ಬಾಂಬ್ ನಂತೆ ಸ್ಪೋಟಗೊಂಡಿತು ರಾಯಲ್ ಎನ್ ಫೀಲ್ಡ್ ಬೈಕ್ ( VIDEO )

1 min read

ಬಾಂಬ್ ನಂತೆ ಸ್ಪೋಟಗೊಂಡಿತು ರಾಯಲ್ ಎನ್ ಫೀಲ್ಡ್ ಬೈಕ್ ( VIDEO )

ರಾಯಲ್ ಎನ್‌ಫೀಲ್ಡ್ ಬುಲೆಟ್‌ ಗೆ ಬೆಂಕಿ ತಗುಲಿ ಇದ್ದಕ್ಕಿದ್ದಂತೆ ಬ್ಲಾಸ್ ಆಗಿರುವ ವೀಡಿಯೋ ವೈರಲ್ ಆಗಿದೆ. ಆಂಧ್ರಪ್ರದೇಶದ ಅನಂತಪುರದಲ್ಲಿರುವ ಕಸಪುರಂ ಆಂಜನೇಯ ಸ್ವಾಮಿ ದೇವಸ್ಥಾನದ ಹೊರಗಡೆ ನಿಲ್ಲಿಸಿದಾಗ  ಬುಲ್ಲೆಟ್ ಬೈಕ್ ಗೆ ಬೆಂಕಿ ಹೊತ್ತಿಕೊಂಡು ಈ ಘಟನೆ ನಡೆದಿದೆ. ಏಕಾಏಕಿ ಬೆಂಕಿ ತಗುಲಿ ಬೈಕ್  ಸ್ಫೋಟಗೊಂಡಿರುವ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕರ್ನಾಟಕದ ಮೈಸೂರಿನ ಬೈಕ್ ಸವಾರ ರವಿಚಂದ್ರ ಅವರು  ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ ಖರೀದಿಸಿದ ನಂತರ 387 ಕಿ.ಮೀ. ದೂರದಲ್ಲಿರುವ ಆಂಧ್ರಪ್ರದೇಶದ ಅನಂತಪುರದಲ್ಲಿರುವ ಕಸಪುರಂ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ  ಪೂಜೆ ಸಲ್ಲಿಸಿಲು  ಆಗಮಿಸಿದ್ದರು. ಯುಗಾದಿಯಂದು ರಥಯಾತ್ರೆಯನ್ನು ಆಯೋಜಿಸಲಾಗುತ್ತದೆ. ದೂರದ  ಊರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.  ಅದೇ ರೀತಿ ರವಿಚಂದ್ರ ಕೂಡ ಪೂಜೆಗೆ ಆಗಮಿಸಿದ್ದರು.  ಪೂಜೆಗೆ ತಯಾರಿ ಮಾಡಿಕೊಳ್ಳುವಾಗ ಧೀಡಿರ್ ಎಂದು ಬೈಕ್ ಗೆ ಬೆಂಕಿ ತಗುಲಿದೆ.

ಬುಲೆಟ್ ನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡು ದೇವಸ್ಥಾನದ ಹೊರಗೆ ಗೊಂದಲದ ವಾತಾವರಣ ಉಂಟಾಯಿತು. ಕೆಲವು ಸೆಕೆಂಡುಗಳ ಬಾಂಬ್ ಸ್ಪೋಟಗೊಂಡಂತೆ ಪ್ರಬಲವಾಗಿ  ಸ್ಫೋಟ ಸಂಭವಿಸಿತು.  ಸ್ಫೋಟದ ತೀವ್ರತೆ ಬೆಚ್ಚಿಬಿದ್ದು ಜನ  ಓಡಲಾರಂಭಿಸಿದರು. ಬೈಕ್  ಬಳಿ ನಿಲ್ಲಿಸಿದ್ದ ಇತರ ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿತಾದರೂ ನಿಯಂತ್ರಣಕ್ಕೆ ತರಲಾಗಿದೆ.

ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ತಗುಲಿದ 3 ಘಟನೆಗಳು ವರದಿಯಾಗಿವೆ. ಈ ಹಿಂದೆ ಪುಣೆಯಲ್ಲಿ ಓಲಾ ಇ-ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ವರದಿಯಾಗಿತ್ತು. ಕೆಲವು ದಿನಗಳ ನಂತರ, ವೆಲ್ಲೂರ್‌ನಿಂದ ಇದೇ ರೀತಿಯ ಪ್ರಕರಣ ವರದಿಯಾಗಿದೆ, ಇದರಲ್ಲಿ ಓಕಿನಾವಾದಲ್ಲಿ ಇ-ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿತು. ಇದಾದ ಬಳಿಕ ಪ್ಯೂರ್ ಇವಿ ಇ-ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡ ಘಟನೆಯೂ ಮುನ್ನೆಲೆಗೆ ಬಂದಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd