Bihar | ಭಾರೀ ಸ್ಪೋಟಕ್ಕೆ 11 ಜನ ಸಾವು
ಬಾಂಬ್ ತಯಾರಿಸಲು ಇಟ್ಟಿದ್ದ ಪ್ರಬಲ ಸ್ಪೋಟ
ಬಿಹಾರದ ಬಾಗಲ್‌ಪುರ್ ಜಿಲ್ಲೆಯಲ್ಲಿ ನಡೆದ ಘಟನೆ
15 ಕಿಮೀ ದೂರದಲ್ಲಿರುವ ನಾಲ್ಕು ಮನೆಗಳಿಗೆ ಹಾನಿ
ಬಾಗಲ್‌ಪುರ್ ವಲಯದ ಡಿಜಿಪಿ ಹಾಗೂ ಎಸ್‌ಪಿ ಸ್ಥಳಕ್ಕೆ ಭೇಟಿ
ಬಿಹಾರ : ಬಾಂಬ್ ತಯಾರಿಸಲು ಇಟ್ಟಿದ್ದ ಪ್ರಬಲ ಸ್ಫೋಟಕ ಸಿಡಿದು 11 ಜನರು ಮೃತಪಟ್ಟಿರುವ ಘಟನೆ ಬಿಹಾರದ ಬಾಗಲ್ ಪುರ್ ಜಿಲ್ಲೆಯ ಕಾಜ್‌ವಾಲಿ ಚಾಕ್ ನಲ್ಲಿ ನಡೆದಿದೆ.
ಗುರುವಾರ ರಾತ್ರಿ ಈ ದುರ್ಘಟನೆ ನಡೆದಿದ್ದು, ಘಟನೆ ನಡೆದ ಸ್ಥಳದಿಂದ 15 ಕಿಮೀ ದೂರದಲ್ಲಿರುವ ನಾಲ್ಕು ಮನೆಗಳು ಕುಸಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಈ ಘಟನೆಯಲ್ಲಿ ಸಾವು ನೋವಿನ ಪ್ರಮಾಣ ಹೆಚ್ಚಾಗುವ ಸಂಭವವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಾಗಲ್‌ಪುರ್ ವಲಯದ ಡಿಜಿಪಿ ಹಾಗೂ ಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಾಯಾಳುಗಳನ್ನು ಮಾಯಾಗಂಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಪೋಟ ನಡೆದ ಸ್ಥಳದ ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇದೆ. ಸದ್ಯರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. bihar-11 killed in blast in bhagalpur saaksha tv