‘ನಿಧಿ ದೊಡ್ಡ ಫಿಗರ್ ಆದ್ರೆ, ನಾನು ದೊಡ್ಡ ಫಿಗರೇ’ – ಅರವಿಂದ್
ಬಿಗ್ ಬಾಸ್ ಶೋ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿ ಮತ್ತೆ ಪುರಾರಂಭಾವಗಿದೆ.. ಈ ನಡುವೆ ಈಗಾಗಲೇ ಹೊರಗಡೆ ಹೋಗಿ ಎಪಿಸಸೋಡ್ ಗಳನ್ನ ನೋಡಿ ವಾಪಸ್ ತಪ್ಪುಗಳನ್ನ ಸರಿ ಪಡಿಸಿಕೊಂಡು ಹೊಸ ಗೇಮ್ ಸ್ಟ್ರಾಟರ್ಜಿಗಳೊಂದಿಗೆ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟಿದ್ದಾರೆ.. ಹಲವರಲ್ಲಿ ಬದಲಾವಣೆಗಳು ಕಾಣ್ತಿವೆ..
ಅದೇ ರೀತಿ ಪರಸ್ಪರ ಕಿತ್ತಾಟಗಳು ಹೆಚ್ಚಾಗಿದೆ.. ಒಂದೆಡೆ ಪ್ರಶಾಂತ್ ಸಂಬರಗಿ ದಿವ್ಯಾ ಸುರೇಶ್ ಮತ್ತೊಂದೆಡೆ ಚಕ್ರವರ್ತಿ ಮಂಜು ಪಾವಗಡ , ಇದೀಗ ಅರವಿಂದ್ ಮತ್ತು ನಿಧಿ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯುತ್ತಿದ್ದು, ಮನಸ್ತಾಪ ಉಂಟಾಗಿದೆ.. ಆದ್ರೆ ಇವರಿಬ್ಬರ ಜಗಳದ ನಡುವೆ ತಗಲಾಕಿಕೊಂಡು ಶುಭಾ ಪರದಾಡ್ತಿದ್ದಾರೆ..
ವಿಜಯ್ ದೇವರಕೊಂಡ ಜೊತೆಗಿರುವ ಫೇವರೇಟ್ ಫೋಟೋ ಶೇರ್ ಮಾಡಿದ ರಶ್ಮಿಕಾ
ಅರವಿಂದ್ ಮತ್ತು ನಿಧಿ ಜಗಳವಾಡಿಕೊ0ಡಿದ್ದಾರೆ.. ಮಾತಿನ ಭರದಲ್ಲಿ ಅರವಿಂದ್ ಅಂದಿರುವ ಮಾತನಿಂದ ದಿವ್ಯಾ ನೊಂದಿದ್ದಾರೆ.. ಈ ಬಗ್ಗೆ ಅರವಿಂದ್ ಕೂಡ ಬೇಸರಾಗಿದ್ದಾಗ ಅವರ ಬಳಿ ಬಂದ ಶುಭಾ ಪೂಂಜಾ ಸಮಾಧಾನ ಪಡಿಸಲು ಮುಂದಾಗಿದ್ದಾರೆ.
ಈ ವೇಳೆ ಅರವಿಂದ್, ನನಗೆ ನಿಧಿ ಯಾರು ಅಂತಾನೆ ಗೊತ್ತಿರಲಿಲ್ಲಾ ಬಿಗ್‍ಬಾಸ್ ಮನೆಗೆ ಬಂದ ನಂತರ ಗೊತ್ತಾಗಿದ್ದು, ನಾನು ಅವಳ ಬಗ್ಗೆ ಕೆಟ್ಟದಾಗಿ ಏನು ಮಾತನಾಡಿಲ್ಲ ಎಂದಿದ್ದಾರೆ. ಇದಕ್ಕೆ ಶುಭಾ ನನಗೆ ನೀವಿಬ್ಬರು ಚೆನ್ನಾಗಿ ಗೊತ್ತು ನೀವಿಬ್ಬರು ಕೂಡ ನನ್ನ ಉತ್ತಮವಾದ ಸ್ನೇಹಿತರು. ಇದೀಗ ನೀವು ಹೀಗೆ ಜಗಳ ಮಾಡಿಕೊಂಡರೆ ನಾನು ಏನು ಮಾಡೋದು. ನನಗೆ ಇಲ್ಲಿ ಇರುವವರೆಲ್ಲಾ ಸ್ನೇಹಿತರೆ. ನಾನೀಗ ಯಾರ ಪರ ನಿಲ್ಲುವುದು ಎಂದು ಅರವಿಂದ್‍ಗೆ ಪ್ರಶ್ನೆ ಮಾಡಿದ್ದಾರೆ.
ನಾನು ಮತ್ತು ಮಂಜು ಮಾತನಾಡುತ್ತಿರುವಾಗ ಮಧ್ಯೆ ಮಾತನಾಡಿದ್ದಕ್ಕೆ ನಾನು ಮುಚ್ಚು ಎಂದಿದ್ದೆ ಅದರಲ್ಲಿ ಏನು ತಪ್ಪು ಎಂದು ಅರವಿಂದ್ ಶುಭಾಗೆ ಮರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಶುಭಾ ನೀನು ಎಲ್ಲರ ಮುಂದೆ ಆ ರೀತಿ ಹೆಳಿದರೆ ಅವಳಿಗೂ ನೋವಾಗಲ್ವ ಎಂದಿದ್ದಾರೆ. ಬಳಿಕ ಅರವಿಂದ್ ಅವಳು ನನಗೆ ಏನೇನೊ ಹೇಳಿದ್ದಾಳೆ ನನಗೆ ಹೇಗೆ ಅನಿಸಬೇಕು. ನಾನು ಉದ್ದೇಶಪೂರ್ವಕವಾಗಿ ಕಟ್ಟ ಪದ ಬಳಸಿಲ್ಲ. ಅವಳು ದೊಡ್ಡ ಫಿಗರ್ ಆದರೆ ನಾನು ಕೂಡ ಫಿಗರ್. ನನಗೆ ಇಲ್ಲಿ ತುಂಬಾ ಜನ ಫ್ರೆಂಡ್ಸ್ ಇದ್ದಾರೆ. ಈ ಬಗ್ಗೆ ನಾನು ಇನ್ನೂ ಅವಳೊಂದಿಗೆ ಏನು ಮಾತನಾಡೊದಕ್ಕೆ ಹೋಗುವುದಿಲ್ಲ ಎಂದಿದ್ದಾರೆ.