BIGGBOSS 8 : ಮಂಜು ಫೇಕ್ ಟೈಗರ್ , ಡಬಲ್ ಆಕ್ಟಿಂಗ್ ಟೈಗರ್ – ಶುಭಾ
ಬಿಗ್ ಬಾಸ್ ಮನೆಯಲ್ಲಿ ಎಲ್ಲರ ವ್ಯಕ್ತಿತ್ವಗಳೂ ಸಹ ವಿಭಿನ್ನವಾಗಿದೆ.. ಒಬ್ಬೊಬ್ಬರೂ ಒಂದೊಂದು ರೀತಿಯಾಗಿ ಯೋಚನೆ ಮಾಡ್ತಾರೆ.. ಅದ್ರಂತೆ ಮುಗ್ಧರಂತೆ ಕಾಣುವ ಶುಭಾ ಕ್ಯೂಟ್ ನೆಸ್ ಗೆ ಮನೆ ಮಂದಿಯಲ್ಲಾ ಶುಭಾರನ್ನ ತುಂಬಾ ಇಷ್ಟ ಪಡ್ತಾರೆ.. ಶುಭಾ ಈವರೆಗೂ ಮನೆಯಲ್ಲಿ ಯಾರ ಜೊತೆಗಾದರೂ ಕಿತ್ತಾಟ ಮಾಡಿಕೊಂಡಿರುವುದು ತೀರಾ ಕಡಿಮೆ.,
ಇತ್ತೀಚೆಗೆ ಶುಭಾ ದಿವ್ಯಾ ಉರುಡುಗ ಬಳಿ ಮಾತನಾಡುತ್ತಾ ನಾನು ಟೈಗರ್ ವೊಂದನ್ನು ಸಾಕಿದ್ದು, ಅದರ ಜೊತೆಗೆ ಆಟವಾಡ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಅಂದ್ಹಾಗೆ ಶುಭಾ ರಿಯಲ್ ಆಗಿ ಟೈಗರ್ ಸಾಕಿಲ್ಲ ಬದಲಾಗಿ ಕನಸಿನಲ್ಲಿ.. ಹೌದು ಕಿಚನ್ನಲ್ಲಿ ಟಿಫನ್ಗೆ ತಯಾರಿ ನಡೆಸುತ್ತಿದ್ದ ವೇಳೆ, ಶುಭಾ ಪೂಂಜಾ ನಾನು ಕನಸಿನಲ್ಲಿ ಟೈಗರ್ ಸಾಕಿದ್ದೆ, ಅದರ ಜೊತೆ ಆಟ ಆಡುತ್ತಿದ್ದೆ, ಅದಕ್ಕೆ ಚಿಕನ್ ಕೊಡುತ್ತಿದ್ದೆ. ನನಗೆ ಟೈಗರ್ ಬೇಕು ಎಂದು ದಿವ್ಯಾ ಉರುಡುಗಗೆ ಕೇಳಿದ್ದಾರೆ.
ಆಗ ದಿವ್ಯಾ ಉರುಡುಗ ಟೈಗರ್ ಹೊರಗಡೆ ಕಾಫಿ ಕುಡಿಯುತ್ತಿದೆ ಎಂದು ಮಂಜುಗೆ ಪರೋಕ್ಷವಾಗಿ ಹೇಳುತ್ತಾರೆ. ಇದಕ್ಕೆ ಶುಭಾ ಅದು ಟೈಗರ್ ಅಲ್ಲ ಕೋತಿ ಮರಿ ಎಂದಾಗ ದಿವ್ಯಾ ಉರುಡುಗ ಅದನ್ನು ನೀನು ಯಾವ ಆಂಗಲ್ನಲ್ಲಿ ಬೇಕಾದರೂ ಮಾಡಿಕೊಳ್ಳಬಹುದು, ಅದು ಸ್ವಲ್ಪ ಪಗ್ ತರ ಕಾಣಿಸಬಹುದು, ಆದರೆ ಅದು ಟೈಗರ್ ಎನ್ನುತ್ತಾರೆ. ಅದಕ್ಕೆ ಶುಭಾ ಪೂಂಜಾ ಫೇಕ್ ಟೈಗರ್ ಅದು, ಡಬಲ್ ಆ್ಯಕ್ಟಿಂಗ್ ಟೈಗರ್ ಎಂದಿದ್ಧಾರೆ. ನಂತರ ದಿವ್ಯಾ ಉರುಡುಗ ಅರವಿಂದ್ ತೋರಿಸಿ, ಸ್ಟ್ರಿಕ್ಟ್ ಆಗಿರುವ ಟೈಗರ್ ಬೇಕಾ ಎಂದು ಕೇಳುತ್ತಾರೆ. ಇದಕ್ಕೆ ಶುಭಾ ಅದು ಬರೀ ಕಚ್ಚುತ್ತೆ, ಗುರ್ ಅನ್ನುತ್ತೆ ಎಂದು ಹೇಳುತ್ತಾ ಇಬ್ಬರು ಹಾಸ್ಯ ಮಾಡಿದ್ದಾರೆ.
ಗೊಂದಲ ಬಗೆಹರಿದಿದೆ : ‘ಜೊತೆ ಜೊತೆಯಲಿ’ ಮುಗಿಯುವ ತನಕ ಅನು ಪಾತ್ರವನ್ನು ನಾನೇ ಮಾಡುತ್ತೇನೆ – ಮೇಘಾ ಶೆಟ್ಟಿ