BIGGBOSS 8 – 50 ದಿನಗಳ ಬಿಗ್ ಬಾಸ್ ಜರ್ನಿ ಮುಗಿಸಿ ಮನೆಯಿಂದ ಹೊರಬಂದ ವಿಶ್ವನಾಥ್..!

1 min read

BIGGBOSS 8 – 50 ದಿನಗಳ ಬಿಗ್ ಬಾಸ್ ಜರ್ನಿ ಮುಗಿಸಿ ಮನೆಯಿಂದ ಹೊರಬಂದ ವಿಶ್ವನಾಥ್..!

ಬೆಂಗಳೂರು : ಬಿಗ್ ಬಾಸ್ ಸೀಸನ್ 8 ರಲ್ಲಿ ಮನೆಯಿಂದ ಹೊರಬಂದ 7ನೇ ಸ್ಪರ್ಧಿ ಮನೆಯ ಕಿರಿಯ ಸದಸ್ಯ ವಿಶ್ವನಾಥ್ ಹಾವೇರಿ.. ಹಾಗೆಯೇ ವಿಶ್ವನಾಥ್ ಹಾವೇರಿ ಹೋಗಬಹುದು ಎನ್ನುವ ಸಾಕಷ್ಟು ವದಂತಿಗಳು ಮೊದಲೇ ಹರಿದಾಡಿದ್ದವು. ಅದ್ರಂತೆ ಬಿಗ್ ಬಾಸ್ ಗೆ ವಿಶ್ವ ವಿದಾಯ ಹೇಳಿ ಹೋಗಿದ್ದಾರೆ..

ಆರಂಭದಿಂದಲೂ ತುಂಬಾನೆ ಸೈಲೆಂಟ್ ಆಗಿದ್ದ ವಿಶ್ವ ಹೆಚ್ಚಾಗಿ ಲೈಮ್ ಲೈಟ್ ಗೂ ಬರಲಿಲ್ಲ. ಅವರು ಇತರೇ ಸದಸ್ಯರಂತೆ ಮಿಂಚಲೂ ಇಲ್ಲ.. ನಿಜ ಹೇಳೋದಾದ್ರೆ ಅನೇಕರು ಸೋಷಿಯಲ್ ಮೀಡಿಯಾಲ್ಲಿ ಮಾತನಾಡಿಕೊಂಡಿರೋದನ್ನ ನೋಡಿದ್ರೆ ವಿಶ್ವ ಮನೆಯಲ್ಲಿ ಇದ್ದಾರಾ ಇಲ್ವಾ ಅನ್ನೋದೆ ಗೊತ್ತಾಗದ ರೀತಿಯಲ್ಲಿ ಇದ್ದರು. ಆದ್ರೆ ಕ್ಯಾಪ್ಟನ್ ಆದಾಗ ಮಾತ್ರ ವಿಶ್ವ ತುಂಬಾ ಫೋಕಸ್ ಆಗಿದ್ರು. ಅದು ಬಿಟ್ರೆ ಅವರು ಹೆಚ್ಚಾಗಿ ಸದ್ದು ಮಾಡಲಾಗಲಿಲ್ಲ. ಆದ್ರೂ ಹೊರಗೆ ಅವರ ಫ್ಯಾನ್ಸ್ ಹೆಚ್ಚಿರುವ ಕಾರಣ ಅವರು ಇಷ್ಟು ದಿನಗಳ ಕಾಲ ಮನೆಯಲ್ಲಿ ಸೇಫ್ ಆಗಿದ್ರು. ಆದ್ರೆ ಈಗ ಎಲಿಮಿನೇಟ್ ಆಗಿದ್ದಾರೆ.

ಅಂದ್ಹಾಗೆ ಕಳೆದ ವಾರವೇ ಎಲಿಮಿನೇಟ್ ಆದ್ರೂ ಲಕ್ ಅಲ್ಲಿ ಬಚಾವ್ ಆಗಿಬಿಟ್ಟಿದ್ದ ಶಮಂತ್ ಈ ವಾರ ಮನೆಯಿಂದ ಹೊರಹೋಗಬಹುದೆಂಬ ಲೆಕ್ಕಾಚಾರವಿತ್ತು. ಆದ್ರೆ ಈ ವಾರವೂ ಲಕ್ಕಲ್ಲಿ ಶಮಂತ್ ಉಳಿದುಕೊಂಡಿದ್ದಾರೆ. ಆದ್ರೆ ವಿಶ್ವ ಎಲಿಮಿನೇಟ್ ಆಗಿದ್ದಾರೆ.

ಇನ್ನೂ ಪ್ರತಿವಾರ ಕಿಚ್ಚ ಸುದೀಪ್ ಅವರೇ ಎಲಿಮಿನೇಟ್ ಸ್ಪರ್ಧಿಯ ಘೋಷಣೆ ಮಾಡ್ತಿದ್ರು. ಆದ್ರೆ ಕಿಚ್ಚನ ಆರೋಗ್ಯ ಸ್ಥಿತಿ ಕೊಂಚ ಹದಗೆಟ್ಟಿರುವ ಕಾರಣ ಅವರು ಈ ವೀಕೆಂಡ್ ನಲ್ಲಿ ನಿರೂಪಣೆ ಮಾಡಲಿಲ್ಲ. ಇತ್ತ ಬಿಗ್ ಬಸ್ ಎಲಿಮಿನೇಟ್ ಆಗುವ ಸ್ಪರ್ಧಿಯನ್ನ ಘೋಷಣೆ ಮಾಡುವುದಕ್ಕೆ ಬ್ಯಾಕ್ ಅಪ್ ಪ್ಲಾನ್ ಮಾಡಿಕೊಂಡಿತ್ತು. ಅದ್ರಂತೆ ಬಿಗ್ ಸ್ಕ್ರೀನ್ ಮೇಲೆ ನೇರವಾಗಿ ವಿಶ್ವನಾಥ್ ಅವರ ಮನೆಯ ಆರಂಭದಿಂದ ಇಲ್ಲಿಯ ವರೆಗಿನ ಜರ್ನಿಯ ವಿಡಿಯೋ ಪ್ಲೇ ಮಾಡುವ ಮೂಲಕ ಎಲಿಮಿನೇಟ್ ಸ್ಪರ್ಧಿಯನ್ನೂ ಘೋಷಣೆ ಮಾಡಿತ್ತು..

ಇದಾದ ಬಳಿಕ ವಿಶ್ವ ಹಾಗೂ ಮನೆಯ ಇತರೇ ಸದಸ್ಯರು ಕೂಡ ಭಾವುಕರಾದ ದೃಶ್ಯ ಕಂಡು ಬಂತು. ಬಾವನಾತ್ಮಕವಾಗಿ ಮನೆಮಂದಿಗೆ ಗುಡ್ ಬೈ ಹೇಳಿ ವಿಶ್ವ ಮನೆಯಿಂದ ಆಚೆ ಹೋದರು. ಇನ್ನೂ ಎಲಿಮಿನೇಟ್ ಆಗಿ ಮನೆಯಿಮದ ಆಚೆ ಬರುವಾಗ ಬಿಗ್ ಬಾಸ್ ವಿಶ್ವನಿಗೆ ಒಂದು ವಿಶೇಷ ಅಧಿಕಾರ ಕೊಟ್ಟಿದ್ದರು. ಅದ್ರಂತೆ ಮುಂದಿನ ವಾರ ನಾಮಿನೇಷನ್ ತೂಗುಕತ್ತಿಯಿಂದ ವಿಶ್ವ ನಿದಿಯನ್ನ ಬಚಾವ್ ಮಾಡಿದ್ದಾರೆ. ಇದಕ್ಕೆ ಕಾರಣ ಕೊಟ್ಟಿರುವ ವಿಶ್ವ ನಾನು ನಿಧಿ ಸುಬ್ಬಯ್ಯ ಅವರನ್ನ ತನ್ನ ಅಕ್ಕನಂತೆ ಕಾಣುತ್ತೇನೆ ಎಂದಿದ್ದಾರೆ.


ಇಲಲಿಯವರೆಗೂ ಎಲಿಮಿನೇಟ್ ಆದ ಸ್ಪರ್ಧಿಗಳು
ಮೊದಲನೇ ವಾರ ಧನುಶ್ರೀ
2ನೇ ವಾರ ನಿರ್ಮಲಾ
3ನೇ ವಾರ ಗೀತಾ
4ನೇ ವಾರ ಚಂದ್ರಕಲಾ
5ನೇ ವಾರ ಶಂಕರ್ ಅಶ್ವಥ್
6ನೇ ವಾರ ( ಶಮಂತ್ ಎಲಿಮಿನೇಟ್ ಆದ್ರೂ ಸೇಫ್ ಆದ್ರು ) ವೈಜಯಂತಿ ಖುದ್ದು ಅವರೇ ಮನೆಯಿಂದ ಆಚೆ ಹೋದರು
7ನೇ ವಾರ ವಿಶ್ವನಾಥ್ ಹಾವೇರಿ

ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗೆ ಕೊರೋನಾ ಪಾಸಿಟಿವ್: ನಾವೆಲ್ಲರೂ ಒಟ್ಟಾಗಿ ಕೊರೋನಾವನ್ನು ತೊಲಗಿಸೋಣ – ರಾಂಪಾಲ್ ಟ್ವೀಟ್

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd