ಬೆಂಗಳೂರು : ಹೊಂಗಸಂದ್ರದಲ್ಲಿ ಕೊರೊನಾ ಆತಂಕ ಸೃಷ್ಟಿಸಿದ್ದ ಬಿಹಾರಿ ಮೂಲದ ಸೋಂಕಿತನ ಸಂಪರ್ಕದಲ್ಲಿದ್ದ ಬಿಹಾರಿಗಳಿಂದ ಪುಂಡಾಟ ಮುಂದುವರೆದಿದೆ. ಬಿಹಾರಿ ಮೂಲದ ಕಾರ್ಮಿಕರನ್ನು ಖಾಸಗಿ ಹೊಟೇಲ್ ವೊಂದರಲ್ಲಿ ಕ್ವಾರಂಟೈನ್ ಮಾಡಿದ್ದು, ಕೆಲ ಪುಂಡರು ಸಹಾಯ ಮಾಡಲು ಬಂದ ಸ್ವಯಂಸೇವಕರ ಮೇಲೆಯೇ ಉಗುಳಿ ದುಷ್ಕೃತ್ಯ ನಡೆಸಿದ್ದಾರೆ.
ಬಿಹಾರಿ ಮೂಲದ 419ನೇ ಸೋಂಕಿತನ ಸಂಪರ್ಕದಲ್ಲಿದ್ದ ಹಿನ್ನಲೆಯಲ್ಲಿ ಬಿಹಾರಿ ಮೂಲದ ಕಾರ್ಮಿಕರನ್ನು ಕರೆದೊಯ್ದು ಖಾಸಗಿ ಹೊಟೇಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ, ಈ ಕಾರ್ಮಿಕರು ದಿನೇ ದಿನೇ ವಿಚಿತ್ರ ಬೇಡಿಕೆಗಳನ್ನು ಇಡುತ್ತಿದ್ದಾರೆ. ಕೆಲವರು ಬ್ರಾಡೆಂಡ್ ಬಟ್ಟೆ, ಗೋಬಿ, ಬಾಳೆಹಣ್ಣು, ಸಿಗರೇಟು, ಚಿಪ್ಸ್, ಮೊಬೈಲ್ ಚಾರ್ಜರ್, ಸೇರಿದಂತೆ ಇತರೆ ಅನಾವಶ್ಯಕ ವಸ್ತುಗಳನ್ನು ನೀಡುವಂತೆ ಪಟ್ಟು ಹಿಡಿಯುತ್ತಿದ್ದಾರಂತೆ. ಇನ್ನು ಈ ಬಿಹಾರಿ ಮೂಲದ ಕಾರ್ಮಿಕರು ಕೊರೊನಾ ವಾರಿಯರ್ಸ್ ಗೆ ತಲೆನೋವಾಗಿ ಪರಿಣಿಮಿಸಿದ್ದು, ಅವರ ಮನವೊಲಿಕೆಗೆ ಹರಸಾಹಸ ನಡೆಸಬೇಕಿದೆ. ಕ್ವಾರೆಂಟೈನ್ ನಲ್ಲಿರುವ ಕಾರ್ಮಿಕರ ಪೈಕಿ ಮೂವರಂತೂ ಪದೇ ಪದೇ ಕಿರಿಕ್ ಮಾಡುತ್ತಲೇ ಇದ್ದಾರೆಂದು ಕೊರೊನಾ ವಾರಿಯರ್ಸ್ ಗೆ ಸಹಾಯ ಮಾಡಲು ಮುಂದಾಗಿರುವ ಸ್ಥಳೀಯರು ತಿಳಿಸಿದ್ದಾರೆ.
ಸ್ಥಳೀಯರು ನೀಡುವ ಮಾಹಿತಿ ಪ್ರಕಾರ.. ಕ್ವಾರೆಂಟೈನ್ ನಲ್ಲಿರುವವರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ತಾವು ಬಿಬಿಎಂಪಿ ಅಧಿಕಾರಿಗಳಿಗೆ ಸಹಕಾರ ನೀಡುತ್ತಿದ್ದೇವೆ. ಈ ವೇಳೆ ಬಿಹಾರಿ ಕಾರ್ಮಿಕರು ವಿನಾಕಾರಣ ಕಿರಿಕ್ ತೆಗೆಯುತ್ತಾರೆ. ಅವರನ್ನು ವಿಚಾರಿಸಿದರೆ ಒಂದಿಲ್ಲೊಂದು ಬೇಡಿಕೆ ಒಡ್ಡುತ್ತಾರೆ. ಅಲ್ಲದೇ ಸಿಟ್ಟಾಗಿ ತಮ್ಮ ಮೇಲೆ ಉಗುಳಿ ಪುಂಡತನ ಮೆರೆದಿದ್ದಾರೆ ಎಂದು ವಿವರಿಸಿದ್ದಾರೆ.