BIGGBOSS 8 – ‘ಬ್ಯಾಡ್ ಲಕ್’ ನಾನು ಆಚೆ ಬಂದೆ – ಇಬ್ಬರನ್ನ ಬಿಟ್ಟು ಮನೆಯ ಎಲ್ಲರೂ ಫೇಕ್ – ಚಂದ್ರಕಲಾ ಮೋಹನ್..!
ಬಿಗ್ ಬಾಸ್ ಮನೆಯಲ್ಲಿ 4 ವಾರಗಳ ಕಾಲ ಉಳಿದು ಪ್ರೇಕ್ಷಕರ ಮನಗೆದ್ದ ಅಜ್ಜಮ್ಮ / ಚಂದ್ರಕಲಾ ಬಿಗ್ ಬಾಸ್ ಮನೆಯಿಂದ ಹೊರನಡೆದ 4ನೇ ಸ್ಪರ್ಧಿಯಾಗಿದ್ದಾರೆ. ಈ ಬಗ್ಗೆ ಚಂದ್ರಕಲಾ ಹೇಳಿಕೊಂಡಿದ್ದು, ಇದು ನನ್ನ ಬ್ಯಾಡ್ ಲಕ್ ಎಂದಿದ್ದಾರೆ. ಮನೆ ಮಂದಿಯ ಜೊತೆಗೆ ಒಂದು ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಇದು ನನ್ನ ಬ್ಯಾಡ್ ಲಕ್ ಅಂತ ನಾನು ಭಾವಿಸುತ್ತೇನೆ. ನಾನು ಮನೆಯೊಳಗೆ ಪ್ರಾಮಾಣಿಕವಾಗಿದ್ದೆ. ನೈಜವಾಗಿ ನಾನು ಹೇಗಿದ್ದೀನೋ ಹಾಗೆಯೇ ಇದ್ದೆ. ಇದೇ ನನ್ನ ಎಲಿಮಿನೇಷನ್ ಗೆ ಕಾರಣವಿರಬಹುದು ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಮನೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಬಿಟ್ಟರೆ ಇನ್ಯಾರೂ ಸಹ ಪ್ರಾಮಾಣಿಕವಾಗಿಲ್ಲ. ಪ್ರಾಮಾಣಿಕವಾಗಿ ನೈಜವಾಗಿ ಆಟವಾಡುತ್ತಿಲ್ಲ ಎಂದಿದ್ದಾರೆ.
ಮೊದಲ ವಾರ ಟಿಕ್ ಟಾಕ್ ಸ್ಟಾರ್ ಧನುಶ್ರೀ, 2ನೇ ವಾರ ನಿರ್ಮಲಾ ಚೆನ್ನಪ್ಪ, 3ನೇ ವಾರ ಗೀತಾ ಮನೆಯಿಂದ ಹೊರ ನಡೆದಿದ್ದರು. 4ನೇ ವಾರ ಚಂದ್ರಕಲಾ ಮನೆಯಿಂದ ಹೊರನಡೆದಿದ್ದಾರೆ.
BIGGBOSS 8 : ದೊಡ್ಮನೆಯಲ್ಲಿ ಸೀರಿಯಸ್ ಲವ್ ಸ್ಟೋರಿ – ಚಂದ್ರಕಲಾ ಹೇಳಿದ್ದು ಯಾವ ಜೋಡಿ ಬಗ್ಗೆ..?