BIGGBOSS 8 – ದೊಡ್ಮನೆಯಿಂದ ಔಟ್ ಆದ ಬಳಿಕ ಗೀತಾ ಬಾರತಿ ಭಟ್ ಮಾತು..!
ಬಿಗ್ ಬಾಸ್ ಮನೆಯಿಂದ ಮೊದಲನೇ ವಾರ ಟಿಕ್ ಟಾಕ್ ಸ್ಟಾರ್ ಧನುಶ್ರೀ, 2ನೇ ವಾರ ನಿರ್ಮಲಾ, 3ನೇ ವಾರ ಗೀತಾ, 4ನೇ ವಾರ ಚಂದ್ರಕಲಾ ಹೊರಗಡೆ ಹೋಗಿದ್ದಾರೆ.
ಹೊರಗಡೆ ಬಂದ ಗೀತಾ ಅವರು ಕೆಲವು ವಿಚಾರಗಳು, ಕೆಲ ಬದಲಾವಣೆಗಳು, ಕೆಲವರ ಬಗ್ಗೆ ಮಾತನಾಡಿದ್ದರು.
ಮೊದಲಿಗೆ ಗೀತಾ ಅವರು ನಾನು ಫೇಕ್ ಎನ್ನುವ ಅನೇಕ ಆರೊಪಗಳು ಬಂದವು. ಆದ್ರೂ ಕೂಡ ನಾನು ನಾನಾಗಿಯೇ ಇದ್ದೆ. ಇನ್ಮುಂದೆಯೂ ಹಾಗೇ ಇರುತ್ತೇನೆ ಎಂದು ಮಾತನಾಡಿದ್ದಾರೆ.
22 ದಿನಗಳ ಕಾಲ ಮನೆಯಲ್ಲಿ ಇದ್ದ ಗೀತಾ ಅವರು ತಮ್ಮ ಅನುಭವಗಳನ್ನ ಹಂಚಿಕೊಂಡು ಭಾವುಕರಾಗಿದ್ದರು. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದರು.
ತಮ್ಮ ಎಲಿಮಿನೇಶನ್ ಬಗ್ಗೆಯೂ ಹೇಳಿಕೊಂಡ ಗೀತಾ, ಇಷ್ಟು ಬೇಗ ಆಚೆ ಬರಬೇಕಾಗುತ್ತೆ ಅಂತ ಅಂದುಕೊಂಡಿರಲಿಲ್ಲ. ಆದ್ರೂ ಇದು ಸುಂದರ ಅನುಭವ.
ನಾನು ಮನೆಯಲ್ಲಿ ಪ್ರಾಮಾಣಿಕವಾಗಿ ನಾನಾಗಿಯೇ ಉಳಿದಿದ್ದೆ. ಅದಕ್ಕೆ ನನಗೆ ಸಂತೋಷವಿದೆ.
22 ದಿನಗಳು ತುಂಬಾ ಚಿಕ್ಕದು , ಇನ್ನೂ ಸ್ವಲ್ಪ ದಿನಗಳಾದ್ರೂ ಇರಬೇಕಿತ್ತು ಎನ್ನಿಸುತ್ತಿದೆ. ಆದ್ರೆ ಇದು ಆಟ ಏನೇ ಬಂದ್ರು ಸ್ವೀಕರಿಸಲೇ ಬೇಕು ಎಂದಿದ್ದರು.
ಇನ್ನೂ ತಮ್ಮ ಗೋಲ್ ಬಗ್ಗೆ ಮಾತನಾಡಿರೋ ಗೀತಾ ಅವರು ನಾನು ಇನ್ಮುಂದೆ ಆರೋಗ್ಯದ ಬಗ್ಗೆ ಗಮನ ವಹಿಸುತ್ತೇನೆ.
2 ಸಿನಿಮಾಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಮ್ಯೂಸಿಕ್ ಕಡೆಗೂ ಗಮನ ಹರಿಸಲಿದ್ದೇನೆ ಎಂದಿದ್ದಾರೆ.
ಗಮನಿಸಿ… ಇನ್ಮುಂದೆ ರಾತ್ರಿ ವೇಳೆ ರೈಲಿನಲ್ಲಿ ಮೊಬೈಲ್ ಚಾರ್ಜಿಂಗ್ ಮಾಡಂಗಿಲ್ಲ..!
RRR ನಲ್ಲಿ ಹೇಗಿರಲಿದೆ ‘ಸಿಂಗಂ’ ಅವತಾರ – ಏ. 2ಕ್ಕೆ ಅಜಯ್ ಲುಕ್ ರಿಲೀಸ್..!