BIGGBOSS 8 : ದೊಡ್ಮನೆಯಲ್ಲಿ ಹೊಸ ಲವ್ ಸ್ಟೋರಿ..!

1 min read

BIGGBOSS 8 : ದೊಡ್ಮನೆಯಲ್ಲಿ ಹೊಸ ಲವ್ ಸ್ಟೋರಿ..!

ಬಿಗ್‍ ಬಾಸ್ ಮನೆಯಲ್ಲಿ ಮಂಜು ದಿವ್ಯಾ ಸುರೇಶ್ ಹಾಗೂ ಶಮಂತ್ ನಡುವಿನ ಟ್ರಯಾಂಗಲ್ ಲವ್ ಸ್ಟೋರಿ ಚರ್ಚೆ ಬಳಿಕ ಇದೀಗ ಮತ್ತೊಂದು ಜೋಡಿಯ ನಡುವೆ ಲವ್ವಿ ಡವ್ವಿ ಶುರುವಾಗಿದೆ ಎಂದು ಮನೆ ಮಂದಿ ಮಾತನಾಡಿಕೊಳ್ತಿದ್ದಾರೆ.  ಅರವಿಂದ್ ಹಾಗೂ ದಿವ್ಯಾ ಉರುಡುಗ ಮಧ್ಯೆ ಲವ್ವಿಡವ್ವಿ ಶುರುವಾಗಿದೆ ಎಂದು ಮನೆ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಇಬ್ಬರನ್ನೂ ರೇಗಿಸೋಕೆ ಅವಕಾಶಗಳಿಗೆ ಹುಡುಕಾಡುತ್ತಿದ್ದಾರೆ.

ಈ ಮಧ್ಯೆ ನಿನ್ನೆ ನಡೆದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್, ಇದೇ ವಿಚಾರವಾಗಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕಾಲೆಳೆದಿದ್ದಾರೆ. ಕಳೆದ ವಾರ ಬಿಗ್ ಬಾಸ್ ನೀಡಿದ್ದ ಜೋಡಿ ಟಾಸ್ಕ್ ನಲ್ಲಿ ಜೋಡಿಗಳನ್ನೂ ಕೂಡ ತಾವೇ ಆಯ್ಕೆ ಮಾಡಿಕೊಳ್ಳುವಂತೆ ತಿಳಿಸಿದ್ದರು. ಆಗ ದಿವ್ಯಾ ಉರುಡುಗ ಹೇಗೆ ಬೇರೆಯವರನ್ನ ರಿಜೆಕ್ಟ್ ಮಾಡಿ ಅರವಿಂದ್ ರನ್ನೇ ಆಯ್ಕೆ ಮಾಡಿಕೊಂಡರು ಎಂದು ಮನೆ ಮಂದಿ ತಮಾಷೆ ಮಾಡಿದ್ರು.

ಈ ಆಯ್ಕೆ ಪ್ರಕ್ರಿಯೆಯನ್ನ ಚಂದ್ರಕಲಾ ಹಾಗೂ ದಿವ್ಯಾ ಸುರೇಶ್ ಮರುಸೃಷ್ಟಿ ಮಾಡಿ ತೋರಿಸಿದ್ರು. ಹೇಗೆ ದಿವ್ಯಾ ಉರುಡುಗ ಅವರು ರಾಜೀವ್, ಮಂಜು, ಪ್ರಶಾಂತ್ ಎಲ್ಲರನ್ನೂ ಬಿಟ್ಟು ಅರವಿಂದ್ ಅವರನ್ನ ಆಯ್ಕೆ ಮಾಡಿದ್ರು ಎಂದು ಮಿಮಿಕ್ರಿ ಮಾಡಿ ತೋರಿಸಿದ್ರು. ಇದಕ್ಕೆ ಕಿಚ್ಚ ಸುದೀಪ್ ಹಾಗೂ ಮನೆ ಮಂದಿಯಲ್ಲಿ ನಗುತ್ತಾ ಇಬ್ಬರ ಕಾಳೆದ್ರೆ ದಿವ್ಯಾ ಉರುಡುಗ ಹಾಗೂ ಅರವಿಂದ್ ನಾಚಿಕೆಯಿಂದ ಒಬ್ಬರ ಮುಖ ಒಬ್ಬರು ನೋಡುತ್ತಾ ನಗುತ್ತಾ ಕುಳಿತಿದ್ರು.

ಈ ಬಗ್ಗೆ ಕಿಚ್ಚ ಸುದೀಪ್ ದಿವ್ಯಾರಿಗೆ ಯಾಕೆ ಅರವಿಂದ್ ರನ್ನೇ ಆಯ್ಕೆ ಮಾಡಿಕೊಂಡ್ರಿ ಎಂದು ಕೇಳಿದ್ರು. ಇದಕ್ಕೆ ಉತ್ತರಿಸಿದ ಉರುಡುಗ ಬಿಗ್‍ಬಾಸ್ ಟಾಸ್ಕ್ ನೀಡಿದಾಗ ರಘು ಹೊರತು ಪಡಿಸಿ ಎಲ್ಲರು ನನ್ನ ಬಳಿ ಬಂದು ಜೋಡಿಯಾಗುವಂತೆ ಕೇಳಿಕೊಂಡರು. ನಾನು ಮಂಜು ಹಾಗೂ ಅರವಿಂದ್ ಇಬ್ಬರನ್ನು ನೀವು ಯಾರಿಗೆ ಆದ್ಯತೆ ನೀಡುತ್ತೀರಾ ಎಂದು ಕೇಳಿದ್ದೆ. ಈ ವೇಳೆ ಮಂಜು ನನಗೆ ಇಬ್ಬರು ದಿವ್ಯಾರಲ್ಲಿ ಯಾರಾದರೂ ಓಕೆ ಎಂದಿದ್ದರು.

ಆದರೆ ಅರವಿಂದ್ ಮಾತ್ರ ನೀನೇ ಎಂದು ಹೇಳುವ ಮೂಲಕ ನನಗೆ ಆದ್ಯತೆ ನೀಡಿದರು. ಹಾಗಾಗಿ ಅರವಿಂದ್‍ಗೆ ಜೋಡಿಯಾಗಿ ಹೋಗಬೇಕು ಎಂದು ನಿರ್ಧರಿಸಿದೆ ಎಂದು ಹೇಳಿದರು. ಒಟ್ಟಾರೆ ಇಷ್ಟು ದಿನಗಳ ಕಾಲ ದಿವ್ಯಾ ಸುರೇಶ್, ಮಂಜು ಹಾಗೂ ಶಮಂತ್ ನಡುವಿನ ಟ್ರಯಾಂಗಲ್ ಲವ್ ಸ್ಟೋರಿ ಗಾಸಿಫ್ ಚರ್ಚೆಯಲ್ಲಿತ್ತು. ಇದೀಗ ದಿವ್ಯಾ ಉರುಡುಗ ಹಾಗೂ ಅರವಿಂದ್ ಜೋಡಿ ಹೈಲೈಟ್ ಆಗ್ತಿದ್ದಾರೆ.

BIGGBOSS 8 : ‘ಶುಭಾ ಜೊತೆ ಮತ್ತೊಂದು ಮದ್ವೆ ಊಟ ಫಿಕ್ಸ್’..!

ಹೇಗಿದೆ ಗೊತ್ತಾ ಯುವರತ್ನ ಟ್ರೈಲರ್..? ಸಿನಿಮಾ ಕಥೆ ಇದೆನಾ..?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd