ಗಮನಿಸಿ… ಇನ್ಮುಂದೆ ರಾತ್ರಿ ವೇಳೆ ರೈಲಿನಲ್ಲಿ ಮೊಬೈಲ್ ಚಾರ್ಜಿಂಗ್ ಮಾಡಂಗಿಲ್ಲ..!
ನವದೆಹಲಿ: ಇತ್ತೀಚೆಗೆ ರೈಲಿನಲ್ಲಿ ಬೆಂಕಿ ಅವಘಡಗಳು ಹೆಚ್ಚಾಗ್ತಿದ್ದು, ಇಂತಹ ಅನಾಹುತಗಳಿಗೆ ಪ್ರಮುಖ ಕಾರಣಗಳು ಸಿಗರೇಟ್ ಕಿಡಿ ಹಾಗೂ ಎಲೆಕ್ಟ್ರಾನಿಕ್ ಡಿವೈಸ್ ಗಳ ಚಾರ್ಜಿಂಗ್. ಹೀಗಾಗಿ ಇಂತಹ ಅನಾಹುತಗಳಿಗೆ ಮೊದಲೇ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ರೈಲ್ವೇ ಇಲಾಖೆಯು ಮಹತ್ವದ ಆದೇಶ ಹೊರೆಡಿಸಿದೆ.
ರಾತ್ರಿ 11ರಿಂದ ಮುಂಜಾನೆ 5ರ ವರೆಗೆ ರೈಲಿನಲ್ಲಿ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳ ಚಾರ್ಜಿಂಗ್ ಅನ್ನು ನಿರ್ಬಂಧಿಸಲಾಗಿದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ರೈಲ್ವೆ ವಿಭಾಗವು ಮಾರ್ಚ್ 16ರಿಂದಲೇ ಇದನ್ನು ಕಾರ್ಯರೂಪಕ್ಕೆ ತಂದಿದ್ದು, ರಾತ್ರಿ ವೇಳೆಯಲ್ಲಿ ಚಲಿಸುತ್ತಿರುವ ರೈಲ್ವೆನಲ್ಲಿ ಚಾರ್ಜಿಂಗ್ ಅನ್ನು ನಿರ್ಬಂಧಿಸಲಾಗಿದೆ. ಎಲ್ಲ ರೈಲ್ವೆಗಳಿಗೆ ರೈಲ್ವೆ ಮಂಡಳಿ ಸೂಚನೆ ರವಾನಿಸಿದೆ. ಇದರಂತೆ ಮಾರ್ಚ್ 16ರಿಂದಲೇ ಜಾರಿಗೊಳಿಸಿದ್ದೇವೆ ಎಂದು ಪಶ್ಚಿಮ ರೈಲ್ವೆಯ ಸಿಆರ್ಪಿಒ ಸುಮಿತ್ ಠಾಕೂರ್ ತಿಳಿಸಿದ್ದಾರೆ.
ಇತ್ತೀಚೆಗೆ ದೆಹಲಿ – ಡೆಹರಾಡೂನ್ ಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಮಾರ್ಚ್ 13ರಂದು ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 8 ಕೋಚ್ಗಳಿಗೆ ಬೆಂಕಿ ಆವರಿಸಿತ್ತು. ಇದು ಮಾತ್ರವಲ್ಲದೇ ಧೂಮಪಾನಿಗಳ ಹಾವಳಿಗೂ ರೈಲ್ವೆ ಇಲಾಖೆ ಲಗಾಮು ಹಾಕಲು ನಿರ್ಧರಿಸಲಾಗಿದೆ. ಇಂತಹ ಅಪರಾಧ ಎಸಗುವವರಿಗೆ ಶಿಕ್ಷೆಯ ಪ್ರಮಾಣವನ್ನ ಹೆಚ್ಚಿಸೋಕೆ ಚರ್ಚೆ ನಡೆಯುತ್ತಿದೆ.
ರೈಲಿನ ಒಳಗೆ ಧೂಮಪಾನ ಮಾಡುವವರಿಗೆ ರೈಲ್ವೆ ಆಕ್ಟ್ ಸೆಕ್ಷನ್ 167ರ ಅಡಿಯಲ್ಲಿ 100 ರೂಪಾಯಿ ದಂಡ ವಿಧಿಸಲಾಗ್ತಿದೆ.
RRR ನಲ್ಲಿ ಹೇಗಿರಲಿದೆ ‘ಸಿಂಗಂ’ ಅವತಾರ – ಏ. 2ಕ್ಕೆ ಅಜಯ್ ಲುಕ್ ರಿಲೀಸ್..!
100 ಕೋಟಿ ರೂಪಾಯಿ ಬಾಚಿದ ‘ಬಾಕ್ಸ್ ಆಫೀಸ್ ಸುಲ್ತಾನ’