BIGGBOSS 8 : ಲ್ಯಾಗ್ ಮಂಜು ವಿರುದ್ಧ ದಿವ್ಯಾ ಸುರೇಶ್ ಬೇಸರ
ಬೆಂಗಳೂರು : ಬಿಗ್ ಬಾಸ್ ಶೋ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿ ಮತ್ತೆ ಪುರಾರಂಭಾವಗಿದೆ.. ಈ ನಡುವೆ ಈಗಾಗಲೇ ಹೊರಗಡೆ ಹೋಗಿ ಎಪಿಸಸೋಡ್ ಗಳನ್ನ ನೋಡಿ ವಾಪಸ್ ತಪ್ಪುಗಳನ್ನ ಸರಿ ಪಡಿಸಿಕೊಂಡು ಹೊಸ ಗೇಮ್ ಸ್ಟ್ರಾಟರ್ಜಿಗಳೊಂದಿಗೆ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟಿದ್ದಾರೆ.. ಹಲವರಲ್ಲಿ ಬದಲಾವಣೆಗಳು ಕಾಣ್ತಿವೆ.. ಈ ನಡುವೆ ಫೈಟ್ ಗಳು ಕೂಡ ಆರಂಭವಾಗಿದೆ.. ಪರಸ್ಪರ ಭಿನ್ನಾಭಿಪ್ರಾಯಗಳು ಕಾಣುತ್ತಿವೆ.. ಅದ್ರಂತೆ ಮೊದಲ ಇನ್ನಿಂಗ್ಸ್ ನಲ್ಲಿ ಪ್ರಣಯ ಪಕ್ಷಿಗಳಂತೆ ದಿವ್ಯಾ ಸುರೇಶ್ ಲ್ಯಾಗ್ ಮಂಜು ನಡುವೆ ಯಾವುದಾದ್ರೂ ಒಂದೂ ಕಾರಣಕ್ಕೆ ಭಿನ್ನಾಭಿಪ್ರಾಯಗಳು ಉಂಟಾಗುತ್ತಲೇ ಇದೆ..
ಈ ವಾರ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಬಹಳ ಡಿಫರೆಂಟ್ ಟಾಸ್ಕ್‌ಗಳನ್ನು ನೀಡಿದ್ದಾರೆ. ಟಾಸ್ಕ್ ಆರಂಭಕ್ಕೂ ಮುನ್ನ ಮ್ಯೂಸಿಕ್ ವೊಂದನ್ನು ಪ್ಲೇ ಮಾಡಿದಾಗ ಎರಡು ತಂಡದ ಕ್ಯಾಪ್ಟನ್‍ಗಳು ಕನ್ಫೆಕ್ಷನ್ ರೂಮ್‍ಗೆ ಹೋಗಬೇಕಾಗುತ್ತದೆ. ಈ ಮಧ್ಯೆ ಮಂಜು ತಮ್ಮ ತಂಡದ ಸದಸ್ಯರೊಂದಿಗೆ ಚರ್ಚೆ ನಡೆಸುತ್ತಿದ್ದ ವೇಳೆ ಮ್ಯೂಸಿಕ್ ಪ್ಲೇ ಆಗುತ್ತದೆ. ಆಗ ದಿವ್ಯಾ ಸುರೇಶ್ ನಿಧಾನವಾಗಿ ಡ್ಯಾನ್ಸ್ ಮಾಡುತ್ತಾ ಬರುತ್ತಾರೆ. ಇದನ್ನು ಕಂಡ ಮಂಜು ದಿವ್ಯಾ ಸುರೇಶ್‍ಗೆ ಬೇಗ ಬಾ ಎಂದು ರೇಗುತ್ತಾರೆ. ಇದರಿಂದ ಬೇಸರಗೊಂಡ ದಿವ್ಯಾ ಸುರೇಶ್ ಪ್ರಿಯಾಂಕ ಬಳಿ, ನಾನು ನಡೆದುಕೊಂಡು ಬರಬೇಕಾದರೆ ಮ್ಯೂಸಿಕ್ ಪ್ಲೇ ಆಯಿತು. ಅದಕ್ಕೆ ನಾನು ಡ್ಯಾನ್ಸ್ ಮಾಡಿಕೊಂಡು ಬರುತ್ತಿದ್ದೆ. ಅದಕ್ಕೆ ಬೇಗ ಬಾ ಏನು ಮಾಡುತ್ತಿದ್ಯಾ ಎಂದು ರೇಗುತ್ತಾರೆ. ನನ್ನ ಮೇಲೆ ರೇಗುವ ಅವಶ್ಯಕತೆ ಏನಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾವು ಫಸ್ಟ್ ಇನ್ನಿಂಗ್ಸ್‌ನಲ್ಲಿ ಹೇಗಿದ್ವಿ ಹಾಗೇ ಇರಲು ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಆಗುವುದಿಲ್ಲ ಎಂದು ಹೇಳಿದ್ದೆ ಅವನು, ಅವನು ಇರಲು ಆಗುವುದಿಲ್ಲ ಎಂದರೆ ನಾನು ಹಾಗೆಯೇ ಇರುವುದಕ್ಕೆ ಆಗುವುದಿಲ್ಲ. ನಾನು ಸುಮ್ಮನೆ ಒಬ್ಬಳೇ ಕುಳಿತುಕೊಳ್ಳಲು ಆಗುವುದಿಲ್ಲ, ನಾನು ಎಲ್ಲರ ಜೊತೆಯಲ್ಲಿ ಕೂಡ ಮಾತನಾಡಬೇಕಾಗುತ್ತದೆ, ಎಲ್ಲರ ಜೊತೆ ಬೆರೆಯಬೇಕಾಗುತ್ತದೆ. ಕೊಟ್ಟಿರುವ ಟಾಸ್ಕ್‌ಗಳನ್ನು ಮಾಡಬೇಕಾಗುತ್ತದೆ. ಸುದೀಪ್ ಸರ್ ಹೇಳಿದ್ರು, ನಾನು ಚೆನ್ನಾಗಿ ಆಟ ಆಡುತ್ತಿದ್ದೇನೆ ಅಂತ, ನಾನು ಕೂಡ ಅದನ್ನೇ ಮಾಡಬೇಕಾಗುತ್ತದೆ. ಸುಮ್ಮನೆ ನನ್ನ ಮೇಲೆ ರೇಗಾಡಿದ, ಅದರ ಅವಶ್ಯತೆ ಇರಲಿಲ್ಲ ಎಂದು ಹೇಳುತ್ತಾರೆ.
ಅಲ್ಲದೇ ಅವನು ಶುಭಾ ಜೊತೆ ಬಹಳ ಕ್ಲೋಸ್ ಆಗಿದ್ದಾನೆ. ಅವನು ಕುಳಿತು ಹೋದ ಬಿನ್ ಬ್ಯಾಗ್ ಮೇಲೆ ಕುಳಿತುಕೊಳ್ಳಲು ನಾನು ಎಷ್ಟು ಯೋಚಿಸುತ್ತೇನೆ ಗೊತ್ತಾ. ನಾನು ನೀನು ಯಾಕೆ ಅಷ್ಟು ಕ್ಲೋಸ್ ಆಗಿದ್ಯಾ ಅಂತ ಒಂದು ಕಂಪ್ಲೇಟ್ ಕೂಡ ಮಾಡಿಲ್ಲ, ನಿನ್ನ ಲೈಫ್, ನೀನು ಏನು ಬೇಕಾದರೂ ಮಾಡಬಹುದು, ಹಾಗೆಯೇ ನನ್ನ ಲೈಫ್ ನಾನು ಏನು ಬೇಕಾದರೂ ಮಾಡಬಹುದು. ನಾನು ಏನು ಮಾಡಿಲ್ಲ ಆದರೂ ಎಲ್ಲರೆದುರು ಸಿಟ್ಟಿನಿಂದ ಬೈಯುವುದು ಎಷ್ಟು ಸರಿ ನಿನ್ನೆ ಕೂಡ ಹೀಗೆ ಮಾಡಿದ ಎಂದು ಕಣ್ಣೀರಾಕಿದ್ದಾರೆ.