ಕ್ ಕೊನೆಯಲ್ಲಿ ಫಲಿತಾಂಶಕ್ಕೂ ಮೊದಲು ಸೂರ್ಯಸೇನೆ ಸದಸ್ಯರು ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅರವಿಂದ್, ಸಂಬರಗಿ, ಚಕ್ರವರ್ತಿ ಚಂದ್ರಚೂಡ್ ಎತ್ತುವಂತಿಲ್ಲ ಎಂದು ಹೇಳಿದರೆ, ದಿವ್ಯಾ ಈ ನಿಯಮದ ಬಗ್ಗೆ ಪುಸ್ತಕದಲ್ಲಿ ಪ್ರಸ್ತಾಪ ಮಾಡಿಲ್ಲ ಎಂದರು.
ಕೊನೆಗೆ ಅರವಿಂದ್ “ಥಟ್ ಶೋಸ್ ಕ್ಯಾರೆಕ್ಟರ್” ಎಂದು ಹೇಳಿ 90 ಸೆಕೆಂಡ್ ಒಳಗಡೆ ರಿಂಗ್ ಒಳಗಡೆ ಸದಸ್ಯ ಟಿಶ್ಯು ಇಡಬೇಕು ಎನ್ನುವುದು ನಿಯಮ. ಹೀಗಾಗಿ ಸ್ಟೋರ್ ರೂಮಿಗೆ ಹೋದ ಸದಸ್ಯ ಮಾತ್ರ ಟಿಶ್ಯು ಕೊಡಬೇಕು ಅಷ್ಟೇ. ಬೇರೆ ಸದಸ್ಯರು ಎತ್ತುವಂತಿಲ್ಲ ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಚರ್ಚೆಯನ್ನು ಗಮನಿಸಿದ ನಿಧಿ ಮಂಜು ಬಳಿ ನಮ್ಮ ‘ಕ್ಯಾರೆಕ್ಟರ್’ ಬಗ್ಗೆ ಅರವಿಂದ್ ಮಾತನಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಇದ್ರಿಂದಾಗಿ ಗೊಂದಲ ಸೃಷ್ಟಿಯಾಗಿದ್ದು, ಪರಿಸ್ಥಿತಿ ಸರಿಪಡಿಸಲು ಸರಿಪಡಿಸಲು ಅರವಿಂದ್ ಮಂಜು ಜೊತೆ ಮಾತನಾಡಲು ತೆರಳಿದರು. ನಿಯಮದ ಪ್ರಕಾರ ತಂಡದ ಬೇರೆ ಸದಸ್ಯರು ಟಿಶ್ಯುವನ್ನು ಎತ್ತುವಂತಿಲ್ಲ. ಮೊದಲು ನೀವು ಬೀಳಿಸಿದಾಗ ನಮ್ಮ ತಂಡದ ಸದಸ್ಯರು ಎತ್ತಿಲ್ಲ ಎಂದು ಹೇಳಿದರು. ಆದರೆ ಮಂಜು ಎತ್ತಬಹುದು ಎಂದು ಉತ್ತರಿಸಿದರು. ಈ ಸುತ್ತಿನಲ್ಲಿ ಕ್ವಾಟ್ಲೆ ಕಿಲಾಡಿಗಳು ತಂಡ ಜಯವನ್ನು ಗಳಿಸಿತು.
ಮುಂದಿನ ಸುತ್ತುಗಳಲ್ಲಿ ಈ ರೀತಿ ಗೊಂದಲ ಆಗದೇ ಇರಲು ಮತ್ತೆ ಅರವಿಂದ್ ಮಂಜು ಜೊತೆ ಮಾತನಾಡುತ್ತಿದ್ದಾಗ ನಿಧಿ ಮಧ್ಯೆ ಮಾತನಾಡಲು ಆರಂಭಿಸಿದರು. ಈ ವೇಳೆ ಅರವಿಂದ್, “ನಾನು ಕ್ಯಾಪ್ಟನ್ ಜೊತೆ ಮಾತನಾಡುತ್ತಿದ್ದೇನೆ. ನೀವು ಸ್ವಲ್ಪ ಮುಚ್ಕೊಳ್ಳಿ” ಎಂದು ನಿಧಿಗೆ ಹೇಳಿದರು.
ಈ ಮೂಲಕ ನಿಧಿ ಸಿಟ್ಟನ್ನ ಮತ್ತಷ್ಟು ಹೆಚ್ಚು ಮಾಡಿದರು ಅರವಿಂದ್.. ಟಾಸ್ಕ್ ಮುಗಿದ ಬಳಿಕ ಅರವಿಂದ್ ನಿಧಿ ಬಳಿ ಹೋದಾಗ,’ನೋ ನೋ ಅರವಿಂದ್. ಮುಚ್ಚೊಂಡು ಹೋಗಿ’ ಎಮದಿದ್ದಾರೆ ನಿಧಿ.
ಆಗ ಅರವಿಂದ್,’ನೀವು ಮುಚ್ಕೊಂಡು ಇರಿ. ಜಾಸ್ತಿ ಮಾತನಾಡಬೇಡಿ’ ಎಂದು ತಿರುಗೇಟು ನೀಡಿದ್ದಾರೆ. ಇದಕ್ಕೆ ನಿಧಿ ಕೂಡ ಸಿಟ್ಟಾಗಿ ‘ಕ್ರೀಡಾ ಸ್ಫೂರ್ತಿ ಇಲ್ಲ. ಪಾರ್ಟಿಸಿಪೇಷನ್ ಮೆಡಲ್‍ನಲ್ಲಿ ಬಂದಿರೋದು, ಗೆದ್ದು ತೋರಿಸು. ಲೂಸರ್ ಗೆಟ್ ಲಾಸ್ಟ್’ ಎಂದದಿದ್ದಾರೆ. ಇದಕ್ಕೆ ಅರವಿಂದ್ ಒಂದು ವ್ಯಂಗ್ಯಾತ್ಮಕ ನಗುವಿನೊಂದಿಗೆ ಅಲ್ಲಿಂದ ವಾಪಸ್ ತೆರಳಿದ್ದಾರೆ..
ಬಳಿಕ ಶುಭಾ ಪುಂಜಾ ಬಂದು ಈ ಬಗ್ಗೆ ಅರವಿಂದ್ ಜೊತೆಗೆ ಮಾತನಾಡಿದ್ದಾರೆ.. ಆಗ ಶುಭಾ ಬಳಿ ಮಾತನಾಡಿರುವ ಅರವಿಂದ್, ನಾನು ಇಲ್ಲಿಯವರೆಗೂ ಯಾರಿಗೂ ಕೆಟ್ಟ ಉದ್ದೇಶದಲ್ಲಿ ಮಾತನಾಡಿಲ್ಲ. ನಾನು ಹೇಳುವುದನ್ನು ನೇರವಾಗಿ ಹೇಳುತ್ತೇನೆ ಹೊರತು ಹಿಂದೆ ಹೇಳುವುದಿಲ್ಲ. ನಾಯಕರ ಮಧ್ಯೆ ಹೀಟ್ ಡಿಸ್ಕಷನ್ ಆಗಿದ್ದಾಗ ಮಧ್ಯೆ ಮಾತನಾಡಿದ್ದಕ್ಕೆ ನಾನು ಹೇಳಿದ್ದೇನೆ ಹೊರತು ಬೇರೆ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ ಎಂದು ತಾನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದಕ್ಕೆ ಶುಭಾ ಕೂಡ ರೆಸ್ಪಾನ್ಸ್ ಮಾಡಿದ್ದು, ನೀನು ಎಲ್ಲರ ಮುಂದೆ ಹಾಗೆ ಹೇಳಬಾರದಿತ್ತು.. ಅವರಿಗೂ ನೋವಾಗೋದಿಲ್ವಾ.. ನೀನು ನನಗೆ ಫ್ರೆಂಡ್ ಅ, ನಿಧಿ ಕೂಡ ಫ್ರೆಂಡ್ ನೀವಿಬ್ರೂ ಏನೆಂದು ನನಗೆ ಗೊತ್ತು.. ಆದ್ರೆ ನಾನು ಇಂತಹ ಪರಿಸ್ಥಿತಿಯಲ್ಲಿ ಯಾರ ಪರ ನಿಲ್ಲಬೇಕೆಂಬುದು ಗೊತ್ತಾಗ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.