ನಕಲಿ ಮದ್ಯ ಸೇವನೆ | ಒಂಭತ್ತು ಮಂದಿ ಸಾವು Bihar saaksha tv
ಬಿಹಾರ್ : ನಕಲಿ ಮದ್ಯ ಸೇವಿಸಿ 9 ಮಂದಿ ಮೃತಪಟ್ಟಿರುವ ಘಟನೆ ಬಿಹಾರದ ಮೊಹಮ್ಮದ್ ಪುರದಲ್ಲಿ ನಡೆದಿದೆ.
ಕಳೆದ 11 ದಿನಗಳ ಅಂತರದಲ್ಲಿ ನಕಲಿ ಮದ್ಯ ಸೇವಿಸಿ ಸಾಕಷ್ಟು ಮಂದಿ ಕೊನೆಯುಸಿರೆಳೆಯುತ್ತಿದ್ದಾರೆ.
ಅಕ್ಟೋಬರ್ 29 ರಂದು ಸರೈಯಾದಲ್ಲಿ ಎಂಟು ಜನರು ನಕಲಿ ಮದ್ಯ ಸೇವಿಸಿ ಮೃತಪಟ್ಟಿದ್ದರು.
ಇದೀಗ ಬುಧವಾರ 9 ಮಂದಿ ಮೃತಪಟ್ಟಿದ್ದು, ಹಲವರನ್ನು ಆಸ್ಪತೆಗೆ ದಾಖಲು ಮಾಡಲಾಗಿದೆ.
ಸದ್ಯ ಮೊಹಮ್ಮದ್ ಪುರಕ್ಕೆ ಗೋಪಾಲ್ ಗಂಜ್ ಡಿಎಂ ನವಲ್ ಕಿಶೋರ್ ಚೌಧರಿ, ಎಸ್ ಪಿ ಆನಂದ್ ಕುಮಾರ್ ಮತ್ತು ಇತರ ಅಧಿಕಾರಿಗಳು ವೈದ್ಯರ ತಂಡದೊಂದಿಗೆ ಭೇಟಿ ನೀಡಿದ್ದಾರೆ. ಇತ್ತ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.