BIGGBOSS 8 : ಸೆಕೆಂಡ್ಸ್ ಇನ್ನಿಂಗ್ಸ್ – ಹೊಸತನದೊಂದಿಗೆ ಗ್ರ್ಯಾಂಡ್ ಎಂಟ್ರಿಗೆ ಕಿಚ್ಚ ಸುದೀಪ್ ರೆಡಿ
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಅರ್ಧಕ್ಕೆ ನಿಂತು ಹೋಗಿದ್ದ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 8 ಇದೀಗ ಮತ್ತೆ ಆರಂಭವಾಗ್ತಿದೆ… ಬುಧವಾರ ಅಂದ್ರೆ ಜೂನ್ 23ರಿಂದ ಸಂಜೆ 6ರಿಂದ ಬಿಗ್‍ಬಾಸ್ ಮತ್ತೆ ಶುರುವಾಗ್ತಿದೆ.. ಶೋ ನಿಂತು ಹೋದ ಬೇಸರದಲ್ಲಿದ್ದ 12 ಸ್ಪರ್ಧಿಗಳು ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿಕೊಡಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ..
ನಾಳೆ ಸಂಜೆ 6 ಗಂಟೆಯಿಂದ ಪ್ರಾರಂಭವಾಗಿ 5 ತಾಸು ಕಾರ್ಯಕ್ರಮ ಕಿಚ್ಚನ ನೀರೂಪಣೆಯಿಂದ ಪ್ರಾರಂಭವಾಗಲಿದೆ. 72 ನೇ ದಿನಕ್ಕೆ ಶೋ ನಿಂತು ಹೋಗಿತ್ತು… ಅಂತಿಮಹಂತದ ಸ್ಪರ್ಧೆಗೆ 28 ದಿನ ಬಾಕಿ ಉಳಿದಿತ್ತು. ಇದೀಗ ಸೆಕೆಂಡ್ ಇನ್ನಿಂಗ್ಸ್ ನಾಳೆಯಿಂದ ಪ್ರಾರಂಭವಾಗ್ತಿದ್ದು, ಬರೋಬ್ಬರಿ 50 ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ ಎನ್ನಲಾಗ್ತಿದೆ. ಈ ನಡುವೆ ಕಿಚ್ಚ ಸುದೀಪ್ ಅವರು ಸಹ ಕಾರ್ಯಕ್ರಮವನ್ನ ನಡೆಸಿಕೊಡಲು ಸಿದ್ಧರಾಗಿದ್ದಾರೆ. ಸುದೀಪ್ ಅವರು ತಮ್ಮ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬಿಗ್ ಬಾಸ್ ಗೆ ಬರಲು ಸನ್ನದ್ಧವಾಗಿರುವುದಾಗಿ ತಿಳಿಸಿದ್ದಾರೆ.
‘ಈಗ ‘ಮರು-ಪ್ರವೇಶ’. ಇದು ಹೊಸತನದ ಆರಂಭ ‘ ಎಂದು ಬರೆದುಕೊಂಡಿದ್ದಾರೆ. ಅಂದ್ಹಾಗೆ ಶೋ ಅರ್ಧಕ್ಕೆ ನಿಂತುಹೋಗುವುದಕ್ಕೂ ಮುನ್ನ 3 ವಾರಗಳ ಕಾಲ ಅನಾರೋಗ್ಯದಿಂದಾಗಿ ಕಿಚ್ಚ ಸುದೀಪ್ ಅವರು ವೀಕೆಂಡ್ ಸಂಚಿಕೆಯಲ್ಲಿ ನಿರೂಪಣೆ ಮಾಡಿರಲಿಲ್ಲ.. ಹೀಗಾಗಿ ಕಿಚ್ಚನ ದರ್ಶನ ವಿಲ್ಲದೆ ಅಭಿಮಾನಿಗಳು ಬೇಸರಗೊಂಡಿದ್ರು.. ಇದೀಗ ಮತ್ತೆ ಸುದೀಪ್ ಅವರ ನಿರೂಪಣೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಆದ್ರೆ ಕೆಲ ಗೊಂದಲಗಳು ಸವಾಲುಗಳು ಇವೆ.. ಹಳೆ ಸ್ಪರ್ಧಿಗಳ ಜೊತೆಗೆ ಮತ್ತೆ ಯಾರಾದ್ರೂ ಹೊಸಬರು ಬಿಗ್‍ಬಾಸ್ ಮನೆಯನ್ನು ಪ್ರವೇಶ ಮಾಡುವ ಸಾಧ್ಯತೆಗಳು ಇದೆಯಾ… ಆಟದಲ್ಲಿ ಈ ಬಾರಿ ಯಾವುದಾದ್ರೂ ಬದಲಾವಣೆಗಳು ಆಗುತ್ತಾ ಎನ್ನುವುದನ್ನ ಕಾದು ನೋಡಬೇಕಿದೆ.. ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್, ದಿವ್ಯಾ ಸುರೇಶ್, ಅರವಿಂದ್ ಕೆ.ಪಿ., ದಿವ್ಯಾ ಉರುಡುಗ, ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ರಘು ಗೌಡ, ವೈಷ್ಣವಿ ಗೌಡ, ಶಮಂತ್ ಗೌಡ ಈಗಾಗಲೇ ತಮ್ಮ ಸೂಟ್‍ಕೇಸ್ ಪ್ಯಾಕ್ ಮಾಡಿಕೊಂಡು ಹೋಟೆಲ್ ಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ. ಈ ಸಂಬಂಧಿತ ವಿಡಿಯೋವನ್ನ ಸಹ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ..
ಬಿಗ್ ಬಾಸ್ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಅರ್ಧದಲ್ಲಿಯೇ ನಿಂತು ಹೋಗಿತ್ತು. ಸ್ಪರ್ಧಿಗಳು ತಾವು ಕಟ್ಟಿಕೊಂಡು ಬಂದಿದ್ದ ಕನಸನ್ನು ಬಿಗ್‍ಬಾಸ್ ಮನೆಯಲ್ಲಿಯ ಈಡೇರಿಸಿಕೊಳ್ಳಲಾರದೆ ಅರ್ಧಕ್ಕೆ ಬಂದಿದ್ದರು. ಮತ್ತೊಂದೆಡೆ ಬಿಗ್ ಬಾಸ್ ಅಭಿಮಾನಿಗಳು ಸಹ ಶೋ ಅರ್ಧಕ್ಕೆ ನಿಂತುಹೋದ ಬೇಸರದಲ್ಲಿದ್ದರು.. ಮತ್ತೆ ಶುರುವಾಗುತ್ತಾ ಅಂತ ಎದುರು ನೋಡ್ತಿದ್ರು.. ಅವರೂ ಅವರು ಫುಲ್ ಖುಷ್ ಆಗಿದ್ದಾರೆ.
ಮಗನಿಗೆ ದುಬಾರಿ ಕಾರ್ ಗಿಫ್ಟ್ – ವದಂತಿಗಳಿಗೆ ಸ್ಪಷ್ಟನೆ ಕೊಟ್ಟ ಸೋನು ಸುದ್