BIGGBOSS 8 : ದಿವ್ಯಾ – ಮಂಜು ಸಂಬಂಧದ ಬಗ್ಗೆ ಪ್ರಿಯಾಂಕ ಹೀಗೆ ಹೇಳಿದ್ದೇಕೆ..?

1 min read

BIGGBOSS 8 : ದಿವ್ಯಾ – ಮಂಜು ಸಂಬಂಧದ ಬಗ್ಗೆ ಪ್ರಿಯಾಂಕ ಹೀಗೆ ಹೇಳಿದ್ದೇಕೆ..?

ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಮೂವರೂ ಸ್ಪರ್ಧಿಗಳು ಸಹ ಒಂದಲ್ಲಾ ಒಂದೂ ವಿಚಾರಕ್ಕೆ ಮನೆ ಮಂದಿಯ ದೃಷ್ಟಿಯಲ್ಲಿ ನಿಷ್ಠೂರರಾಗಿದ್ದಾರೆ.

ಇದೀಗ ಪ್ರಿಯಾಂಕಾ ತಿಮ್ಮೇಶ್ ದಿವ್ಯಾ ಹಾಗೂ ಮಂಜು ಸಂಬಂಧದ ಬಗ್ಗೆ ಮಾತನಾಡಿ ದಿವ್ಯಾ ಸುರೇಶ್ ದೃಷ್ಟಿಯಲ್ಲೂ ಕೆಟ್ಟವರಾದಂತೆ ಕಾಣ್ತಿದೆ. ಬಿಗ್ ಬಾಸ್ ಹೊಸ ಇಬ್ಬರು ಸ್ಪರ್ಧಿಗಳಿಗೆ ಪೆಟ್ಟಿಗೆಯೊಂದರಲ್ಲಿ ಕೆಲವು ವಸ್ತುಗಳಿದ್ದು, ಅವುಗಳನ್ನು ಸೂಕ್ತ ಕಾರಣಗಳೊಂದಿಗೆ ಮನೆಯ ಸದಸ್ಯರಿಗೆ ನೀಡುವಂತೆ ಸೂಚಿಸಿದ್ದರು.

ಅದರಂತೆ ಈ ಚಟುವಟಿಕೆ ವೇಳೆ ಪ್ರಿಯಾಂಕ ತಿಮ್ಮೇಶ್, ದಿವ್ಯಾಗೆ ಬಕೆಟ್ ನೀಡಿದ್ದಾರೆ. ಇದಕ್ಕೆ ಕಾರಣ ಕೊಟ್ಟು, ಯಾವಾಗಲೂ ದಿವ್ಯಾ ಸುರೇಶ್, ಮಂಜು ಜೊತೆಗೆ ಇರುತ್ತಾರೆ. ಇದು ಒಬ್ಬರಿಗೆ ಮೀಸಲಾಗಿರುವಂತೆ ಕಾಣಿಸುತ್ತದೆ. ಹಾಗಾಗಿ ನೀವು ಎಲ್ಲರ ಜೊತೆಗೂ ಬೆರೆಯಬೇಕು ಎಂದು ಬಕೆಟ್ ನೀಡಿದರು.

ಬಕೆಟ್ ಸಿಕ್ಕ ಬೇಸರದಲ್ಲಿದ್ದ ದಿವ್ಯಾ ನೇರವಾಗಿ ಹೋಗಿ ಪ್ರಿಯಾಂಕಾ ಬಳಿ ಈ ಬಗ್ಗೆ ಮಾತನಾಡಿದ್ದಾರೆ. ನಾನು ಮಂಜು ಜೊತೆಗೆ ಇರುತ್ತೇನೆ ಎಂದು ನಿಮಗೆ ಯಾಕೆ ಹಾಗೆ ಅನಿಸಿತು. ನೀವು ಯಾವ ರೀತಿ ನೋಡುತ್ತಿದ್ದೀರಾ ಎಂದು ಹೇಳುತ್ತೀರಾ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಆಗ ಪ್ರಿಯಾಂಕ ನಾನು ನಿಮ್ಮೆಲ್ಲರನ್ನು ಹೊರಗಿನಿಂದಲೇ ಪರಿಚಯ ಮಾಡಿಕೊಂಡಿದ್ದೇನೆ.

ನೀವು ಯಾವಾಗಲೂ ಮಂಜು ಜೊತೆಯಲ್ಲಿಯೇ ಇರುತ್ತೀರಾ ಅದು ತಪ್ಪೋ, ಸರಿಯೋ ನನಗೆ ಗೊತ್ತಿಲ್ಲ. ನೀವು ಬೇರೆಯವರೊಂದಿಗೆ ಬೆರೆಯದೇ ಇರುವುದು ಕಾಣಿಸುತ್ತಿದೆ. ನಿಮಗೆ ಅವರ ಜೊತೆಯಲ್ಲಿಯೇ ಮಾತನಾಡಲು, ಕಂಫರ್ಟ್ ಎಂದು ಅನಿಸಿದರೆ, ಪ್ರೀತಿ, ವಿಶ್ವಾಸವಿದ್ದರೆ ಅವರೊಂದಿಗೆಯೇ ಇರಿ ತೊಂದರೆ ಏನು ಇಲ್ಲ. ನಾವು ಸಾವಿರ ತರ ನೋಡಿಕೊಳ್ಳುತ್ತೇವೆ.

ಎಲ್ಲರ ದೃಷ್ಟಿ ಒಂದೇ ರೀತಿ ಇರುವುದಿಲ್ಲ. ನಾನು ನನ್ನ ವೀವ್ ನಲ್ಲಿ ಹೇಳುತ್ತೇನೆ. ನೀವು ನಿಮ್ಮ ವೀವ್ನಲ್ಲಿ ಯೋಚನೆ ಮಾಡಿಕೊಳ್ಳಿ ಅಷ್ಟೇ ಎಂದು ಹೇಳಿದ್ದಾರೆ. ಇದೇ ವೇಲೆ ನೀವಿಬ್ಬರು ಒಳ್ಳೆಯ ಫ್ರೆಂಡ್ಸ್, ಮಂಜು ಅವರು ಕೂಡ ಯಾವತ್ತು ಕೆಟ್ಟ ರೀತಿ ನಡೆದುಕೊಂಡಿಲ್ಲ. ನೀವು ಕೂಡ ಯಾವತ್ತು ಹಾಗೇ ನಡೆದುಕೊಂಡಿಲ್ಲ. ನನಗೆ ನೀವಿಬ್ಬರು ಕಪಲ್ ರೀತಿ ಕಾಣಿಸಿಲ್ಲ. ನೀವಿಬ್ಬರು ಬೆಸ್ಟ್ ಫ್ರೆಂಡ್ಸ್ ರೀತಿ ಇದ್ದೀರಾ ಎಂದು ಪ್ರಿಯಾಂಕ ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ.

BIGGBOSS 8 : ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ‘ಕಳಪೆ’ಯಾದ ಚಕ್ರವರ್ತಿ ಇನ್ಮುಂದೆ ಸರ್ವಾಧಿಕಾರಿಯಾಗ್ತಾರಂತೆ..!

ದಿವ್ಯಾ ಬಕೆಟ್ , ವೈಷ್ಣವಿ ಛತ್ರಿ ಅಂದಿದ್ದೇಕೆ ವೈಲ್ಡ್ ಕಾರ್ಡ್ ಸ್ಪರ್ಧಿಗಳು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd